Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20 2026: ಹುಬ್ಬಳ್ಳಿ ಜಯದಲ್ಲಿ ಮಿಂಚಿದ ವೈಭವ್ ಶರ್ಮಾ, ಮಯಾಂಕ್‌ ಮಿಂಚು

ಹುಬ್ಬಳ್ಳಿ: ಸ್ಟಾರ್ ಆಟಗಾರ ಮಯಾಂಕ್ ಅಗರ್‌ವಾಲ್‌ ಹಾಗೂ ಮೊಹಮ್ಮದ್ ತಹಾ ಅವರು ಬಾರಿಸಿದ ಅರ್ಧಶತಕದ ಬಲದಿಂದ ಹುಬ್ಬಳ್ಳಿ ಟೈಗರ್ಸ್‌ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 10 ವಿಕೆಟ್‌ಗಳಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಹುಬ್ಬಳ್ಳಿ ಟೈಗರ್ಸ್ ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾಗಿದೆ. ಹುಬ್ಬಳ್ಳಿ ಟೈಗರ್ಸ್‌ ಆಡಿದ 5 ಪಂದ್ಯಗಳಲ್ಲಿ 2 ಜಯ, 2 ಸೋಲು, 1 ಪಂದ್ಯ ರದ್ದಾಗಿದ್ದು, 5 ಅಂಕಗಳನ್ನು ಕಲೆ ಹಾಕಿದೆ.

ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್‌ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ನಾಯಕನ ನಿರ್ಧಾರವನ್ನು ಹುಬ್ಬಳ್ಳಿ ತಂಡದ ವೇಗದ ಬೌಲರ್‌ಗಳು ಅಮೋಘ ದಾಳಿಯನ್ನು ಸಂಘಟಿಸಿದರು. 19 ವರ್ಷದ ಬೌಲರ್ ವೈಭವ್ ಶರ್ಮಾ ಬಿಗುವಿನ ದಾಳಿ ನಡೆಸಿದರು. ಇವರು ಟಾಪ್‌ ಆರ್ಡರ್‌ ಬ್ಯಾಟರ್‌ಗಳಾದ ಲೋಚನ್ ಗೌಡ (6), ಶರತ್ ಬಿಆರ್ (2), ಪ್ರಖರ ಚತುರ್ವೇದಿ (9), ರನ್‌ ಕಲೆ ಹಾಕುವಲ್ಲಿ ವಿಫಲರಾದರು.

Mayank Agarwal

ಗುಲ್ಬರ್ಗಾ 28 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ತಿಪ್ಪಾ ರೆಡ್ಡಿ ಹಾಗೂ ಮ್ಯಾಕ್ನೀಲ್ ನೊರೊನ್ಹಾ ಜೋಡಿ 4ನೇ ವಿಕೆಟ್‌ಗೆ 31 ಎಸೆತಗಳಲ್ಲಿ 30 ರನ್‌ ಸಿಡಿಸಿತು. ಐದನೇ ವಿಕೆಟ್‌ಗೆ ತಿಪ್ಪಾ ರೆಡ್ಡಿ ಹಾಗೂ ಮನೀಷ್ ಪಾಂಡೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಜೋಡಿ 24 ಎಸೆತಗಳಲ್ಲಿ 44 ರನ್‌ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ತಿಪ್ಪಾ ರೆಡ್ಡಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 51 ರನ್‌ ಸಿಡಿಸಿದರು. ನಾಯಕ ಮನೀಷ್ ಪಾಂಡೆ 3 ಸಿಕ್ಸರ್ ನೆರವಿನಿಂದ ಅಜೇಯ 35 ರನ್‌ ಬಾರಿಸಿದರು.

ಗುಲ್ಬರ್ಗಾ ಮಿಸ್ಟಿಕ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 139 ರನ್‌ ಸೇರಿಸಿತು. ಯುವ ವೇಗದ ಬೌಲರ್ ವೈಭವ್ ಶರ್ಮಾ 3 ಓವರ್ ಬೌಲಿಂಗ್ ನಡೆಸಿ 9 ರನ್ ನೀಡಿ 3 ವಿಕೆಟ್‌ ಕಬಳಿಸಿದರು.

Mayank Agarwal

ಭರ್ಜರಿ ಜೊತೆಯಾಟ

ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭಿಕರಾದ ಮಯಾಂಕ್ ಅಗರ್‌ವಾಲ್‌ ಹಾಗೂ ಮೊಹಮ್ಮದ್ ತಹಾ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿತು. ಅಲ್ಲದೆ 12.1 ಓವರ್‌ಗಳಲ್ಲಿ 143 ರನ್‌ ಸಿಡಿಸಿ ಜಯ ಸಾಧಿಸಿತು. ಮಯಾಂಕ್ ಅಗರ್‌ವಾಲ್‌ 38 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 81 ರನ್‌ ಸಿಡಿಸಿದರು. ಮೊಹಮ್ಮದ್ ತಹಾ 4 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ ಅಜೇಯ 57 ರನ್‌ ಬಾರಿಸಿದರು.

Story first published: Monday, June 29, 2026, 23:50 [IST]
Other articles published on Jun 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+