ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್


ಮೆಲ್ಬೋರ್ನ್, ಡಿಸೆಂಬರ್ 26: ಕರ್ನಾಟಕ ಯುವ ಪ್ರತಿಭೆ ಮಯಾಂಕ್ ಅಗರವಾಲ್ ಅವರ ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮಯಾಂಕ್ ಅವರು ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ ನಲ್ಲೇ ಅರ್ಧಶತಕ ಬಾರಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಉತ್ತಮ ಪ್ರದರ್ಶನ ನೀಡಿದರು.
ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಫಲರಾದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮಯಾಂಕ್ ಅಗರವಾಲ್ ಮತ್ತು ಹನುಮ ವಿಹಾರಿ ಅವರಿಗೆ ಇನಿಂಗ್ಸ್ ಆರಂಭಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.
ಹನುಮ ವಿಹಾರಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರವಾಲ್ ಪದಾರ್ಪಣೆ ಪಂದ್ಯದಲ್ಲಿ ಮಿಂಚಿ 76 ರನ್ ಗಳಿಸಿದರು.
1947ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಅಮಿರ್ ಇಲಾಹಿ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಇದಾದ ಬಳಿಕ ಮಯಾಂಕ್ ಅಗರವಾಲ್ ಅವರು ಡಿಸೆಂಬರ್ 26ರಂದು ಈ ಸ್ಥಾನ ತುಂಬಿದಿದ್ದಾರೆ. 295ನೇ ಆಟಗಾರನಾಗಿ ಸೇರ್ಪಡೆಗೊಂಡಿದ್ದಾರೆ.

295ನೇ ಭಾರತೀಯ ಕ್ರಿಕೆಟರ್ ಆಗಿ ಮಯಾಂಕ್
1947ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಅಮಿರ್ ಇಲಾಹಿ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಇದಾದ ಬಳಿಕ ಮಯಾಂಕ್ ಅಗರವಾಲ್ ಅವರು ಡಿಸೆಂಬರ್ 26ರಂದು ಈ ಸ್ಥಾನ ತುಂಬಿದ್ದಾರೆ. 295ನೇ ಆಟಗಾರನಾಗಿ ಸೇರ್ಪಡೆಗೊಂಡಿದ್ದಾರೆ.

ಭಾರತದ ಪರ ಚೊಚ್ಚಲ ಪಂದ್ಯದಲ್ಲಿ ಅಧಿಕ ರನ್
ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಪಂದ್ಯವಾಡಿದ ಆಟಗಾರರ ಪೈಕಿ ಮಯಾಂಕ್ ಅಗರವಾಲ್ (76) ಅತ್ಯಧಿಕ ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ 1947ರಲ್ಲಿ ದತ್ತು ಫಾಡ್ಕರ್ ಅವರು ಸಿಡ್ನಿ ಟೆಸ್ಟ್ ನಲ್ಲಿ 51ರನ್ ಗಳಿಸಿದ್ದು ಅತ್ಯಧಿಕ ರನ್ ಆಗಿತ್ತು.
ನಾಯಕನಾಗಿ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಬಾಕ್ಸಿಂಗ್ ಡೇ ದಿನದಂದು ಮೊದಲ ಪಂದ್ಯ
ಬಾಕ್ಸಿಂಗ್ ಡೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಹೃಷಿಕೇಶ್ ಕಾನಿಕ್ಟರ್(1999) ಹಾಗು ಕೆಎಲ್ ರಾಹುಲ್ (2014)ಅವರು ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಆದರೆ, ಮಯಾಂಕ್ ಅಗರವಾಲ್ (2018) ಮಾತ್ರ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಚೊಚ್ಚಲ ಪಂದ್ಯದಲ್ಲೇ 50 ಪ್ಲಸ್ ರನ್ ಗಳಿಸಿದವರು
ಶಿಖರ್ ಧವನ್ 187, ಪೃಥ್ವಿ ಶಾ 134, ಇಬ್ರಾಹಿಂ 85, ಸುನಿಲ್ ಗವಾಸ್ಕರ್ 63, ಹುಸೇನ್ 59, ಮಯಂಕ್ ಅಗರವಾಲ್ 76.
76ರನ್ ಎರಡನೇ ಅತಿ ಹೆಚ್ಚು(ಆರಂಭಿಕ ಆಟಗಾರ, ವಿದೇಶಿ ನೆಲದಲ್ಲಿ) ಸ್ಕೋರ್ ಆಗಿದ್ದು, ಸುಧೀರ್ ನಾಯ್ಕ್ ಅವರು 1974ರಲ್ಲಿ ಇಂಗ್ಲೆಂಡ್ ವಿರುದ್ಧ 1974ರಲ್ಲಿ 77ರನ್ ಗಳಿಸಿದ್ದರು.

ಎಂಸಿಜಿಯಲ್ಲಿ 76ರನ್ ಗಳಿಸಿದ ಸಾಧನೆ
ಎಂಸಿಜಿಯಲ್ಲಿ ಚೊಚ್ಚಲ ಪಂದ್ಯವಾಡಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಮಯಾಂಕ್ ಅಗರವಾಲ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. 1908ರಲ್ಲಿ ಇಂಗ್ಲೆಂಡ್ ಆಟಗಾರ ಸರ್ ಜಾಕ್ ಹಾಬ್ಸ್ 83ರನ್ ಹಾಗೂ 1968ರಲ್ಲಿ ವೆಸ್ಟ್ ಇಂಡೀಸ್ ಆಟಗಾರ ರಾಯ್ ಫ್ರೆಡೆರಿಕ್ಸ್ 76ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications