Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mayank Agarwal: ಮಯಾಂಕ್‌ ಅಗರ್‌ವಾಲ್‌ಗೆ ಫ್ಲೈಯಿಂಗ್ ಕಿಸ್‌ ನೀಡಿ ಕಾಲೆಳೆದ ಹಿಟ್‌ಮ್ಯಾನ್‌

ಕ್ರಿಕೆಟ್‌ ಅಂಗಳದಲ್ಲಿ ಡಿಫ್ರೆಂಟ್‌ ಟೈಪ್‌ ಆಫ್‌ ಸೆಲಬ್ರೇಷನ್‌ಗಳು ಇರುತ್ತವೆ. ಈ ಸೆಲೆಬ್ರೇಷನ್‌ಗಳು ಕೆಲವೊಮ್ಮೆ ಸಖತ್ ವೈರಲ್‌ ಆಗುತ್ತವೆ. ಈಗ ಭಾರತದಲ್ಲಿ ಐಪಿಎಲ್‌ ನಡೆಯುತ್ತಿದೆ. ಈ ಲೀಗ್‌ನಲ್ಲೂ ಸಹ ಆಟಗಾರರು ಡಿಫ್ರೆಂಟ್‌ ಟೈಪ್ ಆಫ್‌ ಸೆಲೆಬ್ರೇಷನ್ ಮಾಡಿ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಇನ್ನು ಕೆಲವೊಮ್ಮೆ ಟ್ರೋಲ್‌ ಆಗುತ್ತಾರೆ. ಪ್ರಸಕ್ತ ಸಾಲಿನ ಆರಂಭದಲ್ಲಿ ಸಖತ್‌ ವೈರಲ್‌ ಆಗಿರುವ ಸೆಲೆಬ್ರೇಷನ್‌ ಹರ್ಷಿತ್ ರಾಣಾ ಅವರದ್ದು.

ಟೀಮ್ ಇಂಡಿಯಾದ ಸ್ಟಾರ್‌ ಆಟಗಾರ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಎಸ್‌ಆರ್‌ಎಚ್‌ ತಂಡದ ಪರ ಆಡುತ್ತಿದ್ದದಾರೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ಬೌಲರ್‌, ಮಯಾಂಕ್‌ಗೆ ಖೆಡ್ಡಾ ತೋಡಿದರು. ಈ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಎಸ್‌ಆರ್‌ಎಚ್ ತಂಡದ ಮಯಾಂಕ್‌ ಭರ್ಜರಿ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರು. ಹರ್ಷಿತ್‌ ರಾಣಾ ಶಾರ್ಟ್‌ ಬೌಲ್‌ ಎಸೆದರು, ಮಯಾಂಕ್‌ ಈ ಎಸೆತವನ್ನು ಪುಲ್‌ ಶಾಟ್‌ ಹೊಡೆದರು. ಆದರೆ ಮಯಾಂಕ್‌ ಚೆಂಡನ್ನು ಅಟ್ಟಿದ ಕಡೆಯಲ್ಲಿ ಬೌಂಡರಿ ದೊಡ್ಡದಾಗಿತ್ತು. ಚೆಂಡು ರಿಂಕು ಸಿಂಗ್‌ ಕೈ ಸೇರಿತು.

Mayank Agarwal Hitman gave flying kiss to Mayank Agarwal

ಹರ್ಷಿತ್‌ ಸೆಲಬ್ರೇಷನ್‌

ಮಯಾಂಕ್‌ ಅಗರ್‌ವಾಲ್‌ ಔಟ್ ಆಗುತ್ತಿದ್ದಂತೆ ಹರ್ಷಿತಾ ರಾಣಾ ಫ್ಲೈಯಿಂಗ್ ಕಿಸ್‌ ನೀಡಿ ಅವರನ್ನು ಬಿಳ್ಕೋಟ್ಟರು. ಈ ದೃಶ್ಯ ಸಖತ್‌ ವೈರಲ್ ಆಗಿತ್ತು. ಇದರ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಪಂದ್ಯದ ನಂತರ ಹರ್ಷಿತ್ ರಾಣಾ ಅವರ ವರ್ತನೆಗೆ ದಂಡ ವಿಧಿಸಲಾಯಿತು. ಮಯಾಕ್‌ ಅವರನ್ನು ರೋಹಿತ್ ಶರ್ಮಾ ಸಹ ಇದೇ ರೀತಿ ಪೋಸ್ ನೀಡಿ ಗೇಲಿ ಮಾಡಿದರು.

ಅಭ್ಯಾಸದ ವೇಳೆ ರೋಹಿತ್‌ ತಮಾಷೆ

ಐಪಿಎಲ್ 2024ರ 8ನೇ ಪಂದ್ಯ ಬುಧವಾರ ಹೈದರಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಉಭಯ ತಂಡಗಳು ಋತುವಿನ ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ. ಈ ಪಂದ್ಯಕ್ಕೂ ಮುನ್ನ ತಮಾಷೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Mayank Agarwal Hitman gave flying kiss to Mayank Agarwal

ಮುಂಬೈ ಮತ್ತು ಹೈದರಾಬಾದ್ ನಡುವಿನ ಪಂದ್ಯದ ಮೊದಲು, ಅಭ್ಯಾಸದ ಅವಧಿಯಲ್ಲಿ ರೋಹಿತ್ ಮತ್ತು ಮಯಾಂಕ್ ಭೇಟಿಯಾದಾಗ ಫ್ಲೈಯಿಂಗ್ ಕಿಸ್ ನೀಡಿದ್ದು ಬೆಳಕಿಗೆ ಬಂದಿತು. ಈ ಸಂದರ್ಭದಲ್ಲಿ, ರೋಹಿತ್ ತಮ್ಮ ಮಾಜಿ ಟೆಸ್ಟ್ ಜೊತೆಗರನನ್ನು ಮಾಷೆ ಮಾಡಿದರು ಮತ್ತು ಅವರಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅವರನ್ನು ರಂಜಿಸಿದರು.

ರೋಹಿತ್ ಶರ್ಮಾ ಫ್ಲೈಯಿಂಗ್ ಕಿಸ್ ನೀಡುತ್ತಿರುವ ಈ ಚಿತ್ರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರೋಹಿತ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾದ ಹಾರ್ದಿಕ್ ಪಾಂಡ್ಯ ಅವರನ್ನು ನೆಟ್ಟಿಗರೂ ಇಲ್ಲಿಯೂ ಟಾರ್ಗೆಟ್‌ ಮಾಡಿದ್ದಾರೆ.

Story first published: Wednesday, March 27, 2024, 13:56 [IST]
Other articles published on Mar 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+