'ಈತ ಭಾರತದಲ್ಲಿ ಬಾಸ್, ವಿದೇಶದಲ್ಲಿ ರನ್ ಗಳಿಸಲಾರ': ಪ್ರಮುಖ ಆಟಗಾರನ ಬಗ್ಗೆ ಗವಾಸ್ಕರ್ ಮಾತು

ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹರಿಣಗಳ ವಿರುದ್ಧ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಯಾರೂ ಊಹಿಸಿರದ ರೀತಿ ಸೋತ ನಂತರ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೌದು, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ವಿರಾಟ್ ಕೊಹ್ಲಿ ಸ್ವಇಚ್ಛೆಯಿಂದ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಹೀಗೆ ಕೊಹ್ಲಿ ನಂತರ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾದರು. ಕೇವಲ ನಾಯಕನ ಬದಲಾವಣೆ ಮಾತ್ರವಲ್ಲದೇ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರು ಎನಿಸಕೊಂಡಿದ್ದ ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ, ವೃದ್ಧಿಮಾನ್ ಸಹಾ ಮತ್ತು ಇಶಾಂತ್ ಶರ್ಮಾ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಸೋಲಿನ ನಂತರ ತಂಡದಿಂದ ಹೊರಬಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯಾ ರಹಾನೆ ಸ್ಥಾನದಲ್ಲಿ ಶ್ರೇಯಸ್ ಐಯ್ಯರ್ ಕಣಕ್ಕಿಳಿದರೆ, ಚೇತೇಶ್ವರ್ ಪೂಜಾರ ಕಣಕ್ಕಿಳಿಯುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಹನುಮ ವಿಹಾರಿ ಬ್ಯಾಟ್ ಬೀಸಿದರು.
ಇನ್ನು ಸದ್ಯ ಸಾಕಷ್ಟು ಬದಲಾವಣೆಗಳಿಗೆ ಒಳಗಾಗಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿದ ಟೀಮ್ ಇಂಡಿಯಾ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸಹಿತ ೨೨೨ ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಕೇವಲ ಒಂದು ಇನ್ನಿಂಗ್ಸ್ ಮಾತ್ರ ಬ್ಯಾಟಿಂಗ್ ಮಾಡಿ ಎದುರಾಳಿ ಶ್ರೀಲಂಕಾವನ್ನು ಫಾಲೋಆನ್‌ಗೆ ಒಳಪಡಿಸಿ ಬೃಹತ್ ಅಂತರದ ಜಯ ಸಾಧಿಸಿದೆ. ಹೀಗೆ ಪ್ರಮುಖ ಆಟಗಾರರಿಲ್ಲದೇ ಕಣಕ್ಕಿಳಿದ ಟೀಮ್ ಇಂಡಿಯಾ ಜಯ ಸಾಧಿಸಿರುವುದು ಕಳಪೆ ಫಾರ್ಮ್‌ನಿಂದಾಗಿ ಸ್ಥಾನ ಕಳೆದುಕೊಂಡ ಆಟಗಾರರಿಗೆ ತಂಡದ ಬಾಗಿಲು ಮತ್ತಷ್ಟು ಮುಚ್ಚುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಈ ವಿಷಯದ ಕುರಿತಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಕುರಿತು ಮಾತನಾಡಿ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಗಿಲ್ ಬದಲು ಅಗರ್ವಾಲ್ ಆರಂಭಿಕ ಆಟಗಾರನಾಗಿದ್ದು ಉತ್ತಮ
ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅಲಭ್ಯತೆ ಕಾರಣ ಆರಂಭಿಕನಾಗಿ ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಈ ಸಂದರ್ಭದಲ್ಲಿ ಕೆಲವರು ಮಯಾಂಕ್ ಅಗರ್ವಾಲ್ ಬದಲು ಶುಬ್ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸತೊಡಗಿದರು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್ ಶುಬ್‌ಮನ್ ಗಿಲ್ ಕಳೆದ ೨ ತಿಂಗಳಲ್ಲಿ ಯಾವುದೇ ಕ್ರಿಕೆಟ್ ಆಡಿಲ್ಲ, ಆತ ರಣಜಿ ಟ್ರೋಫಿಯಲ್ಲೂ ಕೂಡ ಪಾಲ್ಗೊಂಡಿಲ್ಲ, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕಣಕ್ಕಿಳಿಯದ ಶುಬ್‌ಮನ್ ಗಿಲ್‌ಗೆ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ.

ಮಯಾಂಕ್ ಅಗರ್ವಾಲ್ ತವರಿನಲ್ಲಿ ಬಾಸ್
ಹೀಗೆ ಶುಬ್‌ಮನ್ ಗಿಲ್ ಕುರಿತು ಮಾತನಾಡಿರುವ ಸುನಿಲ್ ಗವಾಸ್ಕರ್ ಮಯಾಂಕ್ ಅಗರ್ವಾಲ್ ಭಾರತ ದೇಶದ ಪಿಚ್‌ಗಳಲ್ಲಿ ಬಾಸ್ ರೀತಿ ಬ್ಯಾಟ್ ಬೀಸಿ ರನ್ ಗಳಿಸಬಲ್ಲ ಆಟಗಾರ ಎಂದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಮಯಾಂಕ್ ಅಗರ್ವಾಲ್ ಸ್ವದೇಶಿ ನೆಲದಲ್ಲಿ ಯಾವಾಗಲೂ ದೊಡ್ಡ ರನ್ ಗಳಿಸಬಲ್ಲ ಆಟಗಾರ ಎಂದಿರುವ ಸುನಿಲ್ ಗವಾಸ್ಕರ್ ಆತ ವಿದೇಶಿ ನೆಲದಲ್ಲಿ ರನ್ ಗಳಿಸಲಾರ ಎಂದಿದ್ದಾರೆ. ಹೀಗಾಗಿ ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

ಹನುಮ ವಿಹಾರಿ ಪರ ಬ್ಯಾಟ್ ಬೀಸಿದ ಗವಾಸ್ಕರ್
ಇನ್ನೂ ಮುಂದುವರೆದು ಮಾತನಾಡಿರುವ ಸುನಿಲ್ ಗವಾಸ್ಕರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ ಪರ ಬ್ಯಾಟ್ ಬೀಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಹನುಮ ವಿಹಾರಿಗೆ ಅವಕಾಶಗಳು ಸಿಗಲೇಬೇಕು ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಹನುಮ ವಿಹಾರಿ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ೫೮ ರನ್ ಕಲೆಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications