Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mayank Agarwal: ಮಹಾಕುಂಭದಲ್ಲಿ ಕನ್ನಡಿಗ ಮಯಾಂಕ್ ಭಾಗಿ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪ್ರತಿದಿನವೂ ಕೋಟ್ಯಂತರ ಮಂದಿ ಭಕ್ತಾದಿಗಳು ಪವಿತ್ರ ಸ್ನಾನ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಮಯಾಂಕ್ ಅರ್ಗವಾಲ್ ಭಾಗಿಯಾಗಿದ್ದಾರೆ. ಸಂಗಮದಲ್ಲಿ ಮಯಾಂಕ್ ಪುಣ್ಯ ಸ್ನಾನ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಯಾಂಕ್ ನದಿಯಲ್ಲಿ ಭಕ್ತಿಯಿಂದ ಕೈ ಮುಗಿದು ನಿಂತಿರುವ ಫೋಟೋಗಳು ಎಲ್ಲರ ಗಮನ ಸೆಳೆದಿವೆ.

ಮಯಾಂಕ್ ಅರ್ಗವಾಲ್ ಮಹಾಕುಂಭ ಮೇಳದಲ್ಲಿ ಭಾಗಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Mayank Agarwal participating Mahakumbha Mela in Prayagraj Uttar Pradesh

ಮಯಾಂಕ್ ಹಂಚಿಕೊಂಡಿರುವ ಎರಡು ಫೋಟೋಗಳಲ್ಲಿ ಅವರು ಕೊರಳಲಿ ಮಾಲೆ ಧರಿಸಿದ್ದಾರೆ. ಅಲ್ಲದೆ, ಅವರು ಕೊರೆಯುವ ಚಳಿಯಲ್ಲಿ ಪ್ಯಾಂಟ್ ಮಾತ್ರ ಧರಿಸಿ ನದಿಯಲ್ಲಿ ನಿಂತಿದ್ದಾರೆ. ಫೋಟೋವೊಂದರಲ್ಲಿ 'ಸಂಗಮದಲ್ಲಿ ಮಧ್ಯರಾತ್ರಿ ಸ್ನಾನ' ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಭಾಗಿವಹಿಸಿದ್ದರು. ಈ ವೇಳೆ ಅವರು ಪ್ರವಿತ್ರ ಸ್ನಾನ ಮುಗಿಸಿ ಬಡೇ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರೈನಾ ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾದ ಜಯ್ ಶಾ ಕೂಡ ತ್ರಿವೇಣಿ ಸಂಗಮದಲ್ಲಿ ಆರತಿ ಸೇರಿದಂತೆ ವಿವಿಧ ಆಚರಣೆಗಳಲ್ಲಿ ಭಾಗವಹಿಸಿದ್ದರು.

ಮಯಾಂಕ್‌ ಅಗರ್‌ವಾಲ್‌ ವಿಜಯ್‌ ಹಾಜರೆ ಟ್ರೋಫಿ ಟೂರ್ನಿಯಲ್ಲಿ ಅಬ್ಬರಿಸಿದ್ದರು. ಅವರಿಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ತಂಡವನ್ನು ಚಾಂಪಿಯನ್ ಮಾಡಿದ್ದರು. ಕರ್ನಾಟಕ ತಂಡದ ನಾಯಕತ್ವದ ವಹಿಸಿದ ಮಯಾಂಕ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು ಆಡಿದ 5 ಪಂದ್ಯಗಳಲ್ಲಿ 428 ರನ್‌ ಗಳಿಸಿದ್ದರು. ಇದರಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ್ದರು.

Story first published: Sunday, February 9, 2025, 14:19 [IST]
Other articles published on Feb 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+