For Quick Alerts
ALLOW NOTIFICATIONS  
For Daily Alerts
 

Mayank Agarwal: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ತಂಡ ಸೇರುತ್ತಾರಾ ಕರ್ನಾಟಕದ ಪ್ಲೇಯರ್?

ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಬೇಕಿದೆ. ಈಗಾಗಲೇ ಇಂಗ್ಲೆಂಡ್ ತಂಡವನ್ನು ಉಭಯ ಸರಣಿಗಳಿಗೆ ಪ್ರಕಟಿಸಲಾಗಿದೆ. ಟೀಮ್ ಇಂಡಿಯಾವನ್ನು ಈ ಸರಣಿಗೆ ಇನ್ನು ಪ್ರಕಟಿಸಬೇಕಿದೆ. ಸದ್ಯ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಈ ವೇಳೆ ಬಾರ್ಡರ್‌ ಗವಾಸ್ಕರ್‌ ಸರಣಿಯ ಆಡುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುತ್ತಿದೆ. ಸಿಡ್ನಿಯಲ್ಲಿ ಟೂರ್ನಿಯ ಐದನೇ ಪಂದ್ಯ ಜನವರಿ 3 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.

ಈ ಸರಣಿಯ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಸೀಮಿತ ಓವರ್‌ಗಳ ಪಂದ್ಯವನ್ನು ಆಡಲಿದೆ. ಈ ವೇಳೆ ಐದು ಪಂದ್ಯಗಳ 1ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ತಂಡವನ್ನು ಆಯ್ಕೆ ಮಾಡುವ ವೇಳೆ ತಮ್ಮನ್ನು ಸಹ ಪರಿಗಣಿಸಿ ಎಂದು ಮಯಾಂಕ್‌ ಅಗರ್‌ವಾಲ್‌ ಆಯ್ಕೆ ಸಮಿತಿಗೆ ಹೇಳುತ್ತಿದ್ದಾರೆ. ಇವರು ದೇಶೀಯ ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ, ಟೀಮ್ ಇಂಡಿಯಾಗೆ ಕಂ ಬ್ಯಾಕ್ ಮಾಡುವ ಯೋಚನೆಯಲ್ಲಿದ್ದಾರೆ.

Mayank Agarwal s Vijay Hazare Heroics Boost India Comeback Hopes

ವಿಜಯ್ ಹಜಾರೆ ಮಯಾಂಕ್ ಅಬ್ಬರ

ಮಯಾಂಕ್‌ ಅಗರ್‌ವಾಲ್‌ ವಿಜಯ್‌ ಹಾಜರೆ ಟ್ರೋಫಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ಇವರಿಗೆ ತಂಡದ ನಾಯಕತ್ವದ ನೀಡಲಾಗಿದೆ. ಇವರ ಮುಂದಾಳತ್ವದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು ವಿಜಯ್ ಹಜಾರೆ ಟೂರ್ನಿಯಲ್ಲಿ ಆರ್ಭಟ ನಡೆಸಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 428 ರನ್‌ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಈ ವೇಳೆ 142.66 ಸರಾಸರಿಯನ್ನು ಹೊಂದಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಬೇಕಿದೆ. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿ ದೇಶೀಯ ಟೂರ್ನಿಯಲ್ಲಿ ಮಿಂಚಿದ ಆಟಗಾರರಿಗೆ ಮಣೆ ಹಾಕುವ ಅನಿವಾರ್ಯತೆ ಇದೆ. ಒಂದು ವೇಳೆ ಇದು ಸಂಭವಿಸಿದಲ್ಲಿ ಮಯಾಂಕ್ ಅಗರ್‌ವಾಲ್‌ ಅವರಿಗೆ ಚಾನ್ಸ್‌ ಸಿಗುವ ಸಾಧ್ಯತೆ ಇದೆ. ಮಯಾಂಕ್‌ ಈಗಾಗಲೇ ಭಾರತದ ಪರ ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿರುವ ಆಟಗಾರ.ಯುವ ಆಟಗಾರರು ಆಗಮನದ ಬಳಿಕ ಇವರಿಗೆ ಅವಕಾಶ ಸಿಗುವುದು ಕಡಿಮೆ ಆಗಿದೆ.

Mayank Agarwal s Vijay Hazare Heroics Boost India Comeback Hopes

ಮಯಾಂಕ್‌ ಸಾಧನೆ

ಮಯಾಂಕ್‌ 2022 ಮಾರ್ಚ್‌ 12 ರಂದು ಭಾರತದ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆ ನಂತರ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಹೀಗಾಗಿ ಈಗ ಮತ್ತೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೆ ದೇಶೀಯ ಟುರ್ನಿಯಲ್ಲಿ ಇವರು ನೀಡಿರುವ ಪ್ರದರ್ಶನ ಇವರನ್ನು ಮತ್ತೆ ಭಾರತ ತಂಡವನ್ನು ಸೇರುವಂತೆ ಮಾಡಬಹುದು ಎಂಬ ಕನಸು ಕಾಣುತ್ತಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಮಯಾಂಕ್‌ ಅಗರ್‌ವಾಲ್‌ ಗರಿಷ್ಠ ರನ್‌ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಗೆ ಹಾಗೂ ಮೊದಲ ಸ್ಥಾನದಲ್ಲಿರುವ ಆಟಗಾರನಿಗೆ ಕೇವಲ ಎರಡು ರನ್ ವ್ಯತ್ಯಾಸ ಇದೆ. ಮಯಾಕ್ ಭಾರತದ ಪರ 21 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 1488 ರನ್‌ ಸೇರಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಇನ್ನು ಐದು ಏಕದಿನ ಪಂದ್ಯಗಳನ್ನು ಆಡಿರುವ ಮಯಾಂಕ್‌ 86 ರನ್‌ ಸಿಡಿಸಿದ್ದಾರೆ.

Story first published: Thursday, January 2, 2025, 6:37 [IST]
Other articles published on Jan 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+