For Quick Alerts
ALLOW NOTIFICATIONS  
For Daily Alerts
 

Mayank Yadav: ಪದಾರ್ಪಣೆ ಪಂದ್ಯದಲ್ಲಿ ಐಪಿಎಲ್‌ ಇತಿಹಾಸದ ಪುಟ ಸೇರಿದ ಮಯಾಂಕ್‌ ಯಾದವ್‌; ಇವರ ಫೆವರೀಟ್‌ ಬೌಲರ್‌ ಯಾರು ಗೊತ್ತಾ?

ಐಪಿಎಲ್‌ 2024ರ 11ನೇ ಪಂದ್ಯ ಇತಿಹಾಸದ ಪುಟ ಸೇರಿದೆ. ಯುವ ವೇಗದ ಬೌಲರ್‌ ಮಯಾಂಕ್ ಯಾದವ್‌ ತಮ್ಮ ಬಿಗುವಿನ ದಾಳಿಯ ಮೂಲಕ ಗಮನ ಸೆಳೆದಿದ್ದಾರೆ. ಸತತ 140 ಪ್ಲಸ್‌ ಬೌಲಿಂಗ್ ದಾಳಿಯನ್ನು ನಡೆಸಿದ ಇವರು ತಮ್ಮಲ್ಲಿರುವ ಕ್ಷಮತೆಯ ಬಗ್ಗೆ ಸಾರಿ ಹೇಳಿದ್ದಾರೆ. ಇವರನ್ನು ನೆಟ್ಟಿಗರು ಭಾರತದ ಶೋಯೆಬ್ ಅಖ್ತರ್ ಎಂದು ಕರೆಯುತ್ತಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಅವರು ತಮ್ಮ ಬೌಲಿಂಗ್ ಮೂಲಕ ಅಚ್ಚರಿ ಮೂಡಿಸಿದೆ.

ಐಪಿಎಲ್ ಇತಿಹಾಸದಲ್ಲಿ 10 ವೇಗದ ಬೌಲರ್‌ಗಳ ಪಟ್ಟಿ ಹೊರ ಬಂದಿದೆ. ಐಪಿಎಲ್ ಇತಿಹಾಸದಲ್ಲಿ ಮಯಾಂಕ್ ಯಾದವ್ ಹೊರತುಪಡಿಸಿ, ತಮ್ಮ ವೇಗದಿಂದ ಸಂಚಲನ ಮೂಡಿಸಿದ ಅನೇಕ ವೇಗದ ಬೌಲರ್‌ಗಳು. ಐಪಿಎಲ್ ಇತಿಹಾಸದಲ್ಲಿ ಟಾಪ್ 10 ವೇಗದ ಬೌಲರ್‌ಗಳಲ್ಲಿ ಮಯಾಂಕ್ ಯಾದವ್ ಯಾವ ಸ್ಥಾನದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Mayank Yadav Makes IPL Debut in Historic Match Who Is His Favorite Bowler

ಶಾನ್‌ ಟೈಟ್‌

ಐಪಿಎಲ್ ಪಂದ್ಯವೊಂದರಲ್ಲಿ ಅತ್ಯಂತ ವೇಗವಾಗಿ ಬೌಲ್ ಮಾಡಿದ ಹೆಗ್ಗಳಿಕೆ ಶಾನ್‌ ಟೈಟ್‌ ಅವರಿಗೆ ಸಲ್ಲುತ್ತದೆ. ಶಾನ್‌ ಟೈಟ್‌ 2011ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದಾಗ ಗಂಟೆಗೆ 157.71 ಕಿ.ಮೀ. ಬೌಲಿಂಗ್ ಮಾಡಿ ಎಲ್ಲರ ಚಿತ್ತ ಕದ್ದಿದ್ದರು.

ಲಾಕಿ ವೇಗದ ದಾಳಿ

ನ್ಯೂಜಿಲೆಂಡ್ ತಂಡದ ವೇಗಿ ಲಾಕಿ ಫಾರ್ಗ್ಯೂಸನ್‌ 2022ರ ಐಪಿಎಲ್‌ನಲ್ಲಿ ವೇಗದ ಬೌಲ್‌ ಎಸೆದು ದಾಖಲೆ ನಿರ್ಮಿಸಿದ್ದಾರೆ. ಕೆಕೆಆರ್‌ ಹಾಗೂ ಆರ್‌ಆರ್‌ ನಡುವಣ ಪಂದ್ಯದಲ್ಲಿ ಲಾಕಿ ಈ ಸಾಧನೆ ಮಾಡಿದ್ದಾರೆ. ಕೆಕೆಆರ್‌ ಪರ ಬೌಲ್‌ ಮಾಡಿದ ಇವರು 157.3 kmph ವೇಗದಲ್ಲಿ ಬೌಲ್‌ ಮಾಡಿದ್ದಾರೆ.

Mayank Yadav Makes IPL Debut in Historic Match Who Is His Favorite Bowler

ಉಮ್ರಾನ್‌ ಮಲಿಕ್‌

ಉಮ್ರಾನ್ ಮಲಿಕ್ ಭಾರತದ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರು ಐಪಿಎಲ್‌ 2022ರಲ್ಲಿ ವೇಗದ ದಾಳಿ ಎಸೆದರು. ಇವರು ಡೆಲ್ಲಿ ವಿರುದ್ಧ ಪಂದ್ಯದಲ್ಲಿ 157 kmph ವೇಗವನ್ನು ಮುಟ್ಟಿ ಸಾಧನೆ ಮಾಡಿದ್ದಾರೆ. ಇನ್ನು ಇದೇ ಐಪಿಎಲ್‌ನಲ್ಲಿ 156 kmph ವೇಗದಲ್ಲಿ ಬೌಲ್ ಮಾಡಿದ್ದರು. ಇವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಭಾರತದ ಪರ ಆಡುವ ಅವಕಾಶ ಲಭಿಸಿತು.

ದಕ್ಷಿಣ ಆಫ್ರಿಕಾ ವೇಗಿಯ ಹವಾ

ಅನ್ರಿಚ್ ನಾರ್ಟ್ಜೆ ದಕ್ಷಿಣ ಆಫ್ರಿಕಾದ ಬೌಲರ್ ಐಪಿಎಲ್‌ನಲ್ಲೂ ತಮ್ಮ ಹವಾ ಕ್ರಿಯೇಟ್ ಮಾಡಿದ್ದಾರೆ. ಅವರು ಐಪಿಎಲ್ 2020 ರ ಉದ್ದಕ್ಕೂ ನಿರಂತರವಾಗಿ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು. ಜೋಸ್ ಬಟ್ಲರ್‌ಗೆ 156.22 ಕಿಮೀ ವೇಗದಲ್ಲಿ ಅನ್ರಿಚ್ ಬೌಲ್ ಮಾಡಿದರು. ಇದು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಎಸೆತವಾಗಿದೆ.

Mayank Yadav Makes IPL Debut in Historic Match Who Is His Favorite Bowler

ಪದಾರ್ಪಣೆ ಪಂದ್ಯದಲ್ಲಿ ಅಬ್ಬರ

ಮಯಾಂಕ್‌ ಯಾದವ್‌ ತಾವಾಡಿದ ಮೊದಲ ಪಂದ್ಯದಲ್ಲಿ ಅಬ್ಬರ ನಡೆಸಿದ್ದಾರೆ. ಇವರು ಪಂಜಾಬ್‌ ವಿರುದ್ಧ ಲಖ್ನೋ ಸೂಪರ್‌ ಜೈಂಟ್ಸ್ ಪರ ಆಡಿದರು. ಸತತ 140ಕ್ಕೂ ಹೆಚ್ಚಿನ ವೇಗದಲ್ಲಿ ದಾಳಿ ಸಂಘಟಿಸಿದರು. ಮಯಾಂಕ್‌ 155.8 kmph ವೇಗದಲ್ಲಿ ಬೌಲ್‌ ಮಾಡಿ ಇತಿಹಾಸದ ಪುಟ ಸೇರಿದ್ದಾರೆ.

ಮಯಾಂಕ್‌ ಯಾದವ್‌ ಅವರ ನೆಚ್ಚಿನ ಕ್ರಿಕೆಟ್‌ ಆಟಗಾರ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್. ಇವರಂತೆ ಕ್ರಿಕೆಟ್‌ ಅಂಗಳದಲ್ಲಿ ಹೆಸರು ಮಾಡುವ ಆಸೆಯನ್ನು ಮಯಾಂಕ್‌ ಕಾಣುತ್ತಿದ್ದಾರೆ.

Story first published: Sunday, March 31, 2024, 15:16 [IST]
Other articles published on Mar 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+