ಕನ್ನಡತಿ ಶ್ರೇಯಾಂಕಾ ಪಾಟೀಲ್ ಜೊತೆಗಿದ್ದವರು ಯಾರು? ಇಲ್ಲಿದೆ ಅಸಲಿ ಮಾಹಿತಿ
ಟೀಮ್ ಇಂಡಿಯಾದ ಇಬ್ಬರು ಆಟಗಾರರ ಫೋಟೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಇಬ್ಬರೂ ಆಟಗಾರರು ತಮ್ಮ ತಮ್ಮ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಒಬ್ಬರು ತಮ್ಮ ವೇಗದ ಬೌಲಿಂಗ್‌ನಿಂದ ಹೆಸರುವಾಸಿಯಾದರೆ, ಇನ್ನೊಬ್ಬರು ತಮ್ಮ ಸ್ಪಿನ್ ಮೂಲಕವೇ ಸದ್ದು ಮಾಡಿದ ಪ್ಲೇಯರ್. ಈ ಇಬ್ಬರೂ ಪ್ಲೇಯರ್‌ಗಳು ಮಹಿಳಾ ಪ್ರೀಮಿಯರ್ ಲೀಗ್ ನೋಡಲು ಬಂದಾಗ ಸೆರೆಯಾದ ದೃಶ್ಯ ಸಾಮಾಜಿಕ ತಾಣದಲ್ಲಿ ಚರ್ಚಾ ವಸ್ತುವಾಗಿದೆ.
ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಲೀಗ್‌ನಲ್ಲಿ ಮೊದಲ ಸೋಲನ್ನು ಕಂಡಿದೆ. ಈ ವೇಳೆ ಪಂದ್ಯವನ್ನು ನೋಡಲು ಹಲವು ಗಣ್ಯರು ಬಂದಿದ್ದರು. ಇದೇ ವೇಳೆ ಶ್ರೇಯಾಂಕಾ ಪಾಟೀಲ್ ಸಹ ಕಾಣಿಸಿಕೊಂಡರು. ಆದರೆ ಇವರ ಪಕ್ಕದಲ್ಲಿ ಕುಳಿತ ಟೀಮ್ ಇಂಡಿಯಾದ ಆಟಗಾರನನ್ನು ಕಂಡು ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡಿದ್ದಾರೆ.

ಆರ್‌ಸಿಬಿ ಹಾಗೂ ಮುಂಬೈ ನಡುವಣ ಪಂದ್ಯದ ವೇಳೆ ಈ ಒಂದು ದೃಷ್ಯ ಸಖತ್ ವೈರಲ್ ಆಯಿತು. ಈ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಪಕ್ಕದಲ್ಲಿ ಸ್ಪಿಡ್ ಗನ್ ಖ್ಯಾತಿಯ ಮಯಾಂಕ್ ಯಾದವ್ ನೋಡಲು ಬಂದಿದ್ದರು. ಈ ಇಬ್ಬರೂ ಆಟಗಾರರು ಅಕ್ಕ ಪಕ್ಕದಲ್ಲಿ ಕುಳಿತು ಕೊಂಡಿದ್ದರು. ಇದಕ್ಕೆ ಸಾಮಾಜಿಕ ತಾಣದಲ್ಲಿ ಹಲವು ಬಣ್ಣಗಳನ್ನು ಹಚ್ಚಲಾಗಿದೆ. ಆದರೆ ಈ ಎಲ್ಲ ಬರೀ ವದಂತಿಗಳು ಅಷ್ಟೇ.
ಏನದು ಅಸಲಿಯತ್ತು?
ಮಯಾಂಕ್ ಯಾದವ್ ಕಳೆದ ಕೆಲವು ದಿನಗಳಲ್ಲಿ ಗಾಯದಿಂದ ಚೇತರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಇವರು ಎನ್‌ಸಿಎನಲ್ಲಿ ತಾಲೀಮು ನಡೆಸುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್ ಸಹ ಗಾಯಕ್ಕೆ ತುತ್ತಾಗಿದ್ದು, ಆರ್‌ಸಿಬಿ ತಂಡದಿಂದ ಹೊರ ನಡೆದಿದ್ದರು. ಇವರು ಸಹ ಎನ್‌ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಈ ಇಬ್ಬರೂ ಆಟಗಾರರು ಸದ್ಯ ಎನ್‌ಸಿಎನಲ್ಲಿ ಚೇತರಿಕೆಯತ್ತ ದೃಷ್ಟಿ ನೆಟ್ಟಿದ್ದಾರೆ. ಈ ಇಬ್ಬರೂ ಮೈದಾನಕ್ಕೆ ಪಂದ್ಯವನ್ನು ನೋಡಿ ಆನಂದಿಸಲು ಬಂದಿದ್ದರು. ಇದನ್ನೇ ಸಾಮಾಜಿಕ ತಾಣದಲ್ಲಿ ಚರ್ಚಾ ವಸ್ತುವಾಗಿದೆ.

ಇನ್ನು ಈ ಇಬ್ಬರೂ ಆಟಗಾರರು ತಮ್ಮ ತಮ್ಮ ಕೆಲಸದತ್ತ ಚಿತ್ತ ನೆಟ್ಟಿದ್ದಾರೆ. ಶ್ರೇಯಾಂಕಾ ಅವರಿಗೆ ಮಹಿಳಾ ಪ್ರೀಮಿಯರ್ ಲೀಗ್ ಮಿಸ್ ಮಾಡಿಕೊಂಡಿದ್ದಾರೆ. ಆದರೆ ಅವರು ಮುಂಬರು ಸರಣಿಗಳಲ್ಲಿ ಟೀಮ್ ಇಂಡಿಯಾ ಪರ ಆಡಲು ತಮ್ಮನ್ನು ಫಿಟ್ ಆಗಿ ಇಟ್ಟುಕೊಳ್ಳಲು ಬೇಕಾದ ತಯಾರಿ ನಡೆಸಿದ್ದಾರೆ.
ಮಯಾಂಕ್ ಯಾದವ್ ಸಹ ಮುಂಬರು ಐಪಿಎಲ್‌ನತ್ತ ದೃಷ್ಟಿ ನೆಟ್ಟಿದ್ದು ಫಿಟ್ನೆಸ್ ಬಗ್ಗೆ ಕೆಲಸವನ್ನು ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications