Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ranji Trophy: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಇನಿಂಗ್ಸ್‌ ಮುನ್ನಡೆ

ಪುಣೆ: ನಾಯಕ ಮಯಾಂಕ್ ಅಗರ್‌ವಾಲ್‌ (ಅಜೇಯ 64) ಇವರ ಉತ್ತಮ ಆಟದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ 157 ರನ್‌ ಮುನ್ನಡೆ ಸಾಧಿಸಿದೆ.

ಮಹಾರಾಷ್ಟ್ರ ಮೂರನೇ ದಿನದಾಟವನ್ನು 6 ವಿಕೆಟ್‌ಗೆ 200 ರನ್‌ಗಳಿಂದ ಮುಂದುವರೆಸಿತು. ಆದರೆ ವಿಕ್ಕಿ ಒಸ್ತವಾಲ್‌ (20) ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆನಯನ್ನು ಅರ್ಧಕ್ಕೆ ಕೈ ಬಿಟ್ಟರು. ಆದರೆ 8ನೇ ವಿಕೆಟ್‌ಗೆ ಜಲಜ್‌ ಸಕ್ಸೆನಾ ಹಾಗೂ ರಾಮಕೃಷ್ಣ ಭರ್ಜರಿ ಜೊತೆಯಾದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಕರ್ನಾಟಕ ತಂಡ ಪ್ಲ್ಯಾನ್ ಎಲ್ಲ ಉಲ್ಟಾ ಆಯಿತು. ಈ ಜೋಡಿ 8ನೇ ವಿಕೆಟ್‌ಗೆ ಶತಕದ ಕಾಣಿಕೆ ನೀಡಿತು. ಜಲಜ್‌ ಸಕ್ಸೆನಾ 10 ಬೌಂಡರಿ ನೆರವಿನಿಂದ 72 ರನ್‌ ಬಾರಿಸಿ ಔಟ್ ಆದರು.

Mayank s Unbeaten 64 Gives Karnataka 157-Run Lead Over Maharashtra in Ranji Trophy

ಕೆಳ ಕ್ರಮಾಂಕದಲ್ಲಿ ರಾಮಕೃಷ್ಣ ಘೋಷ್‌ 4 ಬೌಂಡರಿ, 1 ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಮಹಾರಾಷ್ಟ್ರ 99.2 ಓವರ್‌ಗಳಲ್ಲಿ 300 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 313 ರನ್‌ಗಳಿಸಿತ್ತು. ಹೀಗಾಗಿ ಮಯಾಂಕ್ ಅಹರ್‌ವಾಲ್ ಪಡೆ 13 ರನ್ ಇನಿಂಗ್ಸ್ ಮುನ್ನಡೆ ‍ಸಾಧಿಸಿದೆ. ಕರ್ನಾಟಕದ ಪರ ಶ್ರೇಯಸ್‌ ಗೋಪಾಲ್‌ 4, ಮೊಹ್ಸೊನ್ ಖಾನ್‌ 3, ವಿದ್ವತ್ ಕಾವೇರಪ್ಪ 2 ವಿಕೆಟ್ ಕಬಳಿಸಿದರು.

ಮಯಾಂಕ್ ಅರ್ಧಶತಕ

11 ರನ್‌ಗಳ ಇನಿಂಗ್ಸ್‌ ಮುನ್ನಡೆ ಯೊಂದಿಗೆ ಎಡನೇ ಆನಿಂಗ್ಸ್ ಆರಂಭಿಸಿದ ಕರ್ನಾಟಕದ ಆರಂಭಿಕರು ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದರು. ಕರ್ನಾಟಕದ ಕೆವಿ ಅನೀಶ್‌ (17) ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ಶ್ರೀಜೇತ್‌ (29), ಕರುಣ್‌ ನಾಯರ್‌ (15), ಸ್ಮರಣ್‌ ಆರ್‌ (4), ಅಭಿಲಾಷ್ ಶೆಟ್ಟಿ (4) ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ನಾಯಕ ಮಯಾಂಕ್‌ ಅಗರ್‌ವಾಲ್‌ ಕೊಂಚ ಎದುರಾಳಿ ಬೌಲರ್‌ಗಳನ್ನು ಕಾಡದಿರು. ಇವರು 145 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ ಅಜೇಯ 64 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಕರ್ನಾಟಕ 3ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 144 ರನ್‌ ಕಲೆ ಹಾಕಿದೆ. ಒಟ್ಟಾರೆ ಕರ್ನಾಟಕ 157 ರನ್‌ಗಳ ಮುನ್ನಡೆ ಸಾಧಿಸಿದೆ.

Story first published: Monday, November 10, 2025, 17:42 [IST]
Other articles published on Nov 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+