Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಯಾಂತಿ ಲ್ಯಾಂಗರ್-ಸ್ಟುವರ್ಟ್ ಬಿನ್ನಿ ದಂಪತಿಗೆ ಗಂಡು ಮಗು ಜನನ

Mayanti Langer-Stuart Binny blessed with baby boy

ಬೆಂಗಳೂರು: ಭಾರತದ ಮುಂಚೂಣಿ ನಿರೂಪಕಿ ಮತ್ತು ಭಾರತದ ಕ್ರಿಕೆಟರ್ ಸ್ಟುವರ್ಟ್ ಬಿನ್ನಿ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಭಾಗವಹಿಸುವುದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಮಯಾಂತಿ-ಬಿನ್ನಿ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು ಮಯಾಂತಿ ಖಾತರಿಪಡಿಸಿದ್ದಾರೆ.

ಐಪಿಎಲ್‌ನಲ್ಲಿ ನಿರೂಪಕರಾಗಿ ಜವಾಬ್ದಾರಿ ನಿರ್ವಹಿಸಲಿರುವ ನಿರೂಪಕರ ಪಟ್ಟಿಯನ್ನು ಸ್ಟಾರ್‌ಸ್ಪೋರ್ಟ್ಸ್ ಗುರುವಾರ (ಸೆಪ್ಟೆಂಬರ್ 17) ಪ್ರಕಟಿಸಿತ್ತು. ಇದರಲ್ಲಿ ಕನ್ನಡತಿ ಮಯಾಂತಿ ಹೆಸರಿರಲಿಲ್ಲ. ಇದು ಅನೇಕ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೀಡು ಮಾಡಿತ್ತು. ಆದರೆ ಮಯಾಂತಿ ಈ ಬಾರಿ ಐಪಿಎಲ್‌ನಲ್ಲಿ ಭಾಗವಹಿಸದಿರುವುದಕ್ಕೆ ಕಾರಣ ಈಗ ಬಯಲಾಗಿದೆ.

ತಮಗೆ ಗಂಡು ಮಗು ಜನಿಸಿರುವ ವಿಚಾರವನ್ನು ಮಯಾಂತಿ ಸಾಮಾಜಿಕ ಜಾಲತಾಣದ ಮೂಲಕ ಖಾತರಿಪಡಿಸಿದ್ದಾರೆ. ಸೆಪ್ಟೆಂಬರ್ 18ರಂದು ಟ್ವೀಟ್ ಮಾಡಿರುವ ಮಯಾಂತಿ, 'ಈ ಐಪಿಎಲ್ ಅನ್ನು ನೋಡಲು ನನಗೆ ಖುಷಿಯಾಗಿದೆ. ಆಲ್ ದ ಬೆಸ್ಟ್ ಟೀಮ್' ಎಂದು ಬಿನ್ನಿಯ ರಾಜಸ್ಥಾನ್ ರಾಯಲ್ಸ್‌ಗೆ ಶುಭ ಕೋರಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭವಾಗಿ ನವೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಆರಂಭಿಕ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಉದ್ಘಾಟನಾ ಪಂದ್ಯ ದುಬೈನಲ್ಲಿ ಭಾರತೀಯ ಕಾಲಮಾನ 7.30 pmಗೆ ಆರಂಭವಾಗಲಿದೆ.

Story first published: Friday, September 18, 2020, 22:18 [IST]
Other articles published on Sep 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+