ಐಪಿಎಲ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ ಟ್ವಿಟ್ಟರ್‌ನಲ್ಲಿ ಮನಗೆದ್ದ ಮಯಾಂತಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಭಿಮಾನಿಗಳ ವಲಯದಲ್ಲಿ ಮಯಾಂತಿ ಲ್ಯಾಂಗರ್ ಹೆಸರು ಸಾಕಷ್ಟು ಪ್ರಸಿದ್ಧ. ಐಪಿಎಲ್ ಅಧಿಕೃತ ಪ್ರಸಾರಕರಾದ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಎಲ್ಲಾ ಪಂದ್ಯಗಳ ನೇರಪ್ರಸಾರದ ಚರ್ಚಾ ಕಾರ್ಯಕ್ರಮಗಳಲ್ಲಿ ಮಯಾಂತಿ ಲ್ಯಾಂಗರ್ ನಿರೂಪಕಿಯಾಗಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಿಂದ ಅವರು ದೂರವುಳಿದಿದ್ದಾರೆ.
ಇತ್ತೀಚೆಗಷ್ಟೇ ಮಯಾಂತಿ ಲ್ಯಾಂಗರ್ ತಾವು ತಾಯಿಯಾಗಿರುವ ವಿಚಾರವನ್ನು ಮಗು ಹಾಗೂ ಪತಿ ಸ್ಟುವರ್ಟ್ ಬಿನ್ನಿ ಜೊತೆಗೆ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು. ಹಾಗಾಗಿ ಈ ಬಾರಿ ಮಯಾಂತಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳದಿರಲು ಕಾರಣವೇನೆಂದು ಸ್ಪಷ್ಟವಾಗಿತ್ತು. ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮಯಾಂತಿ ಹಾಗೂ ಮಗುವಿಗೆ ಶುಭಹಾರೈಸಿದ್ದರು.
ಈಗ ಮಯಾಂತಿ ಲ್ಯಾಂಗರ್ ಹಂಚಿಕೊಂಡಿರುವ ಫೋಟೋವೊಂದು ಸಾಕಷ್ಟು ವೈರಸ್ ಆಗಿದೆ. ಹೌದು, ತಮ್ಮ ಮಗುವಿನ ಜೊತೆಗೆ ಫೋಸ್ ನೀಡಿರುವ ಫೋಟೋವನ್ನು ಮಯಾಂತಿ ಲ್ಯಾಂಗರ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಸಹಿತ ಹಲವಾರು ಸೆಲೆಬ್ರಿಟಿಗಳು ಮಯಾಂತಿಗೆ ಶುಭಹಾರೈಸುತ್ತಿದ್ದಾರೆ.
"ಇದೇ ನಿಜವಾದ ಸಂಭ್ರಮ" ಎಂದು ಅಡಿ ಬರಹದೊಂದಿಗೆ ಮಯಾಂತಿ ಲ್ಯಾಂಗರ್ ಈ ಫೋಟೋವನ್ನು ಹಂಚುಕೊಂಡಿದ್ದಾರೆ. ಫೋಟೋದಲ್ಲಿ ಮಗು ತಾಯಿಯನ್ನು ಮುದ್ದಾಗಿ ನೋಡುತ್ತಿದ್ದರೆ ತಾಯಿ ಮಯಾಂತಿ ಸಂತಸದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಮಯಾಂತಿ ಹಂಚಿಕೊಂಡಿರುವ ಪೋಸ್ಟ್‌ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಐಪಿಎಲ್‌ನ ವೀಕ್ಷಕ ವಿವರಣೆಕಾರರಲ್ಲಿ ಒಬ್ಬರಾಗಿರುವ ಕೆವಿನ್ ಪೀಟರ್‌ಸನ್ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications