Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೆಸ್ಸಿ ದಾಖಲೆಯ ಹಿಂದೆ ಬಿದ್ದಿರುವ ಕೈಲ್‌ ಎಂಬಪ್ಪೆ; ಫ್ರಾನ್ಸ್‌ಗೆ ಭರ್ಜರಿ ಜಯ

23ನೇ ಆವೃತ್ತಿಯ ಫಿಫಾ ವಿಶ್ವಕಪ್ ನಲ್ಲಿ ಫ್ರಾನ್ಸ್‌ 3-0 ಗೋಲುಗಳಿಂದ ಇರಾಕ್‌ ತಂಡವನ್ನು ಮಣಿಸಿ 'ಐ' ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನನ್ನು ಕಾಯ್ದುಕೊಂಡಿದೆ. ಫ್ರಾನ್ಸ್‌ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ 6 ಅಂಕ ಕಲೆ ಹಾಕಿದೆ. ಈ ಗೆಲುವಿನಲ್ಲಿ ಸ್ಟಾರ್ ಆಟಗಾರ ಕೈಲ್‌ ಎಂಬಪ್ಪೆ 2 ಗೋಲು ಬಾರಿಸಿ ಮಿಂಚಿದರು.

ಮೊದಲ ಅರ್ಧದ ಆಟದಿಂದಲೇ ಫ್ರಾನ್ಸ್ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿ ಅಬ್ಬರಿಸಿತು. ಇದೇ ಅವಧಿಯಲ್ಲಿ ಕೆಲವು ಅವಕಾಶಗಳನ್ನು ಸೃಷ್ಟಿಸಿತು. ಆದರೆ ಈ ಅವಕಾಶದಲ್ಲಿ ಗೋಲು ಬಾರಿಸುವಲ್ಲಿ ವಿಫಲವಾಯಿತು. ಆದರೆ 14 ನೇ ನಿಮಿಷದಲ್ಲಿ ಕೈಲ್‌ ಎಂಬಪ್ಪೆ ಕಮಾಲ್ ಮಾಡಿದರು.

Mbappe

ಕೈಲ್‌ ಎಂಬಪ್ಪೆ ಮೊದಲಾವಧಿಯಲ್ಲಿ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿದರು. ಇವರು 14ನೇ ನಿಮಿಷದಲ್ಲಿ ಕ್ಲಾಸ್‌ ಆಟ ಪ್ರದರ್ಶಿಸಿ, ಇರಾಕ್‌ ತಂಡದ ಇಬ್ಬರು ರಕ್ಷಣಾ ಆಟಗಾರರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗಡೆ ಗೋಲನ್ನು ತಳ್ಳುವಲ್ಲಿ ಸಫಲರಾದರು.

Lionel Messi: ಮಿರೋಸ್ಲಾವ್ ಕ್ಲೋಸ್ ದಾಖಲೆ ಧೂಳೀಪಟ; ಫಿಫಾ ವಿಶ್ವಕಪ್‌ನಲ್ಲಿ 17 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಮೆಸ್ಸಿ

Lionel Messi: ಮಿರೋಸ್ಲಾವ್ ಕ್ಲೋಸ್ ದಾಖಲೆ ಧೂಳೀಪಟ; ಫಿಫಾ ವಿಶ್ವಕಪ್‌ನಲ್ಲಿ 17 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಮೆಸ್ಸಿ

ಈ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲುಗಳನ್ನು ಬಾರಿಸದಿದ್ದಾಗ ಫ್ರಾನ್ಸ್‌ 1-0 ಮುನ್ನಡೆ ಸಾಧಿಸಿತು.

Mbappe

ಇನ್ನು ಎರಡನೇ ಅವಧಿಯ ಆರಂಭದಲ್ಲೇ ಫ್ರಾನ್ಸ್‌ ಮತ್ತೊಂದು ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲವಾಯಿತು. ಈ ಬಾರಿಯೂ ಕೈಲ್‌ ಎಂಬಪ್ಪೆ ಅವರು ಗೋಲು ಪೆಟ್ಟಿಗೆಯ ಎಡಭಾಗದಿಂದ ನೀಡಿದ ಪಾಸ್‌ನ ಸಂಪೂರ್ಣ ಲಾಭ ಪಡೆದ ಎಂಬಪ್ಪೆ ಸುಲಭ ಗೋಲು ಬಾರಿಸಿ ಮಿಂಚಿದರು. ಫ್ರಾನ್ಸ್‌ 2-0 ಮುನ್ನಡೆ ಸಾಧಿಸಿದರು.

Fifa World Cup ಇತಿಹಾಸದಲ್ಲಿ ಕಿರಿಯ ವಯಸ್ಸಿನಲ್ಲಿ ಗೋಲು ದಾಖಲಿಸಿದ ಟಾಪ್‌ 5 ಸಾಧಕರು

Fifa World Cup ಇತಿಹಾಸದಲ್ಲಿ ಕಿರಿಯ ವಯಸ್ಸಿನಲ್ಲಿ ಗೋಲು ದಾಖಲಿಸಿದ ಟಾಪ್‌ 5 ಸಾಧಕರು

ಎರಡನೇ ಅವಧಿಯಲ್ಲಿ ಫ್ರಾನ್ಸ್‌ ಭರವಸೆಯ ಆಟಗಾರ ಔಸ್ಮಾನೆ ಡೆಂಬೆಲೆ 66ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮಿಂಚಿದರು. ಪರಿಣಾಮ ಫ್ರಾನ್ಸ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಪರಿಣಾಮ ಫ್ರಾನ್ಸ್‌ ಸುಲಭ ಜಯ ಸಾಧಿಸಿತು.

ಮೆಸ್ಸಿ ಬೆನ್ನು ಹತ್ತಿದ ಎಂಬಪ್ಪೆ

27 ವರ್ಷದ ಫ್ರಾನ್ಸ್‌ ಆಟಗಾರ ಕೈಲ್‌ ಎಂಬಪ್ಪೆ ಅವರು ಫಿಫಾ ವಿಶ್ವಕಪ್‌ ಫುಟ್ಬಾಲ್‌ ಇತಿಹಾಸದಲ್ಲಿ 16ನೇ ಗೋಲು ದಾಖಲಿಸಿದರು. ಈ ಮೂಲಕ ಸ್ಟಾರ್ ಆಟಗಾರ ಲಿಯೋನೆಲ್‌ ಮೆಸ್ಸಿ ಅವರ ದಾಖಲೆಯ ಬೆನ್ನು ಹತ್ತಿದ್ದಾರೆ. ಲಿಯೋನೆಲ್‌ ಮೆಸ್ಸಿ ಫುಟ್ಬಾಲ್‌ ವಿಶ್ವಕಪ್‌ನಲ್ಲಿ 18 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ. ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಈ ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆಯ ಹಿಂದೆ ಎಂಬಪ್ಪೆ ಬಿದ್ದಿದ್ದಾರೆ.

ನಾರ್ವೆಗೆ ರೋಚಕ ಜಯ

ಫಿಫಾ ವಿಶ್ವಕಪ್ 2026ರ ಐ ಗುಂಪಿನ ಮತ್ತೊಂದು ಪಂದ್ಯದಲ್ಲಿ ನಾರ್ವೆ ಮತ್ತು ಸೆನೆಗಲ್ ತಂಡಗಳ ಕಾದಾಟ ನಡೆಸಿದವು. ಈ ಜಿದ್ದಿನ ಕಾಳಗಕ್ಕೆ ನ್ಯೂಜೆರ್ಸಿಯ ಪ್ರಸಿದ್ಧ 'ನ್ಯೂಜೆರ್ಸಿ ಸ್ಟೇಡಿಯಂ' ಸಾಕ್ಷಿಯಾಯಿತು. ನಾರ್ವೆ ಪರ ಮಾರ್ಕಸ್ ಪೆಡರ್ಸನ್ 43ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ 48ನೇ ಮತ್ತು 58ನೇ ನಿಮಿಷದಲ್ಲಿ ಸತತ ಎರಡು ಗೋಲುಗಳನ್ನು ಸಿಡಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಇತ್ತ ಸೆನೆಗಲ್ ಪರ ಇಸ್ಮಾಯಿಲಾ ಸಾರ್ 53ನೇ ಹಾಗೂ 93ನೇ (90+3') ನಿಮಿಷದಲ್ಲಿ ಎರಡು ಗೋಲು ಗಳಿಸಿ ಹೋರಾಟ ನೀಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ಮಹತ್ವದ ಗೆಲುವಿನೊಂದಿಗೆ 6 ಅಂಕಗಳನ್ನು ಗಳಿಸಿರುವ ನಾರ್ವೆ ತಂಡವು ಐ ಗುಂಪಿನಲ್ಲಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದೆ. ಫ್ರಾನ್ಸ್‌ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದ್ದು 6 ಅಂಕಗಳನ್ನು ಕಲೆ ಹಾಕಿದ್ದು, ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.

Story first published: Tuesday, June 23, 2026, 9:01 [IST]
Other articles published on Jun 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+