ಮುಂಬೈ ಟಿ20 ಲೀಗ್ ಮೂರನೇ ಆವೃತ್ತಿ ಮುಂದೂಡಿದ ಎಂಸಿಎ

ಮುಂಬೈ: ಮುಂಬೈ ಟಿ20 ಲೀಗ್ ಮೂರನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಮುಂದೂಡಿದೆ. ಭಾರತದಲ್ಲಿ ಆತಂಕ ಮಟ್ಟದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದಾಗಿ ಟೂರ್ನಿ ಮುಂದೂಡುವ ನಿರ್ಧಾರಕ್ಕೆ ಎಂಸಿಎ ಬಂದಿದೆ.
'ದೇಶದಲ್ಲಿರುವ ಸದ್ಯದ ಕೋವಿಡ್-19 ಪಿಡುಗಿನ ಸಮಯದಲ್ಲಿ ಎಲ್ಲಾ ಹೂಡಿಕೆದಾರರ ಸುರಕ್ಷೆ ಮತ್ತು ಆಸಕ್ತಿಯನ್ನು ಪರಿಗಣಿಸಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮುಂಬೈ ಟಿ20 ಲೀಗ್ ಮೂರನೇ ಆವೃತ್ತಿಯನ್ನು ಮುಂದಿನ ಸೂಚನೆ ಬರುವವರೆಗೆ ಮುಂದೂಡಿದ್ದೇವೆ,' ಎಂದು ಎಂಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ ಮೊದಲ ವಾರದಲ್ಲಿ 2021ರ ಮುಂಬೈ ಟಿ20 ಲೀಗ್ ಅನ್ನು ಆಯೋಜಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಯೋಚಿಸಿತ್ತು. ಆದರೆ ಕೊರೊನಾವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುತ್ತಿರುವುದರಿಂದ ಉದ್ದೇಶಿತ ಟೂರ್ನಿ ಮುಂದೂಡುವ ನಿರ್ಧಾರಕ್ಕೆ ಎಂಸಿಎ ಬಂದಿದೆ.
ಸದ್ಯ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ನಡೆಯುತ್ತಿದ್ದು ಈ ಟೂರ್ನಿಗೇ ಟೀಕೆಗಳು ಕೇಳಿಬರುತ್ತಿವೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರು, ಅಂಪೈರ್‌ಗಳು ಕೂಡ ಟೂರ್ನಿಯಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications