ಕ್ರಿಕೆಟ್ : ರನೌಟ್ ನಲ್ಲಿ ಹೊಸ ನಿಯಮಗಳು ಜಾರಿ
ಲಂಡನ್, ಜೂನ್ 6: ಕ್ರಿಕೆಟ್ ನಲ್ಲಿ ಈವರೆಗಿದ್ದ ರನೌಟ್ ನಿಯಮಗಳನ್ನು ಹಾಗೂ ಆಟಗಾರರ ಬ್ಯಾಟ್ ನ ರೂಪುರೇಷೆಗಳಿಗೆ ಸಂಬಂಧಪಟ್ಟಂತೆ ಈಗಿರುವ ನಿಯಮಗಳನ್ನು ಬದಲಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ (ಐಸಿಸಿ), ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೆರಿಲಿಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ, ಕೆಲವಾರು ಶಿಫಾರಸುಗಳನ್ನು ಅದು ಶಿಫಾರಸು ಮಾಡಿದೆ.
ದುಬೈನಲ್ಲಿ ಶೀಘ್ರದಲ್ಲೇ ನಡೆಯುವ ಐಸಿಸಿ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತಂತೆ ಚರ್ಚೆ ಹಮ್ಮಿಕೊಳ್ಳಲಾಗುವುದು. ಶಿಫಾರಸುಗಳು ಅಂಗೀಕಾರವಾದರೆ, ರನೌಟ್ ಗಳಿಗೆ ಹಾಗೂ ಬ್ಯಾಟ್ಸ್ ಮನ್ ಗಳ ಬ್ಯಾಟ್ ಗಳಿಗೆ ಹೊಸ ನಿಯಮ, ಅಂಪೈರ್ ಗಳಿಗೆ ಹೆಚ್ಚು ಅಧಿಕಾರ ಇವೇ ಮುಂತಾದ ವಿಚಾರಗಳ ಬಗ್ಗೆ ಹೊಸ ನಿಯಮಗಳು ಜಾರಿಗೊಳ್ಳಲಿವೆ.[ಧೋನಿಗಿಂತ ಮುಂಚಿತವಾಗಿ ಪಾಂಡ್ಯ ಕಣಕ್ಕಿಳಿದ ರಹಸ್ಯ ಬಹಿರಂಗ!]
ಅಂದಹಾಗೆ, ರನೌಟ್ ನಿಯಮಗಳನ್ನು ಹಾಗೂ ಬ್ಯಾಟ್ ನ ರೂಪುರೇಷೆಗಳನ್ನು ಬದಲಿಸಬೇಕೆಂದು ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಹಾಗಾದರೆ, ಐಸಿಸಿ ಸಲ್ಲಿಸಿದ ಈ ಶಿಫಾರಸುಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಬ್ಯಾಟ್ ಗಳ ಗಾತ್ರದಲ್ಲಿ ಬದಲಾವಣೆ
ಪ್ರಸ್ತುತ ಹಲವಾರು ಬ್ಯಾಟ್ಸ್ ಮನ್ ಗಳು ತಮ್ಮ ಬ್ಯಾಟ್ ಗಳ ಬ್ಲೇಡ್ ನ ದಪ್ಪುವನ್ನು 50 ಮಿ.ಮೀ.ನಷ್ಟು ಕಾಯ್ದುಕೊಳ್ಳುತ್ತಿದ್ದಾರೆ. ಈ ನಿಯಮವನ್ನು ಬದಲಾಯಿಸಲು, ಬ್ಯಾಟ್ಸ್ ಮನ್ ಗಳು ಬ್ಯಾಟುಗಳ ಅಂಚನ್ನು 40 ಮಿಲಿ ಮೀಟರ್, ಬ್ಲೇಡ್ ನ ದಪ್ಪ 67 ಮಿಲಿ ಮೀಟರ್ ಮೀರಬಾರದು ಎಂದು ಶಿಫಾರಸು ಮಾಡಲಾಗಿದೆ.

ಅಂಪೈರ್ ಗಳಿಗೆ ಹೆಚ್ಚಿನ ಅಧಿಕಾರ
ಪಂದ್ಯ ನಡೆಯುವಾಗ ಮೈದಾನದಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅನುಚಿತವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಹಾಕುವ ಅಧಿಕಾರವನ್ನು ಅಂಪೈರ್ ಗಳಿಗೆ ನೀಡುವಂಥ ಶಿಫಾರಸು ಮಾಡಲಾಗಿದೆ.[ಬಿಸಿಸಿಐಗೆ ಎರಡೇ ಲೈನ್ ರೆಸ್ಯೂಮೆ ಕಳಿಸಿದ ಸೆಹ್ವಾಗ್!]

ವಿಕೆಟ್ ಕೀಪರ್ ಗೆ ಮತ್ತಷ್ಟು ಸವಾಲು
ಬ್ಯಾಟ್ಸ್ ಮನ್ ಗಳನ್ನು ಚುರುಕಾಗಿ ಸ್ಟಂಪ್ ಔಟ್ ಮಾಡಬಲ್ಲ ವಿಕೆಟ್ ಕೀಪರ್ ಗಳಿಗೆ ಹೊಸ ನಿಯಮಗಳನ್ನು ತರಬೇಕೆಂದು ಎಂಸಿಸಿ ಹೇಳಿದೆ. ಆದರೆ, ಈ ಬಗ್ಗೆ ಯಾವುದೇ ಶಿಫಾರಸು ಮಾಡಿಲ್ಲ. ಇದನ್ನು ಐಸಿಸಿ ಹಾಗೂ ಎಂಸಿಸಿ ಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲು ನಿರ್ಧರಿಸಲಾಗಿದೆ.

ಬ್ಯಾಟ್ಸ್ ಮನ್ ಗಳಿಗೆ ಹೆಚ್ಚು ಅನುಕೂಲಕರ
ರನ್ ಕದಿಯುವಾಗ ಬ್ಯಾಟ್ಸ್ ಮನ್ ಕ್ರೀಸ್ ನ ಗೆರೆಗೆ ಬ್ಯಾಟ್ ತಾಗಿಸದಿದ್ದರೂ, ಆತನ ಬ್ಯಾಟು ಕ್ರೀಸ್ ನ ಕ್ಷೇತ್ರದ ಒಳಗೆ ಬಂದರೆ ಸಾಕು ಆತ ರನೌಟ್ ನಿಂದ ಬಚಾವ್ ಆದಂತೆ ಎಂದಿದೆ ಹೊಸ ಶಿಫಾರಸು. ಅಂದರೆ, ಬ್ಯಾಟ್ಸ್ ಮನ್ ನ ಬ್ಯಾಟ್ ಕ್ರೀಸ್ ನ ಮೇಲ್ಭಾಗದಲ್ಲಿ ಗಾಳಿಯಲ್ಲಿದ್ದರೂ ವಿಕೆಟ್ ಕೀಪರ್ ಬೇಲ್ಸ್ ಎಗರಿಸಿದರೆ, ಅದು ರನೌಟ್ ಎಂದು ಪರಿಗಣಿಸಕೂಡದೆಂದು ಹೇಳುತ್ತದೆ ಈ ಶಿಫಾರಸು.

ಏನಿದರ ಮಹತ್ವ?
ಮೆರಿಲಿಬೊನ್ ಕ್ರಿಕೆಟ್ ಕ್ಲಬ್ ವಿಶ್ವದ ಅತ್ಯಂತ ಹಳೆಯ ಕ್ರಿಕೆಟ್ ಸಂಸ್ಥೆಗಳಲ್ಲೊಂದಾಗಿದ್ದು, ಕಾಲಕ್ಕೆ ತಕ್ಕಂತೆ ಕ್ರಿಕೆಟ್ ನಿಯಮಗಳನ್ನು ಐಸಿಸಿಗೆ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ. ಈ ಕ್ಲಬ್ 1787ರಲ್ಲಿ ಸ್ಥಾಪಿಸಲ್ಪಟ್ಟಿತ್ತು. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಆಡಳಿತ ಮಂಡಳಿಯಾಗಿಯೂ ಈ ಹಿಂದೆ ಎಂಸಿಸಿ ಕಾರ್ಯ ನಿರ್ವಹಿಸಿತ್ತು. ಕ್ರಿಕೆಟ್ ಗೆ ಸಂಬಂಧಿಸಿದ ಏನೇ ನಿಯಮಾವಳಿಗಳಿದ್ದರೂ ಅವುಗಳನ್ನು ಎಂಸಿಸಿಯೇ ರೂಪಿಸಿ, ಅವುಗಳನ್ನು ಐಸಿಸಿಗೆ ಶಿಫಾರಸು ಮಾಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications