ಲಾರ್ಡ್ಸ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್ ಮಾಸ್ಟರ್ ಪ್ಲ್ಯಾನ್: ಪಿಚ್ ಹೀಗೆ ನೀಡಲು ಸೂಚನೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್, ತೆಂಡುಲ್ಕರ್ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 1-1 ರಿಂದ ಸಮಬಲ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಡಿಯಾ ಗೆಲುವು ದಾಖಲಿಸಿದೆ.ಈ ಮೂಲಕ ಸರಣಿಯಲ್ಲಿ ಭರ್ಜರಿಯಾಗಿ ಪುಟಿದೆದ್ದಿದೆ. ಈ ಮೂಲಕ ಇಂಗ್ಲೆಂಡ್ ಚಿಂತೆಯನ್ನು ದುಪಟ್ಟು ಮಾಡಿದೆ. ಈಗ ಸರಣಿಯ ಮೂರನೇ ಪಂದ್ಯಕ್ಕೆ ಲಾರ್ಡ್ಸ್‌ನ ಮೈದಾನ ಸಿದ್ಧವಾಗುತ್ತಿದೆ. ಈ ಮೈದಾನದಲ್ಲಿ ವಿಶೇಷ ರೀತಿಯ ಪಿಚ್‌ಗಾಗಿ ಇಂಗ್ಲೆಂಡ್ ಬೇಡಿಕೆ ಇಟ್ಟಿದೆ.
ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದ ಇಂಗ್ಲೆಂಡ್ ಆತ್ಮವಿಶ್ವಾಸದಿಂದ ಕೂಡಿತ್ತು. ಆದರೆ ಎರಡನೇ ಟೆಸ್ಟ್‌ನಲ್ಲಿ ಈ ತಂಡದ ಆತ್ಮ ವಿಶ್ವಾಸ ಎಲ್ಲ ಮಣ್ಣು ಪಾಲಾಯಿತು. ಟಾಸ್ ಗೆಲ್ಲುತ್ತಿದ್ದ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಿದರು. ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಕಲೆ ಹಾಕಿತು. ಅಲ್ಲದೆ ಆತಿಥೇಯ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಿತು. ಆ ಬಳಿಕ ಎರಡನೇ ಇನಿಂಗ್ಸ್‌ನಲ್ಲೂ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿತು. ಆದರೆ ಇಂಗ್ಲೆಂಡ್ 608 ರನ್‌ಗಳ ಸವಾಲಿನ ಗುರಿಯನ್ನು ಮೆಟ್ಟಿನಿಲ್ಲುವಲ್ಲಿ ಎಡವಿತು.

ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಈ ಪಿಚ್ ಭಾರತದ ಆಟಕ್ಕೆ ಹೊಂದುವಂತೆ ಇತ್ತು ಎಂದು ಹೇಳಿದರು. ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಪಿಚ್ ಬಗ್ಗೆ ದೊಡ್ಡ ಪ್ಲ್ಯಾನ್ ಮಾಡಿಕೊಂಡಿದೆ. ಈ ರೀತಿಯ ಪಿಚ್ ತಮಗೆ ಲಭಿಸಿದಲ್ಲಿ ನಿಶ್ಚಿತವಾಗಿ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರ ಆತಿಥೇಯ ತಂಡದ್ದಾಗಿದೆ.
ಏನು ಮಾಸ್ಟರ್ ಪ್ಲ್ಯಾನ್?
ಕಳೆದ ಒಂದು ತಿಂಗಳ ಹಿಂದೆ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಯೋಜಿಸಲಾಗಿತ್ತು. ಈ ವೇಳೆ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಬಿಗುವಿನ ದಾಳಿ ಸಂಘಟಿಸಿ ತಂಡದ ಜಯದಲ್ಲಿ ಮಿಂಚಿದ್ದರು. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ ಇಂಗ್ಲೆಂಡ್ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಎಂದು ವರದಿ ಮಾಡಿದೆ. ಇಂಗ್ಲೆಂಡ್ ತಂಡದ ಕೋಚ್ ಎಂಸಿಸಿಯ ಮುಖ್ಯ ಗ್ರೌಂಡ್ಸ್‌ಮನ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಪಿಚ್ ಬೌನ್ಸ್, ವೇಗದ ಜೊತೆಗೆ ಮುಮೆಂಟ್ ಇರುವಂತೆ ನೀಡಿ ಎಂದು ಕೋಚ್ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಲಾರ್ಡ್ಸ್ ಪಿಚ್ ಉತ್ತಮವಾಗಿ ಇರುತ್ತದೆ. ಪಿಚ್‌ಗೆ ಸ್ವಲ್ಪ ಜೀವ ಇರಬೇಕು ಎಂದು ಮೆಕಲಮ್ ಹೇಳಿದ್ದರು. ಇದೇ ವೇಳೆ ಜೋಫ್ರಾ ಮುಂದಿನ ಪಂದ್ಯಗಳಿಗೆ ಫಿಟ್ ಆಗಿದ್ದಾರೆ ಎಂದು ಸಹ ತಿಳಿಸಿದ್ದರು. ಉಭಯ ದೇಶಗಳ ನಡುವಣ ಮೂರನೇ ಟೆಸ್ಟ್‌ಗಾಗಿ ಎರಡೂ ತಂಡಗಳು ಲಾರ್ಡ್ಸ್ ತಲುಪಿವೆ. ಈ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಸೆ ಎರಡೂ ತಂಡದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications