Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK ತಂಡ ಸೇರಿದ ಕರ್ನಾಟಕದ ಸ್ಟಾರ್ ಆಲ್‌ರೌಂಡರ್‌

ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಸತತ ಗಾಯ ಚೆನ್ನೈ ತಂಡ ಚಿಂತೆಯನ್ನು ಹೆಚ್ಚಿಸುತ್ತಿದೆ. ಈ ಮಧ್ಯೆ ಸಿಎಸ್‌ಕೆ ತಂಡ ಕರ್ನಾಟಕದ ಯುವ ಆಲ್‌ರೌಂಡರ್‌ ಮೆಕ್‌ನೀಲ್ ಹ್ಯಾಡ್ಲಿ ನರೋನ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವರದಿಗಳ ಅನುಸಾರ ಗಾಯಗೊಂಡಿರುವ ರಾಮಕೃಷ್ಣ ಘೋಷ್ ಬದಲಿಗೆ ಕರ್ನಾಟಕದ ಆಟಗಾರನಿಗೆ ಅವಕಾಶ ನೀಡಲಾಗಿದೆ.

ರಾಮಕೃಷ್ಣ ಘೋಷ್ ಮೇ 2 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಬಲಗಾಲಿನ ಗಾಯಕ್ಕೆ ಒಳಗಾಗಿದ್ದರು. ತಮ್ಮ ಚೊಚ್ಚಲ ಐಪಿಎಲ್‌ ಪಂದ್ಯದಲ್ಲಿ ರಾಮಕೃಷ್ಣ ವಿಲ್ ಜಾಕ್ಸ್‌ ಅವರ ಅಮೋಘ ಕ್ಯಾಚ್ ಪಡೆದು ಮಿಂಚಿದರು. ಆದರೆ ಬೌಲಿಂಗ್ ಮಾಡುವಾಗ ಫಾಲೋ-ಥ್ರೂನಲ್ಲಿ ಬಿದ್ದ ಬಳಿಕ ಗಾಯಕ್ಕೆ ತುತ್ತಾದರು. ಇವರನ್ನು ಪರೀಕ್ಷೆಗೆ ಒಳಪಡಿಸಿದ ಸಮಯದಲ್ಲಿ ಇವರ ಮೂಳೆ ಮುರಿತ ದೃಢಪಟ್ಟಿತು. ಹೀಗಾಗಿಯೇ ರಾಮಕೃಷ್ಣ ಐಪಿಎಲ್‌ನ ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸಿಎಸ್‌ಕೆ ಮ್ಯಾನೇಜ್ಮೆಂಟ್ ಹೇಳಿಕೆ ನೀಡಿದೆ.

McNeil Hadley Noronha

ಮೆಕ್‌ನೀಲ್ ನರೋನ್ಹಾ ಯಾರು?

ಕರ್ನಾಟಕದ ಸ್ಟಾರ್ ಆಟಗಾರ ಮೆಕ್‌ನೀಲ್ ನರೋನ್ಹಾ ಭರವಸೆಯ ಆಟಗಾರ. 24 ವರ್ಷದ ಆಲ್‌ರೌಂಡರ್‌ ಕರ್ನಾಟಕದಲ್ಲಿ ನಡೆದ ಮಹಾರಾಜ್ ಟ್ರೋಫಿಯಲ್ಲಿ ಮಂಗಳೂರು ಡ್ರ್ಯಾಗನ್ಸ್‌ ಪರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಕಳೆದ ಆವೃತ್ತಿಯ ಮಹಾರಾಜ್ ಟ್ರೋಫಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 148ರ ಸ್ಟ್ರೈಕ್‌ ರೇಟ್‌ನಲ್ಲಿ 253 ರನ್‌ ಸಿಡಿಸಿದ್ದಾರೆ. ಇವರು ತಮ್ಮ ಆಫ್-ಸ್ಪಿನ್ ಬೌಲಿಂಗ್ ನಿಂದಲೂ ಮೋಡಿದ ಮಾಡಿದ ಬೌಲರ್‌. ಇವರು 10 ವಿಕೆಟ್‌ ಪಡೆದರು. ಮೆಕ್‌ನೀಲ್‌ ಮಹಾರಾಜ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದರು. ಪರಿಣಾಮ ಇವರಿಗೆ ಸೈಯದ್ ಮುಷ್ತಾಕ್‌ ಅಲಿ ತಂಡಕ್ಕೆ ಅಯ್ಕೆಯಾದರು.

ಚೆನ್ನೈ ತಂಡಕ್ಕೆ ಈ ವರ್ಷ ಗಾಯ ಬಹುವಾಗಿ ಕಾಡಿದೆ. ಟೂರ್ನಿ ಆರಂಭಕ್ಕೂ ಮುನ್ನ ವಿದೇಶಿ ಆಟಗಾರರು ಹೊರ ನಡೆದಿದ್ದು ತಂಡಕ್ಕೆ ದೊಡ್ಡ ಪೆಟ್ಟು ನೀಡಿತು. ವೇಗದ ಬೌಲರ್ ನಾಥನ್ ಎಲಿಸ್, ಸ್ಪೆನ್ಸರ್ ಜಾನ್ಸನ್ ಸಹ ಗಾಯದ ಕಾರಣದಿಂದ ಲೀಗ್‌ನಿಂದ ಹೊರ ನಡೆದಿದ್ದಾರೆ. ಖಲೀಲ್ ಅಹ್ಮದ್ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಭಾರತೀಯ ಆಟಗಾರರ ಅನುಪಸ್ಥಿತಿಯು ತಂಡವನ್ನು ದುರ್ಬಲಗೊಳಿಸಿದೆ.

ಈ ಬಾರಿಯ ಸಾಧನೆ

ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಈ ಬಾರಿ ಆಡಿದ 11 ಪಂದ್ಯಗಳಲ್ಲಿ 6 ಜಯ, 5 ಸೋಲು ಕಂಡಿದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅಲ್ಲದೆ ಲೀಗ್‌ ಹಂತದ ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಸಿಎಸ್‌ಕೆ ಹ್ಯಾಟ್ರಿಕ್‌ ಜಯ ಸಾಧಿಸಿ, ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಅಲ್ಲದೆ ಚೆನ್ನೈ ತಂಡದ ನೆಟ್‌ ರನ್‌ ರೇಟ್‌ ಸಹ ಉತ್ತಮವಾಗಿದ್ದು, ಪ್ಲೇ ಆಫ್‌ ಪ್ರವೇಶಿಸುವ ಕನಸು ಕಾಣುತ್ತಿದೆ. ಚೆನ್ನೈ ತಂಡ ಮುಂದಿನ ಪಂದ್ಯಗಳಲ್ಲಿ ಮೇ 15 ರಂದು ಎಲ್‌ಎಸ್‌ಜಿ ವಿರುದ್ಧ, ಮೇ 18 ರಂದು ಎಸ್‌ಆರ್‌ಎಚ್‌ ವಿರುದ್ಧ, ಮೇ 21 ರಂದು ಗುಜರಾಟ್‌ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಮೂರು ಪಂದ್ಯಗಳಲ್ಲಿ ಚೆನ್ನೈ ಜಯ ಸಾಧಿಸಿದಲ್ಲಿ ಪ್ಲೇ ಆಫ್‌ ಆಸೆ ನನಸಾಗುತ್ತದೆ.

Story first published: Wednesday, May 13, 2026, 11:35 [IST]
Other articles published on May 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+