ಆರೆಂಜ್ ಆರ್ಮಿಯಲ್ಲೊಬ್ಬಳು ಕಣ್ ಸೆಳೆಯೋ ಬೆಡಗಿ, ಯಾರೀ ಹುಡುಗಿ!?

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿದೆ. ಕೊರೊನಾ ಕಾಟದಿಂದಾಗಿ ಈ ಬಾರಿ ಅಭಿಮಾನಿಗಳು ಮೈದಾನದಲ್ಲಿ ಆಟವನ್ನು ಸಂಭ್ರಮಿಸುವ ಅವಕಾಶವಿಲ್ಲ. ಆದರೆ ಐಪಿಎಲ್‌ನ ಮನರಂಜನೆಯೇನೂ ಕಮ್ಮಿಯಾಗಿಲ್ಲ. ಪಂದ್ಯಗಳು ಸಾಗಿದಂತೆ ಕುತೂಹಲಕಾರಿ ಏರಿಳಿತಗಳನ್ನು ನಾವೀಬಾರಿಯ ಐಪಿಎಲ್‌ನಲ್ಲಿ ನೋಡುತ್ತಿದ್ದೇವೆ. ಈಗಾಗಲೇ 21+ ಪಂದ್ಯಗಳು ನಮ್ಮನ್ನು ರಂಜಿಸಿದೆ.
ಪಂದ್ಯಗಳು ನಡೆಯುವಾಗ ಆಟಗಾರರಲ್ಲದೆ ಇನ್ನೊಂದಿಷ್ಟು ಮುಖಗಳು ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದನ್ನು ನಾವು ನೋಡಿದ್ದೇವೆ. ಕಿಂಗ್ಸ್ XI ಪಂಜಾಬ್ ಸಹ ಮಾಲೀಕೆ ಪ್ರೀತಿ ಝಿಂಟಾ, ಶಾರುಖ್ ಖಾನ್, ಮುಂಬೈ ಇಂಡಿಯನ್ಸ್ ಸಹ ಮಾಲೀಕ ಆಕಾಶ್ ಅಂಬಾನಿ ಇಂಥ ಮುಖಗಳನ್ನು ಮೈದಾನದಲ್ಲಿ ನಾವು ಆಗೀಗ ನೊಡಿದ್ದೇವೆ.
ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಹುಡುಗಿಯೊಬ್ಬಳು ಕಾಣಿಸಿಕೊಂಡಿರುವುದನ್ನು ನೀವು ಗಮನಿಸಿರಬಹುದು? ಯಾರೀ ಬೆಡಗಿ?

ಎಸ್‌ಆರ್‌ಎಚ್‌ಗೆ ಚಿಯರ್ ಗರ್ಲ್
ಈ ಬಾರಿಯ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪಂದ್ಯಗಳಿದ್ದಾಗೆಲ್ಲ ವೀಕ್ಷಕರ ಸ್ಟ್ಯಾಂಡ್‌ನಲ್ಲಿದ್ದು ಎಸ್‌ಆರ್‌ಎಚ್‌ಗೆ ಚಿಯರ್ ಮಾಡುತ್ತಿರುತ್ತಾರಲ್ಲ? ಆ ಹುಡುಗಿಯ ಹೆಸರು ಕಾವ್ಯ ಮಾರನ್. ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್‌ಗೆ ಕಾವ್ಯ ಹುರುಪು ತುಂಬುವ ಯತ್ನ ಮಾಡುತ್ತಿದ್ದಾರೆ.

ಯಾರೀ ಕಾವ್ಯ?
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಮಾಲೀಕ ಕಲಾನಿಧಿ ಮಾರನ್ ಅವರ ಪತ್ರಿ ಈ ಕಾವ್ಯ ಮಾರನ್. ಇನ್ನು ಈ ಕಲಾನಿಧಿ ಮಾರನ್ ಯಾರೆಂದರೆ, ಸನ್ ಟಿವಿ ನೆಟ್ವರ್ಕ್ಸ್‌ನ ಮಾಲೀಕ. ಭಾರತದಲ್ಲಿ ದೊಡ್ಡ ದೂರದರ್ಶನ ಜಾಲ ಹೊಂದಿರುವ ಸನ್ ಟಿವಿ ನೆಟ್ವರ್ಕ್ಸ್ 32 ಟಿವಿ ಚಾನೆಲ್‌ಗಳು ಮತ್ತು 45 ಎಫ್‌ಎಂ ರೇಡಿಯೋ ಸ್ಟೇಶನ್‌ಗಳನ್ನು ಹೊಂದಿದೆ (ಚಿತ್ರದಲ್ಲಿ ಕಲಾನಿಧಿ ಮಾರನ್, ಎಡಬದಿಯಲ್ಲಿ).

ಹಿಂದೆಯೂ ಕಾಣಿಸಿಕೊಂಡಿದ್ದರು
ಕಾವ್ಯ ಮಾರನ್ ಹಿಂದೆಯೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಜೊತೆ ಕಾಣಿಸಿಕೊಂಡಿದ್ದರು. ಕಳೆದ ಒಂದು ವರ್ಷದಿಂದಲೂ ಕಾವ್ಯ ಎಚ್ಆರ್‌ಎಚ್ ತಂಡವನ್ನು ಬೆಂಬಲಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆದಾಗಲೂ ಕಾವ್ಯ ಅವರು ಎಚ್‌ಆರ್‌ಎಚ್ ಬಿಡ್ಡಿಂಗ್ ಟೇಬಲ್‌ನಲ್ಲಿ ಕುಳಿತಿದ್ದರು.

ಎಸ್‌ಆರ್‌ಎಚ್‌ನ ಫ್ಯಾನ್
ಕ್ರಿಕೆಟ್ ಅಭಿಮಾನಿಗಳು ಹುರುಪು ತುಂಬಿದಷ್ಟು ತಂಡದ ಪ್ರದರ್ಶನಕ್ಕೂ ಬಲ ಸಿಕ್ಕಂತಾಗುತ್ತದೆ. 28ರ ಹರೆಯದ ಕಾವ್ಯ ಕೂಡ ಎಸ್‌ಆರ್‌ಎಚ್ ಫ್ಯಾನ್ ಆಗಿದ್ದುಕೊಂಡು ಹೈದರಾಬಾದ್ ಬೆಂಬಲಿಸುತ್ತಿದ್ದಾರೆ. ಈ ಹಿಂದೆ ಕಾವ್ಯ ಸನ್ ಟಿವಿ ನೆಟ್ವರ್ಕ್ಸ್‌ನ ನಿರ್ದೇಶಕರ ಮಂಡಳಿಯಲ್ಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications