ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಸ್ಥಿರ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಆಶ್ಲೀ ಗಾರ್ಡನರ್ ಮೊನಚಾದ ದಾಳಿಯನ್ನು ಸಂಘಟಿಸಿ ಪಾಕಿಸ್ತಾನ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಆಸೀಸ್ ಆಟಗಾರ್ತಿರು ಬ್ಯಾಕ್ ಟು ಬ್ಯಾಕ್ ದಾಖಲೆ ಬರೆದರು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 82 ರನ್‌ಗಳಿಗೆ ಆಲೌಟ್ ಆಯಿತು. ಆಶ್ಲೀ ಗಾರ್ಡನರ್ ಆಸೀಸ್ ಪರ ನಾಲ್ಕು ವಿಕೆಟ್ ಕಬಳಿಸಿದರು. ಉಳಿದಂತೆ ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಜಾರ್ಜಿಯಾ ವೇರ್ಹ್ಯಾಮ್ ತಲಾ ಎರಡು ವಿಕೆಟ್ ಕಬಳಿಸಿದರು.

ಪಾಕ್ ಪರ ಸ್ಟಾರ್ ಆಟಗಾರ್ತಿಯರು ನಿದಾ ದಾರ, ಸಿದ್ರ್ ಅಮೀನ್, ಆಲಿಯಾ ರಿಯಾಜ್ ಮತ್ತು ಇರಾಮ್ ಜಾವೇದ್ ಮಾತ್ರ ಎರಡಂಕಿ ಮುಟ್ಟಿ ಸಂಭ್ರಮಿಸಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪಾಕ್ ಪರ ಆಲಿಯಾ ರಿಯಾಜ್ 3 ಬೌಂಡರಿ ಸಹಾಯದಿಂದ 26 ರನ್ ಸಿಡಿಸಿ ಗರಿಷ್ಠ ರನ್ ಸ್ಕೋರ್ ಆದರು.
ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮೇಗನ್ ಶುಟ್ ಅವರು ಬ್ಯಾಕ್ ಟು ಬ್ಯಾಕ್ ರೆಕಾರ್ಡ್ ಬರೆದರು. ಇದಕ್ಕೂ ಮೊದಲು ಮೇಗನ್ ಶುಟ್ ಅವರು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು. ಈಗ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಮೇಗನ್ ಅವರು ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದರು.
ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಆಟಗಾರ್ತಿ ಸದಾಫ್ ಶಾಮ್ಸ್ ಅವರಿಗೆ ಖೆಡ್ಡಾ ತೋಡುವ ಮೂಲಕ ಮೇಗನ್ ಶುಟ್ ಇತಿಹಾಸ ನಿರ್ಮಿಸಿದರು. ಈ ಮೂಲಕ ಟಿ20 ಮಹಿಳಾ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆಯನ್ನು ತಮ್ಮದಾಗಿಸಿಕೊಂಡರು. ಇವರು 115 ಇನಿಂಗ್ಸ್‌ಗಳಲ್ಲಿ 144 ವಿಕೆಟ್ ಕಬಳಿಸಿದ್ದರು. ಇವರು ಪಾಕಿಸ್ತಾನದ ನಿದಾ ದಾರ್ ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ಪಾಕ್ ಆಟಗಾರ್ತಿ 150 ಇನಿಂಗ್ಸ್‌ಗಳಲ್ಲಿ 143 ವಿಕೆಟ್ ಕಬಳಿಸಿದ್ದರು. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ದೀಪ್ತಿ ಶರ್ಮಾ ಇದ್ದು ಇವರು 117 ಇನಿಂಗ್ಸ್‌ಗಳಲ್ಲಿ 133 ವಿಕೆಟ್ ಪಡೆದಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಸೋಫಿ ಎಕ್ಲೆಸ್ಟೋನ್ (128), ಐದನೇ ಸ್ಥಾನದಲ್ಲಿ ಎಲ್ಲಿಸ್ ಪೆರ್ರಿ (126) ಇದ್ದಾರೆ.
ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಆಸೀಸ್ ಪ್ಲೇಯರ್ ಮೇಗನ್ ಶುಟ್ ಅವರಿಗೆ ಸಲ್ಲುತ್ತದೆ. ಇವರು ಈ ವರೆಗೆ 47 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಶಬ್ನಮ್ ಇಸ್ಮಾಯಿಲ್ ಇದ್ದು ಇವರ ಬುಟ್ಟಿಯಲ್ಲಿ 43 ವಿಕೆಟ್‌ಗಳಿವೆ. ಇಂಗ್ಲೆಂಡ್ ತಂಡದ ಅನ್ಯಾ ಶ್ರಬ್ಸೋಲ್ 41 ವಿಕೆಟ್ ಪಡೆದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.