Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Women's T20 World Cup: ದಾಖಲೆ ನಿರ್ಮಿಸಿದ ಆಸೀಸ್‌ ಬೌಲರ್‌

ಶಾರ್ಜಾ: ಭರವಸೆಯ ಬೌಲರ್‌ ಮೇಗನ್ ಶುಟ್ (3ಕ್ಕೆ 3) ಹಾಗೂ ಅನ್ನಾಬೆಲ್ ಸದರ್ಲ್ಯಾಂಡ್ (21ಕ್ಕೆ 3) ಅವರ ಬಿಗುವಿನ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ಐಸಿಸಿ ಟಿ20 ವಿಶ್ವಕಪ್‌ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 60 ರನ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್ ಮಾಡಿದ ಆಸೀಸ್‌ ವನಿತೆಯರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 148 ರನ್‌ ಸೇರಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕಿವೀಸ್‌ ಮಹಿಳೆಯರು 19.2 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸೀಸ್ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಎ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್ ಮೊದಲ ಸೋಲು ಕಂಡಿತು.

Megan Schutt Sets World Record for Most Wickets in Women s T20 World Cup History

ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ಬೆತ್ ಮೂನಿ 32 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 40 ರನ್ ಸಿಡಿಸಿದರು. ಆಲಿಸ್ ಪೆರ್ರಿ 3 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 30 ರನ್ ಕೊಡುಗೆ ನೀಡಿದರು. ಕಿವೀಸ್ ಪರ ಅಮೆಲಿಯಾ ಕೆರ್ 4 ಓವರ್ ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ್ತಿಯರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಆಟಗಾರ್ತಿ ಸುಜಿ ಬೇಟ್ಸ್‌ 20, ಅಮೆಲಿಯಾ ಕೆರ್ 29 ಹಾಗೂ ಲೀ ತಹುಹು 11 ರನ್‌ ಸಿಡಿಸಿದ್ದರು. ಈ ಆಟಗಾರ್ತಿಯರನ್ನು ಬಿಟ್ಟು ಬೇರೆ ಯಾವ ಆಟಗಾರ್ತಿಯರು ಡಬಲ್‌ ಡಿಜಿಟ್‌ ಮುಟ್ಟುವಲ್ಲಿ ವಿಫಲರಾದರು. ಆಸೀಸ್‌ ಪರ ಮೇಗನ್ ಶುಟ್ 3.2 ಓವರ್‌ಗಳಲ್ಲಿ ಒಂದು ಮೆಡನ್‌, ಮೂರು ರನ್‌ ನೀಡಿ, ಮೂರು ವಿಕೆಟ್‌ ಪಡೆದ ಅಬ್ಬರಿಸಿದರು.

ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ ಆಸೀಸ್‌ ವೇಗಿ

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಜಾರ್ಜಿಯಾ ಪ್ಲಿಮ್ಮರ್ ಅವರನ್ನು ಔಟ್ ಮಾಡುವ ಮೂಲಕ ಮೇಗನ್ ಶುಟ್ ದಾಖಲೆಯ ಪುಟಕ್ಕೆ ಸೇರಿದರು. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮೇಗನ್ ಶುಟ್ ಅತಿ ಹೆಚ್ಚು ವಿಕೆಟ್‌ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈ ಆಸೀಸ್‌ ವೇಗಿ 26 ಟಿ20 ವಿಶ್ವಕಪ್‌ ಪಂದ್ಯಗಳಲ್ಲಿ 44 ವಿಕೆಟ್‌ ಪಡೆದರು. ಈ ಮೂಲಕ ದಕ್ಷಿಣ ಆಫ್ರಿಕಾದ ಬೌಲರ್ ಶಬ್ನಮ್ ಇಸ್ಮಾಯಿಲ್ ಅವರ 43 ವಿಕೆಟ್‌ಗಳ ದಾಖಲೆಯನ್ನು ಮುರಿದರು. ಇಂಗ್ಲೆಂಡ್‌ನ ಅನುಭವಿ ವೇಗಿ ಅನ್ಯಾ ಶ್ರಬ್ಸೋಲ್ 27 ಪಂದ್ಯಗಳಲ್ಲಿ 41 ವಿಕೆಟ್‌ ಕಬಳಿಸಿದ್ದರು. ಆಸೀಸ್‌ ತಂಡದ ಎಲ್ಲಿಸ್‌ ಪೆರ್ರಿ 40 ವಿಕೆಟ್‌, ವಿಂಡೀಸ್‌ ತಂಡದ ಸ್ಟಾಫಾನಿ ಟೇಲರ್ 33 ವಿಕೆಟ್ ಕಬಳಿಸಿದ್ದಾರೆ.

Story first published: Tuesday, October 8, 2024, 23:16 [IST]
Other articles published on Oct 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+