For Quick Alerts
ALLOW NOTIFICATIONS  
For Daily Alerts
 

IndW vs AusW: ಭಾರತ ವನಿತೆಯರಿಗೆ ಹಿನ್ನಡೆ: ಆಸೀಸ್‌ಗೆ ಜಯ

ಭರವಸೆಯ ಆಟಗಾರ್ತಿ ಮೇಗನ್ ಶಟ್ (19 ರನ್‌ಗೆ 5 ವಿಕೆಟ್‌), ಜಾರ್ಜಿಯಾ ವೋಲ್ (ಅಜೇಯ 46 ರನ್‌) ಇವರುಗಳ ಅಮೋಘ ಆಟದ ನೆರವಿನಿಂದ ಆಸ್ಟ್ರೇಲಿಯಾ ವನಿತೆಯರ ತಂಡ ಐದು ವಿಕೆಟ್‌ಗಳಿಂದ ಭಾರತ ಮಹಿಳಾ ತಂಡವನ್ನು ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಮಣಿಸಿ ಅಬ್ಬರಿಸಿತು. ಈ ಮೂಲಕ ಆಸ್ಟ್ರೇಲಿಯಾ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ ಆಡಿದ 19 ಪಂದ್ಯಗಳಲ್ಲಿ, 14 ಗೆಲುವು ದಾಖಲಿಸಿ 30 ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಭಾರತ 34.2 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 16.2 ಓವರ್‌ಗಳಲ್ಲಿ 5 ವಿಕೆಟ್‌ಗೆ 102 ರನ್‌ ಸೇರಿಸಿ ಜಯ ಸಾಧಿಸಿತು. ಟೂರ್ನಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

Megan Shutt s Five-Wicket Haul Powers Australia to Victory Over India in ICC Women s Championship

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪ್ರೀಯಾ ಪುನಿಯಾ (3), ಸ್ಮೃತಿ ಮಂಧನಾ (8) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಹರ್ಲೀನ್ ಡಿಯೋಲ್ (19), ಹರ್ಮನ್‌ಪ್ರೀತ್ ಕೌರ್ (17), ಜೆಮಿಮಾ ರಾಡ್ರಿಗಸ್ (23), ರಿಚಾ ಘೋಷ್ (14), ಮಾತ್ರ ಡಬಲ್‌ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆಲ್‌ರೌಂಡರ್‌ಗಳು ಸಹ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ 100 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು.

ಮೇಗನ್ ಶಟ್ ಪಂಚ್‌

ಆಸೀಸ್‌ ಬೌಲರ್‌ಗಳು ಅಮೋಘ ದಾಳಿ ನಡೆಸಿದರು. ಮೆಗನಾ ಶಟ್‌ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು. ಇವರು ಸ್ಮೃತಿ ಮಂಧಾನ, ಪ್ರಿಯಾ ಪುನಿಯಾ, ರಿಚಾ ಘೋಶ್, ಸೈಮಾ ಠಾಕೂರ್, ಪ್ರಿಯಾ ಮಿಶ್ರಾ ವಿಕೆಟ್‌ ಪಡೆದು ಬೀಗಿದರು. ಇವರು 6.2 ಓವರ್‌ಗಳಲ್ಲಿ 19 ರನ್‌ ನೀಡಿ ಐದು ವಿಕೆಟ್‌ ಪಡೆದರು.

Megan Shutt s Five-Wicket Haul Powers Australia to Victory Over India in ICC Women s Championship

ಭರ್ಜರಿ ಆರಂಭ

ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಫೋಬೆ ಎಲ್‌, ಜಾರ್ಜಿಯಾ ವೋಲ್‌ ಉತ್ತಮ ಆರಂಭವನ್ನು ಕಂಡಿತು. ಮೊದಲ ವಿಕೆಟ್‌ಗೆ ಆರಂಭಿಕರು 48 ರನ್‌ಗಳ ಜೊತೆಯಾಟವನ್ನು ನೀಡಿದರು. ಫೋಬೆ ಎಲ್‌ 35 ರನ್‌ ಸಿಡಿಸಿ ಔಟ್ ಆದರು. ಇನ್ನೋಬ್ಬ ಆರಂಭಿಕ ಜಾರ್ಜಿಯಾ ವೋಲ್‌ ಅಜೇಯ 46 ರನ್‌ ಸಿಡಿಸಿದರು. ಉಳಿದ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಭಾರತದ ಪರ ರೇಣುಕಾ ಸಿಂಗ್‌ 3, ಪ್ರೀಯಾ ಮಿಶ್ರಾ 2 ವಿಕೆಟ್‌ ಕಬಳಿಸಿದರು.

ಪಂದ್ಯದಲ್ಲಿ ಮನಮೋಹಕ ಬೌಲಿಂಗ್ ದಾಳಿ ನಡೆಸಿರುವ ಮೆಗನ್ ಶಟ್‌ ಅವರಿಗೆ ಪಂದ್ಯ ಶ್ರೇಷ್ಠ ಗರಿ ಸಂದಿದೆ.

ಭಾರತ ತಂಡ, ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ 12 ಗೆಲುವು, 3 ಸೋಲು ಕಂಡಿದ್ದು, 25 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾನುವಾರ ಎರಡನೇ ಪಂದ್ಯ ನಡೆಯಲಿದ್ದು, ಮೂರನೇ ಪಂದ್ಯ ಬುಧವಾರ ನಡೆಯಲಿದೆ.

Story first published: Thursday, December 5, 2024, 19:15 [IST]
Other articles published on Dec 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+