ಟಿ20 ಕ್ರಿಕೆಟ್ ಸ್ವರೂಪದಲ್ಲಿ ವೇಗವಾಗಿ ಖ್ಯಾತಿ ಪಡೆದಿದೆ. ಯುವ ಪೀಳಿಗೆಯ ಆಟಗಾರರು ಯಾವುದೇ ಫಾರ್ಮೆಟ್ ಇದ್ದರೂ, ಈ ಆಟದ ಝಲಕ್ ನೀಡುತ್ತಾರೆ. ಭಾರತೀಯ ಆಟಗಾರರು ಸಹ ಇಂತಹ ಕಮಾಲ್ ಪ್ರದರ್ಶನ ನೀಡುವಲ್ಲಿ ಹಿಂದೆ ಬೀಳುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ, ಆಟಗಾರರು ಅಮೋಘ ಪ್ರದರ್ಶನ ನೀಡುತ್ತಾರೆ. ಸದ್ಯ ದೇಶದಲ್ಲಿ ರಣಜಿ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ. ಈ ವೇಳೆ ಮೇಘಾಲಯ ಮತ್ತು ಅರುಣಾಚಲ ಪ್ರದೇಶ ನಡುವೆ ಪಂದ್ಯದಲ್ಲಿ ಆಕಾಶ್ ಕುಮಾರ್ ಚೌಧರಿ ಎಲ್ಲರ ಗಮನ ಸೆಳೆದಿದ್ದಾರೆ.
ಪ್ಲೇಟ್ ಗ್ರುಪ್ ರಣಜಿ ಟ್ರೋಫಿಯ ಪಂದ್ಯದಲ್ಲಿ ಮೇಘಾಲಯ ಪರ ಬ್ಯಾಟ್ ಮಾಡಿದ ಆಕಾಶ್ ಚೌಧರಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅರುಣಾಚಲ ಪ್ರದೇಶದ ಆಫ್ ಸ್ಪಿನ್ನರ್ ಲಿಮರ್ ಡೇಬಿ ವಿರುದ್ಧದ 126 ನೇ ಓವರ್‌ನಲ್ಲಿ ಆಕಾಶ್ ಕುಮಾರ್ ಚೌಧರಿ ಆರು ಸಿಕ್ಸರ್‌ಗಳನ್ನು ಬಾರಿಸಿದರು. ಇನ್ನು ಮುಂದಿನ ಓವರ್‌ನಲ್ಲಿ ಆಕಾಶ್ ಟಿಎನ್‌ಆರ್ ಮೋಹಿತ್ ಅವರ ಮೇಲೆ 2 ಸಿಕ್ಸರ್ ಸಿಡಿಸಿದರು. ಈ ಮೂಲಕ ಇವರು ಸತತ ಎಂಟು ಎಸೆತಗಳಲ್ಲಿ ಎಂಟು ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಆಕಾಶ್ ಪಾಲಾಯಿತು. ಆಕಾಶ್ ತಮ್ಮ ಬಿರುಸಿನ ಬ್ಯಾಟಿಂಗ್ ಪ್ರಭಾವದಿಂದ ಐತಿಹಾಸಿಕ ಮೈಲಿಗಲ್ಲು ಮುಟ್ಟಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಮೂರನೇ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ ಹಾಗೂ ಗ್ಯಾರಿ ಸೋಬರ್ಸ್ ಕೂಡ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದರು.
ಆಕಾಶ್ ಕುಮಾರ್ ಚೌಧರಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ವೇಗದ ಆಟಗಾರ ಎಂದರು. ಇವರಿಗಿಂತ ಮೊದಲು ವೇಗದ ಅರ್ಧಶತಕ ಬಾರಿಸಿದ ದಾಖಲೆ 2012 ರಲ್ಲಿ ಲೀಸೆಸ್ಟರ್‌ಶೈರ್‌ನ ವೇಯ್ನ್ ನೈಟ್ 12 ಎಸೆತಗಳಲ್ಲಿ ಮಾಡಿದ್ದರು. ಮೇಘಾಲಯ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 628 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಅರುಣ್‌ಚಾಲ್ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 73 ರನ್ ಸೇರಿಸಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 29 ರನ್ ಸೇರಿಸಿತು.
ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳು ಕಾದಾಟ ನಡೆಸಿದವು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 313 ರನ್‌ಗಳಿಗೆ ಆಲೌಟ್ ಆಯಿತು. ಮಹಾರಾಷ್ಟ್ರ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 200 ರನ್ ಸೇರಿಸಿದೆ.ಮಹಾರಾಷ್ಟ್ರ ಪರ ಪೃಥ್ವಿ ಶಾ 9 ಬೌಂಡರಿ ನೆರವಿನಿಂದ 71 ರನ್ ಸಿಡಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶ್ರೇಯಸ್ ಗೋಪಾಲ್ 4 ವಿಕೆಟ್ ಕಬಳಿಸಿದರು. ಮಹಾರಾಷ್ಟ್ರ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 113 ರನ್ ಅವಶ್ಯಕತೆ ಇದೆ.