For Quick Alerts
ALLOW NOTIFICATIONS  
For Daily Alerts
 

Melbourne Test: ವಿರಾಟ್ ಕೊಹ್ಲಿ ಭೇಟಿ ಮಾಡಲು ಮೈದಾನದೊಳಗೆ ನುಗ್ಗಿದ ಅಭಿಮಾನಿ; ವಿಡಿಯೋ ವೈರಲ್

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಮತ್ತು ಮೆಲ್ಬೋರ್ನ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಮೆಲ್ಬೋರ್ನ್ ಸ್ಟೇಡಿಯಂನ ಭದ್ರತಾ ವ್ಯವಸ್ಥೆಗಳ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಶುಕ್ರವಾರದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ, ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸುವ ಮೂಲಕ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದು, ಸಂಚಲನ ಮೂಡಿಸಿದ್ದಾರೆ. ಮೈದಾನಕ್ಕೆ ನುಗ್ಗಿದ ಬಳಿಕ ನೇರವಾಗಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Melbourne Test Fan enters the ground to meet Virat Kohli

ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 97ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಮೈದಾನದೊಳಗೆ ನುಗ್ಗಿದ್ದನು. ಫೀಲ್ಡಿಂಗ್ ಮಾಡುತ್ತಿದ್ದ ಭಾರತ ತಂಡದ ಆಟಗಾರರ ನಡುವೆ ಅಭಿಮಾನಿ ಓಡಿ ಬಂದು ವಿರಾಟ್ ಕೊಹ್ಲಿಯ ಭುಜದ ಮೇಲೆ ಕೈ ಹಾಕಿದರು. ಮೈದಾನದಲ್ಲಿ ಈ ಘಟನೆಯಿಂದಾಗಿ ಆಟಕ್ಕೆ ಅಡ್ಡಿ ಉಂಟಾಯಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೈದಾನದೊಳಗೆ ನುಗ್ಗಿ ವ್ಯಕ್ತಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಳ್ಳಲು ಯತ್ನಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ತಕ್ಷಣ ಓಡಿ ಬಂದರು. ನಂತರ ಭದ್ರತಾ ಸಿಬ್ಬಂದಿ ಮೈದಾನದೊಳಗೆ ನುಗ್ಗಿದ ವ್ಯಕ್ತಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಇದರಿಂದಾಗಿ ಸ್ವಲ್ಪ ಸಮಯದವರೆಗೆ ಆಟವನ್ನು ನಿಲ್ಲಿಸಲಾಗಿತ್ತು. ನಂತರ ಮತ್ತೆ ಆಟ ಪ್ರಾರಂಭವಾಯಿತು. ಈ ವ್ಯಕ್ತಿ ಆರಂಭದಲ್ಲಿ ಸ್ಲಿಪ್ ಕಾರ್ಡನ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಕಡೆಗೆ ಓಡಿದರು. ಆದರೆ ಆ ವ್ಯಕ್ತಿ ಗುರಿ ವಿರಾಟ್ ಕೊಹ್ಲಿ ಆಗಿದ್ದರು.

ಮೆಲ್ಬೋರ್ನ್ ಟೆಸ್ಟ್ ಪಂದ್ಯ ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್‌ ಮತ್ತು ವಿರಾಟ್ ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಇದಾದ ನಂತರ ವಿರಾಟ್ ಕೊಹ್ಲಿ ಎರಡನೇ ದಿನದಂದು ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದರು. ಇದಲ್ಲದೆ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಮೆಲ್ಬೋರ್ನ್ ಟೆಸ್ಟ್ ಪಂದ್ಯ ಮಹತ್ವದಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಈ ಪಂದ್ಯವನ್ನು ಗೆದ್ದರೆ ಅಷ್ಟೇ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪಲಿದೆ. ಇಲ್ಲವಾದರೆ ಉಳಿದ ತಂಡಗಳ ಫಲಿತಾಂಶದ ಮೇಲೆ ಭಾರತ ಫೈನಲ್ ಆಡುವುದು ನಿರ್ಧಾರವಾಗಲಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ 2018-19 ಮತ್ತು 2020-21ರ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತ ಎರಡೂ ಸಂದರ್ಭಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು 2-1 ಅಂತರದಲ್ಲಿ ಸೋಲಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಅಡಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ 16 ಟೆಸ್ಟ್ ಸರಣಿಗಳು ನಡೆದಿವೆ. ಈ ಪೈಕಿ 10 ಟೆಸ್ಟ್ ಸರಣಿಗಳನ್ನು ಭಾರತ ಗೆದ್ದಿದೆ. ಆಸ್ಟ್ರೇಲಿಯಾ 5 ಟೆಸ್ಟ್ ಸರಣಿಗಳನ್ನು ಮಾತ್ರ ಗೆದ್ದಿದೆ. ಇದಲ್ಲದೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಒಂದು ಟೆಸ್ಟ್ ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ.

Story first published: Friday, December 27, 2024, 22:03 [IST]
Other articles published on Dec 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+