Melbourne Test: ಬುಮ್ರಾ ಬೌಲಿಂಗ್ ಎದುರಿಸುವ ಬಗ್ಗೆ ಆಸ್ಟ್ರೇಲಿಯಾದ ಯಂಗ್ ಬ್ಯಾಟರ್ ಹೇಳಿದ್ದೇನು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ 19 ವರ್ಷದ ಬ್ಯಾಟರ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಯಾಮ್ ಕಾನ್‌ಸ್ಟಾಸ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗಿದ್ದಾರೆ. ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅನ್ನು ಎದುರಿಸುವ ಬಗ್ಗೆ ಮಾತನಾಡಿದ್ದಾರೆ.
ಆಸ್ಟ್ರೇಲಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ಸ್ಯಾಮ್ ಕಾನ್‌ಸ್ಟಾಸ್ ತಯಾರಿಯಲ್ಲಿದ್ದಾರೆ. ಇದೇ ಬೇಳೆ ಬುಮ್ರಾ ಬಗ್ಗೆ ಮಾತನಾಡಿರುವ ಅವರು, ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಲು ನಾನು ತಂತ್ರವನ್ನು ಸಿದ್ಧಪಡಿಸಿದ್ದೇನೆ. ಆದರೆ ನಾನು ಅದನ್ನು ಇಲ್ಲಿ ಬಹಿರಂಗಪಡಿಸುವುದಿಲ್ಲ. ಬೌಲರ್‌ಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತೇನೆ ಎಂದು ಸ್ಯಾಮ್ ಕೊಂಟಾಸ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಮೂರು ಟೆಸ್ಟ್ ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ 4 ಬಾರಿ ಬುಮ್ರಾ ನಾಥನ್ ಮೆಕ್‌ಸ್ವೀನಿ ಅವರನ್ನು ಔಟ್ ಮಾಡಿದ್ದರು. ಇದೀಗ ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ನಾಥನ್ ಮೆಕ್‌ಸ್ವೀನಿ ಬದಲಿಗೆ ಸ್ಯಾಮ್ ಕೊಂಟಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಇದಾದ ಬಳಿಕ ನಾಥನ್ ಮೆಕ್‌ಸ್ವೀನಿ ಅವರನ್ನು ಆಸ್ಟ್ರೇಲಿಯಾ ತಂಡದಿಂದ ಕೈಬಿಡಲಾಗಿತ್ತು.
ಕೊಂಟಾಸ್ ಹೇಳಿದ್ದೇನು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಅಭ್ಯಾಸ ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಆಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಸ್ಯಾಮ್ ಕೊಂಟಾಸ್ ಉತ್ತಮ ರನ್ ಕಲೆ ಹಾಕಿದರು. ಈ ಬಗ್ಗೆ ಮಾತನಾಡಿರುವ ಅವರು, ಟೀಮ್ ಇಂಡಿಯಾದ ಎಲ್ಲರೂ ಉತ್ತಮ ಬೌಲರ್‌ಗಳೇ. ಅವರೆಲ್ಲರೂ ವಿಶ್ವ ದರ್ಜೆಯ ಬೌಲರ್‌ಗಳಾಗಿದ್ದು, ಅವರ ಸವಾಲನ್ನು ಎದುರಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಸ್ಯಾಮ್ ಕೊಂಟಾಸ್ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಕ್ರಿಸ್‌ಮಸ್ ಹಬ್ಬದಂದು ಕೊಂಟಾಸ್‌ಗೆ ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ, 'ನಾನು ನನ್ನ ಸಹೋದರನೊಂದಿಗೆ ಕ್ರಿಕೆಟ್ ಆಡುತ್ತಿದ್ದೆ. ಜೊತೆಗೆ ಸಾಕಷ್ಟು ಆಹಾರ ಸೇವಿಸುತ್ತಿದ್ದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದು ಅದ್ಭುತವಾಗಿದ್ದು, ದೇಶವನ್ನು ಪ್ರತಿನಿಧಿಸುವ ನನ್ನ ಕನಸು ನನಸಾಗಿದೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಆಡುವ ಕನಸು
ಬಾಕ್ಸಿಂಗ್ ಡೇ ಟೆಸ್ಟ್ ಆಡುವುದು ನನಗೆ ವಿಶೇಷವಾಗಿದೆ. ಏಕೆಂದರೆ ನನ್ನನ್ನು ಕ್ರಿಕೆಟ್‌ನಲ್ಲಿ ಮುನ್ನಡೆಸಲು ನನ್ನ ಪೋಷಕರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಈಗ ಅವರನ್ನು ಮರಳಿ ಕೊಡುವ ಸರದಿ ನನ್ನದು. ಈ ಹಿಂದೆ ಮೇಲ್ಬೋರ್ನ್‌ನಲ್ಲಿ ಆಡಿದ್ದಕ್ಕೆ ಹೋಲಿಸಿದರೆ ಪಿಚ್ ವಿಭಿನ್ನವಾಗಿದೆ. ಇದು ಬೌಲರ್‌ಗಳಿಗೆ ಅನುಕೂಲಕರವಾಗಿದೆ ಎಂಬುದು ತಿಳಿದಿದೆ. ಆದರೆ ಪ್ರೇಕ್ಷಕರಿಂದ ತುಂಬಿದ ಮೇಲ್ಬೋರ್ನ್ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಆಡುವುದು ಕನಸಿನ ಮಾತು ಎಂದು ಸ್ಯಾಮ್ ಕೊಂಟಾಸ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications