Nitish Kumar Reddy: ನಿತೀಶ್ ಕುಮಾರ್ ರೆಡ್ಡಿ ಪುಷ್ಪ-ಬಾಹುಬಲಿ ಶೈಲಿಯಲ್ಲಿ ಸಂಭ್ರಮಾಚರಣೆ; ವಿಡಿಯೋ ವೈರಲ್
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 83 ಸಾವಿರ ಪ್ರೇಕ್ಷಕರ ಮುಂದೆ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸಂಚಲನ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿತೀಶ್ ಕುಮಾರ್ ಅದ್ಭುತ ಶತಕ ಬಾರಿಸಿದ್ದಾರೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ (ಡಿಸೆಂಬರ್ 28) ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ನಿತೀಶ್ ಅಜೇಯ 105 ರನ್ ಗಳಿಸಿದ್ದಾರೆ. ಈ ವೇಳೆ ನಿತೀಶ್ ಕುಮಾರ್ ಅವರ 'ಪುಪ್ಪ ಮತ್ತು ಬಾಹುಬಲಿ' ಸಿನಿಮಾ ಹೀರೋಗಳ ಶೈಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯದ ವೇಳೆಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 358 ರನ್ ಕಲೆ ಹಾಕಿದೆ. ಸದ್ಯ ಟೀಮ್ ಇಂಡಿಯಾ 116 ರನ್ ಹಿನ್ನಡೆಯಲ್ಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 474 ರನ್ ಗಳಿಸಿತ್ತು. ಫಾಲೋ ಆನ್ ಭೀತಿಯಲ್ಲಿದ್ದ ಭಾರತವನನ್ನು ಶತಕ ಬಾರಿಸಿ ನಿತೀಶ್ ಕುಮಾರ್ ಬಚಾವ್ ಮಾಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ನಿತೀಶ್‌ಕುಮಾರ್ ಅವರ ಪೋಸ್ಟ್ ಬಗ್ಗೆ ಇಲ್ಲಿದೆ ಮಾಹಿತಿ.

ಮೆಲ್ಬೋರ್ನ್ ಟೆಸ್ಟ್ ಪಂದ್ಯದ ವೇಳೆ ನಿತೀಶ್ ಕುಮಾರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅವರು ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಗಳಿಸಿದ ನಂತರ ಪುಷ್ಪ ಸಿನಿಮಾದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಅವರ ಶೈಲಿಯಲ್ಲಿ ಸಂಭ್ರಮಿಸಿದರು. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ತನ್ನ ಕೈಯನ್ನು ಕುತ್ತಿಗೆಯ ಗಡ್ಡದ ಕೆಳಗೆ ತೆಗೆದುಕೊಳ್ಳುತ್ತಾರೆ. ಇದನ್ನೇ ನಕಲು ಮಾಡಿದ ನಿತೀಶ್ ತನ್ನ ಕತ್ತಿನ ಕೆಳಗೆ ಬ್ಯಾಟ್ ತೆಗೆದುಕೊಂಡು ಸಂಭ್ರಮಿಸಿದರು.
ನಿತೀಶ್ ಮೊದಲ ಅರ್ಧಶತಕವನ್ನು ಮೊದಲ ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ ಅವರ ಹೆಸರು ಮೈದಾನದಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಶತಕ ಗಳಿಸುತ್ತಿದ್ದಾಗ ನಿತೀಶ್ ಒಂದು ಕೈಯಿಂದ ತಮ್ಮ ಬ್ಯಾಟ್ ಅನ್ನು ನೆಲದ ಮೇಲೆ ಇರಿಸಿದರು. ಆ ಬಳಿಕ ಬ್ಯಾಟ್ ಮೇಲೆ ಹೆಲ್ಮೆಟ್ ಹಾಕಿ 'ಬಾಹುಬಲಿ' ಸಿನಿಮಾದಲ್ಲಿ ನಟ ಪ್ರಭಾಸ್‌ನಂತೆ ಸಂಭ್ರಮಿಸಿದರು. ನಿತೀಶ್ ಅವರ ಈ ಎರಡೂ ಸಿನಿಮಾ ಶೈಲಿಗಳ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನೆಟಿಗರು ವಿಡಿಯೋ ನೋಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅದ್ಭುತ ಜೊತೆಯಾಟ
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೂರನೇ ದಿನದಂದು ನಿತೀಶ್ ಕುಮಾರ್ ಟೀಮ್ ಇಂಡಿಯಾ ಪರ ಹೀರೋ ಆದರು. ಮೆಲ್ಬೋರ್ನ್ ಸ್ಟೇಡಿಯಂನಲ್ಲಿ 83073 ಪ್ರೇಕ್ಷಕರ ಮುಂದೆ ಆತಿಥೇಯ ತಂಡದ ವಿರುದ್ಧ ಅದ್ಭುತ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು. ತಮ್ಮ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ನಿತೀಶ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಜೊತೆಗೂಡಿ ಎಂಟನೇ ವಿಕೆಟ್‌ಗೆ 127 ರನ್‌ಗಳ ಜೊತೆಯಾಟ ಆಡಿದರು. ವಾಷಿಂಗ್ಟನ್ ಸುಂದರ್ ತಾಳ್ಮೆಯುತ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಗಳಿಸಿದರು. ಅವರು ಕೂಡ ಅಜೇಯ 50 ರನ್ ಗಳಿಗೆ ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications