Melbourne Test: ಕುತೂಹಲ ಘಟ್ಟದತ್ತ ಟೆಸ್ಟ್: ಸೋಲು, ಗೆಲುವು, ಡ್ರಾ ಎಲ್ಲವೂ ಸಾಧ್ಯತೆ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿತು. ಈ ವೇಳೆ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದ ಫಲವಾಗಿ, ಆತಿಥೇಯ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವತ್ತ ದಾಪುಗಾಲು ಇಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಇನ್ನು ಒಂದು ವಿಕೆಟ್ ಅವಶ್ಯಕತೆ ಇದ್ದು, ಬಳಿಕ ಆಸೀಸ್ ನೀಡುವ ಗುರಿಯನ್ನು ಹಿಂಬಾಲಿಸುವ ಅವಶ್ಯಕತೆ ಇದೆ.
ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ರೋಚಕತೆ ಹೆಚ್ಚಿಸಿದೆ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಆಸ್ಟ್ರೇಲಿಯಾದ ಬ್ಯಾಟರ್‌ಗಳ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಈಗಾಗಲೇ ಸವಾಲಿನ ಮೊತ್ತದತ್ತ ದಾಪುಗಾಲು ಇಟ್ಟಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಫಲಿತಾಂಶ ಏನು ಆಗುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾಕ್ಕೆ ಗೆಲುವು
ಮೂರನೇ ಟೆಸ್ಟ್ ಪಂದ್ಯದಲ್ಲಿ ಈಗ ಮೂರು ಫಲಿತಾಂಶಗಳು ಸಾಧ್ಯತೆ ಇವೆ. ಈ ಫಲಿತಾಂಶಗಳನ್ನು ಟೀಮ್ ಇಂಡಿಯಾದ ಅಭಿಮಾನಿಗಳಿಗೆ ತುಂಬ ಖುಷಿ ನೀಡುವ ವಿಚಾರ ಅಂದರೆ, ಗೆಲುವು. ಸೋಮವಾರದ ದಿನದಾಟದಲ್ಲಿ ಆಸೀಸ್ ಬ್ಯಾಟರ್‌ಗಳನ್ನು ಬೇಗನೆ ಕಟ್ಟಿ ಹಾಕಿ, ಟೀಮ್ ಇಂಡಿಯಾ ಎಚ್ಚರಿಕೆಯಿಂದ ಗುರಿ ಬೆನ್ನು ಹತ್ತುವ ಅನಿವಾರ್ಯತೆ ಇದೆ. ಈ ವೇಳೆ ಟೀಮ್ ಇಂಡಿಯಾ ಕನಿಷ್ಠ ಪ್ರತಿ ಓವರ್‌ಗೆ ಮೂರು ರನ್ ನಂತೆ ರನ್ ಕಲೆ ಹಾಕುತ್ತಲೇ ಸಾಗಬೇಕಾಗುತ್ತದೆ. (ಈಗಿನ ರನ್ ಸ್ಕೋರ್ ಲೆಕ್ಕಾಚಾರದ ಮೇಲೆ). ಅಲ್ಲದೆ ಟೀಮ್ ಇಂಡಿಯಾದ ಆಟಗಾರರು ಕೆಚ್ಚೆದೆಯ ಆಟವನ್ನು ಆಡುವ ಅನಿವಾರ್ಯತೆ ಇದೆ. ಈ ವೇಳೆ ಟಾಪ್ ಆರ್ಡರ್ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟಿಂಗ್ ಮಾಡುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಗೆಲುವು ಸಾಧ್ಯ.

ಮೆಲ್ಬೋರ್ನ್ ಟೆಸ್ಟ್ ಡ್ರಾ
ಆಸ್ಟ್ರೇಲಿಯಾ ನೀಡುವ ಗುರಿಯ ಮೇಲೆ ಈ ಫಲಿತಾಂಶ ನಿರ್ಧಾರವಾಗುತ್ತದೆ. ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರಿನ ಬಳಿಕ ಅತಿ ಹೆಚ್ಚಿನ ನಿರೀಕ್ಷೆ ಇರುವುದೇ ಡ್ರಾ. ಈ ಸಾಧ್ಯತೆಗಾಗಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ಕನಿಷ್ಠ 80ಕ್ಕೂ ಹೆಚ್ಚು ಓವರ್‌ಗಳಲ್ಲಿ ನೆಲಕಚ್ಚಿ ಬ್ಯಾಟ್ ಮಾಡುವ ಅವಶ್ಯಕತೆ ಇದೆ.
ಆಸ್ಟ್ರೇಲಿಯಾ ಗೆಲುವು
ಟೀಮ್ ಇಂಡಿಯಾ ಆಟಗಾರರು ಸರಣಿಯಲ್ಲಿ ಆಡಿರುವ ಧಾಟಿಯನ್ನು ನೋಡಿದರೆ, ಎಲ್ಲ ಫಲಿತಾಂಶಗಳು ಜೀವಂತವಾಗಿವೆ ಎಂದು ಅನಿಸುತ್ತದೆ. ಈಗಾಗಲೇ ಟೀಮ್ ಇಂಡಿಯಾ ಹೊಸ ಚೆಂಡನ್ನು ಪಡೆದುಕೊಂಡಿದೆ. ಈ ಹೊಸ ಚೆಂಡಿನೊಂದಿಗೆ ಆಸೀಸ್ ಬೌಲರ್‌ಗಳು ಅಮೋಘ ದಾಳಿಯನ್ನು ಸಂಘಟಿಸಬಲ್ಲರು. ಇವರ ಶಿಸ್ತು ಬದ್ಧ ದಾಳಿಯನ್ನು ಟೀಮ್ ಇಂಡಿಯಾ ಆಟಗಾರರು ಆಡುವಲ್ಲಿ ವಿಫಲರಾದರೆ ಫಲಿತಾಂಶ ಅಭಿಮಾನಿಗಳಿಗೆ ಬೇಸರ ತರಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications