IND vs AUS: ಯಶಸ್ವಿ ಜೈಸ್ವಾಲ್ ರನೌಟ್‌ನಲ್ಲಿ ವಿರಾಟ್ ಕೊಹ್ಲಿ ತಪ್ಪೇನು?
ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ (82 ರನ್) ರನೌಟ್ ಆಗಿದ್ದು, ಡ್ರೆಸ್ಸಿಂಗ್ ರೂಮ್‌ನಿಂದ ಭಾರತೀಯ ಅಭಿಮಾನಿಗಳವರೆಗೆ ಎಲ್ಲರಿಗೂ ಬೇಸರಪಡಿಸಿದೆ. ವಿರಾಟ್ ಕೊಹ್ಲಿ (36 ರನ್) ಅವರೊಂದಿಗೆ ಬ್ಯಾಟಿಂಗ್ ಮಾಡುವಾಗ ಯಶಸ್ವಿ ಜೈಸ್ವಾಲ್ ರನೌಟ್ ಆದರು. ಯಶಸ್ವಿ ಜೈಸ್ವಾಲ್ ರನೌಟ್‌ನಲ್ಲಿ ವಿರಾಟ್ ಕೊಹ್ಲಿ ತಪ್ಪೇ? ಎಂಬುದು ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಬಗ್ಗೆ ಭಾರತ ತಂಡದ ಇಬ್ಬರು ಮಾಜಿ ಆಟಗಾರರ ನಡುವೆ ವಾಗ್ವಾದ ನಡೆದಿದೆ. ಈ ವೀಡಿಯೊ ಕೂಡ ವೈರಲ್ ಆಗುತ್ತಿದೆ.
ಯಶಸ್ವಿ ಜೈಸ್ವಾಲ್ ಅವರ ರನೌಟ್ ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಟೀಮ್ ಇಂಡಿಯಾ ಪರ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಜೈಸ್ವಾಲ್ ಮತ್ತೊಂದು ಶತಕ ಬಾರಿಸುವ ವಿಶ್ವಾಸದಲ್ಲಿದರು. ಆದರೆ, ಯಶಸ್ವಿ ಜೈಸ್ವಾಲ್ ರನೌಟ್‌ಗೆ ಬಲಿ ಆಗಬೇಕಾಯಿತು.

ಆಗಿದ್ದೇನು?
ಯಶಸ್ವಿ ಮತ್ತು ವಿರಾಟ್ ಕೊಹ್ಲಿ ಅವರ ಶತಕದ ಜೊತೆಯಾಟ ಆಡುವ ಮೂಲಕ ಕ್ರೀಸ್‌ನಲ್ಲಿದ್ದರು. ಭಾರತದ ಮೊದಲ ಇನಿಂಗ್ಸ್‌ನ 41ನೇ ಓವರ್‌ನಲ್ಲಿ ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ಅವರ ಕೊನೆಯ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ರನೌಟ್ ಆದಾಗ ಇಬ್ಬರ ನಡುವೆ 102 ರನ್ ಗಳ ಜೊತೆಯಾಟವಿತ್ತು. ಬೋಲ್ಯಾಂಡ್ ಬೌಲ್ ಮಾಡಿದ ಫುಲ್ ಲೆಂಗ್ತ್ ಚೆಂಡನ್ನು ಆಫ್ ಸ್ಟಂಪ್ ಮೇಲೆ ಜೈಸ್ವಾಲ್ ಮಿಡ್ ಆನ್‌ಗೆ ಹೊಡೆದು ರನ್ ಕದಿಯಲು ಪ್ರಯತ್ನಿಸಿದರು. ಆದರೆ, ನಾನ್ ಸ್ಟ್ರೈಕರ್ ಕೊನೆಯಲ್ಲಿ, ವಿರಾಟ್ ಕೊಹ್ಲಿ ಫೀಲ್ಡರ್ ನೋಡಿದ ನಂತರ ಸಿಂಗಲ್ ತೆಗೆದುಕೊಳ್ಳದಿರಲು ನಿರ್ಧರಿಸಿದರು.
ಅಷ್ಟೊತ್ತಿಗೆ ಯಶಸ್ವಿ ಜೈಸ್ವಾಲ್ ಬಹುತೇಕ ನಾನ್ ಸ್ಟ್ರೈಕರ್ ಕಡೆ ಬಂದಿದ್ದರು. ಪ್ಯಾಟ್ ಕಮ್ಮಿನ್ಸ್ ಮಿಡ್-ಆನ್‌ನಲ್ಲಿ ನಿಂತು ವೇಗವಾಗಿ ಚೆಂಡನ್ನು ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಅವರಿಗೆ ಎಸೆದರು. ಈ ವೇಳೆ ಯಾವುದೇ ತಪ್ಪು ಮಾಡದೆ ಅಲೆಕ್ಸ್ ಕ್ಯಾರಿ ಅವರು ಜೈಸ್ವಾಲ್ ರನೌಟ್ ಮಾಡಿದರು.
ಮಾಜಿ ಆಟಗಾರರ ನಡುವೆ ವಾಗ್ವಾದ
ಯಶಸ್ವಿ ಜೈಸ್ವಾಲ್ ರನೌಟ್‌ನಲ್ಲಿ ವಿರಾಟ್ ಕೊಹ್ಲಿ ತಪ್ಪೇನು? ಎಂಬುದು ಹಲವರ ಪ್ರಶ್ನೆಯಾಗಿದೆ. ಈ ಕುರಿತು ಭಾರತ ತಂಡದ ಮಾಜಿ ಆಟಗಾರರಾದ ಸಂಜಯ್ ಮಂಜ್ರೇಕರ್ ಮತ್ತು ಇರ್ಫಾನ್ ಪಠಾಣ್ ನಡುವೆ ಲೈವ್ ಟಿವಿಯಲ್ಲಿ ವಾಗ್ವಾದ ನಡೆದಿದೆ. ಯಶಸ್ವಿ ಜೈಸ್ವಾಲ್ ರನೌಟ್ ಆಗಲು ಕೊಹ್ಲಿಯೇ ಕಾರಣ ಎಂದು ಮಂಜ್ರೇಕರ್ ಆರೋಪಿಸಿದರೆ, ಕೊಹ್ಲಿ ಕೂಡ ರನೌಟ್ ಆಗುವ ಭೀತಿಯಲ್ಲಿದ್ದರೂ ಎಂದು ಇರ್ಫಾನ್ ಹೇಳಿದ್ದಾರೆ. ಪಠಾಣ್ ತಮ್ಮ ವಿಷಯವನ್ನು ಒತ್ತಿಹೇಳಲು ಪ್ರಯತ್ನಿಸಿದಾಗ, ಮಂಜ್ರೇಕರ್ ಸಹ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಇದಾದ ಬಳಿಕ ಕೊಹ್ಲಿ ಅವರದೆ ತಪ್ಪು ಎಂದು ಹೇಳಿದ್ದಾರೆ. ಈಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೈಸ್ವಾಲ್ ರನ್ ಕದಿಯಲು ಮುಂದದಾಗ ಕೊಹ್ಲಿ ಚೆಂಡನ್ನು ನೋಡುತ್ತಿದ್ದರು. ಆದರೆ ಜೈಸ್ವಾಲ್ ರನ್ ಗಳಿಸಲು ವೇಗವಾಗಿ ಓಡಿ ಬಂದಿರುವುದು ಕೊಹ್ಲಿ ಅವರಿಗೆ ತಿಳಿದಿರಲಿಲ್ಲ. ರನ್‌ಗಳನ್ನು ತೆಗೆದುಕೊಳ್ಳುವಂತೆ ಕರೆ ಜೈಸ್ವಾಲ್‌ನಿಂದ ಬಂದಿದ್ದು, ವಿರಾಟ್ ತಕ್ಷಣವೇ ರನ್‌ಗಾಗಿ ಓಡಿದ್ದರೆ, ಸಿಂಗಲ್ ಅನ್ನು ಸುಲಭವಾಗಿ ಪೂರ್ಣಗೊಳಿಸುವ ಸಾಧ್ಯತೆಯೂ ಇತ್ತು. ಮೂರನೇ ವಿಕೆಟ್‌ಗೆ ಅವರ 102 ರನ್‌ಗಳ ಜೊತೆಯಾಟವು ಆಸ್ಟ್ರೇಲಿಯಾವನ್ನು ಒತ್ತಡಕ್ಕೆ ಸಿಲುಕಿಸಿತು. ಆದರೆ ಜೈಸ್ವಾಲ್ ವಿಕೆಟ್ ಆತಿಥೇಯ ತಂಡವನ್ನು ಮುನ್ನಡೆ ಸಾಧಿಸುವಂತೆ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications