For Quick Alerts
ALLOW NOTIFICATIONS  
For Daily Alerts
 

Melbourne Test: ಯಶಸ್ವಿ ಜೊತೆ ರೋಹಿತ್ ಓಪನರ್; ರಾಹುಲ್ ಸ್ಥಾನವೇನು?

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ಡಬ್ಲ್ಯೂಟಿಸಿ) ಫೈನಲ್ ತಲುಬೇಕಾದರೆ ಭಾರತ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕು. ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಲು ಭಾರತ ತಂಡ ದೊಡ್ಡ ತಂತ್ರವನ್ನೇ ಮಾಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮಾ ಭರ್ಜರಿ ರಣತಂತ್ರವನ್ನೇ ಸಿದ್ಧಪಡಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ತೆರೆಯುವ ಅವಕಾಶವನ್ನು ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಕಳೆದುಕೊಳ್ಳಬಹುದು. ಯಶಸ್ವಿ ಜೈಸ್ವಾಲ್ ಜೊತೆಗೆ ರೋಹಿತ್ ಶರ್ಮಾ ಇನ್ನಿಂಗ್ಸ್ ತೆರೆಯಬಹುದು ಎಂದು ವರದಿಗಳು ಹೇಳಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ.

Melbourne Test Yashasvi Jaiswal and Rohit Sharma will open for Team India what is the position for KL Rahul

ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾದ ಕಾರಣ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಭಾಗವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಮ್ಯಾನೇಜ್ಮೆಂಟ್ ಮಧ್ಯಮ ಕ್ರಮಾಂಕದಿಂದ ಕೆಎಲ್ ರಾಹುಲ್ ಅವರನ್ನು ಕರೆತಂದು ಇನ್ನಿಂಗ್ಸ್ ಆರಂಭಿಕರಾಗಿ ಮಾಡಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದರು. ಆದರೆ, ಅಡಿಲೇಡ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಕಮ್ ಬ್ಯಾಕ್ ಮಾಡಿದಾಗ ಅವರಿಗೆ ಓಪನ್ ಮಾಡುವ ಅವಕಾಶ ಸಿಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ರೋಹಿತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ರನ್ ಗಳಿಸುವಲ್ಲಿ ಹಿಂದೆ ಉಳಿದರು. ರೋಹಿತ್ 2 ಟೆಸ್ಟ್ ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 19 ರನ್ ಗಳಿಸಿದರು. ವರದಿಗಳ ಪ್ರಕಾರ, ರೋಹಿತ್ ಶರ್ಮಾ ಮತ್ತೆ ತಮ್ಮ ಹಳೆಯ ಸ್ಥಾನಕ್ಕೆ ಮರಳಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಆಗಬಹುದು. ಆಗ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಬಹುದು. ಮೂರನೇ ಕ್ರಮಾಂಕದಲ್ಲಿಯೂ ರಾಹುಲ್ ಯಶಸ್ಸು ಕಂಡಿದ್ದಾರೆ.

ರೋಹಿತ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 9 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು, 437 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ 3 ಅರ್ಧ ಶತಕಗಳು ಸೇರಿವೆ. ಆರಂಭಿಕರಾಗಿ ರೋಹಿತ್ 42 ಪಂದ್ಯಗಳ 62 ಇನ್ನಿಂಗ್ಸ್‌ಗಳಲ್ಲಿ 2685 ರನ್ ಗಳಿಸಿದ್ದಾರೆ. ಈ ವೇಳೆ ರೋಹಿತ್ 9 ಶತಕ ಹಾಗೂ 8 ಅರ್ಧ ಶತಕ ಸಿಡಿಸಿದ್ದಾರೆ.

ರಾಹುಲ್ ಖದರ್

ಆರಂಭಿಕರಾಗಿ ಕೆಎಲ್‌ ರಾಹುಲ್ 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 235 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 84 ರನ್. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದು, ಒಟ್ಟಾರೆ ಸರಣಿಯಲ್ಲಿ ಎರಡನೇ ಬ್ಯಾಟರ್. ರಾಹುಲ್ ತಮ್ಮ ವೃತ್ತಿಜೀವನವನ್ನು ಆರಂಭಿಕರಾಗಿ ಆರಂಭಿಸಿದರು. ಅವರು 52 ಪಂದ್ಯಗಳ 81 ಇನ್ನಿಂಗ್ಸ್‌ಗಳಲ್ಲಿ 2786 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 7 ಶತಕ ಮತ್ತು 14 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

Story first published: Wednesday, December 25, 2024, 16:06 [IST]
Other articles published on Dec 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+