For Quick Alerts
ALLOW NOTIFICATIONS  
For Daily Alerts
 

Men's Emerging Asia Cup 2023: ಉದಯೋನ್ಮುಖ ಏಷ್ಯಾ ಕಪ್‌ಗಾಗಿ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ

ಜುಲೈನಲ್ಲಿ ಶ್ರೀಲಂಕಾದಲ್ಲಿ ಆರಂಭವಾಗುವ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ತನ್ನ 15 ಸದಸ್ಯರ ತಂಡವನ್ನು ಬುಧವಾರ, ಜೂನ್ 28ರಂದು ಪ್ರಕಟಿಸಿದೆ.

ಹಿರಿಯರ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದ್ದ ಸೌಮ್ಯ ಸರ್ಕಾರ್ ಎಂಟು ರಾಷ್ಟ್ರಗಳ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಆಡುವ 15 ಸದಸ್ಯರ ಬಾಂಗ್ಲಾದೇಶ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ಬ್ಯಾಟರ್ ಬಾಂಗ್ಲಾದೇಶ ರಾಷ್ಟ್ರೀಯ ತಂಡಕ್ಕಾಗಿ ನವೆಂಬರ್ 2022ರಲ್ಲಿ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು.

Mens Emerging Asia Cup 2023: Saif Hassan-led Bangladesh Squad Announced For Emerging Asia Cup

ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ ಸೌಮ್ಯ ಸರ್ಕಾರ್ ಅವರ ಫಾರ್ಮ್ ಕಳಪೆಯಾಗಿತ್ತು. ನೀರಸ ಫಾರ್ಮ್‌ನಿಂದಾಗಿ ಕಳೆದ ಋತುವಿನಲ್ಲಿ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಅವರ ಕ್ಲಬ್ ತಂಡವಾದ ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್‌ ತಂಡದಿಂದಲೂ ಅವರನ್ನು ಹೊರಹಾಕಲಾಗಿತ್ತು.

ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯು ಸೌಮ್ಯ ಸರ್ಕಾರ್ ಅವರ ವೃತ್ತಿಜೀವನವನ್ನು ಉತ್ತಮಪಡಿಸಿಕೊಳ್ಳುವ ಅವಕಾಶವನ್ನು ನೀಡುತ್ತಿದೆ. ಈವರೆಗೆ 16 ಟೆಸ್ಟ್, 61 ಏಕದಿನ ಮತ್ತು 72 ಟಿ20 ಪಂದ್ಯಗಳನ್ನು ಆಡಿರುವ ಸೌಮ್ಯ ಸರ್ಕಾರ್ ಅವರು ಬಾಂಗ್ಲಾದೇಶ ಎ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರನಾಗಿದ್ದಾರೆ.

Mens Emerging Asia Cup 2023: Saif Hassan-led Bangladesh Squad Announced For Emerging Asia Cup

ಸೈಫ್ ಹಸನ್ ಬಾಂಗ್ಲಾದೇಶ ಎ ತಂಡದ ನಾಯಕರಾಗಿ ಆಯ್ಕೆ

24 ವರ್ಷದ ಸೈಫ್ ಹಸನ್ ಅವರನ್ನು ಬಾಂಗ್ಲಾದೇಶ ಎ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಲಗೈ ಆಟಗಾರ ಬಾಂಗ್ಲಾದೇಶ ಪರ ಆರು ಟೆಸ್ಟ್ ಹಾಗೂ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹಸನ್ ಅವರ ರನ್‌ಗಳು ಉತ್ತಮವಾಗಿವೆ. ಆಡಿದ 105 ಪಂದ್ಯಗಳಲ್ಲಿ ಅವರು 38.89ರ ಸರಾಸರಿಯಲ್ಲಿ 3812 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧ 21ನೇ ಶತಮಾನದಲ್ಲಿ ರನ್‌ಗಳ ಲೆಕ್ಕದಲ್ಲಿ ಅತಿದೊಡ್ಡ ಟೆಸ್ಟ್ ಗೆಲುವು ದಾಖಲಿಸಿದ ಬಾಂಗ್ಲಾದೇಶ ತಂಡದ ಭಾಗವಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಝಾಕಿರ್ ಹಸನ್ ಕೂಡ ಉದಯೋನ್ಮುಖ ಏಷ್ಯಾ ಕಪ್ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ಬ್ಯಾಟರ್ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 95 ಎಸೆತಗಳಲ್ಲಿ 71 ರನ್ ಬಾರಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ಮೊಹಮ್ಮದ್ ನಯಿಮ್, ಮಹೇದಿ ಹಸನ್, ಪರ್ವೇಜ್ ಹೊಸೈನ್ ಎಮೋನ್ ಮತ್ತು ಮೃತುನ್‌ಜೋಯ್ ಚೌಧುರಿ ಅವರಂತಹ ಆಟಗಾರರು ಕೂಡ ಬಾಂಗ್ಲಾದೇಶ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Mens Emerging Asia Cup 2023: Saif Hassan-led Bangladesh Squad Announced For Emerging Asia Cup

ಮಹೇದಿ ಹಸನ್ ಮತ್ತು ಅನ್ ಕ್ಯಾಪ್ಡ್ ರಕಿಬುಲ್ ಹಸನ್ ಬಾಂಗ್ಲಾದೇಶ ತಂಡದಲ್ಲಿರುವ ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾಗಿದ್ದಾರೆ. ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನ ಎ, ಓಮನ್ ಮತ್ತು ಯುಎಇ ಜೊತೆಗಿನ ಬಿ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ.

2023ರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಗಾಗಿ ಬಾಂಗ್ಲಾದೇಶ ಎ ತಂಡ

ಸೈಫ್ ಹಸನ್ (ನಾಯಕ), ಪರ್ವೇಜ್ ಹೊಸೈನ್ ಎಮನ್, ತಂಜಿದ್ ಹಸನ್, ಶಹದತ್ ಹೊಸೈನ್, ಮಹ್ಮುದುಲ್ ಹಸನ್ ಜಾಯ್, ಜಾಕಿರ್ ಹಸನ್, ಸೌಮ್ಯ ಸರ್ಕಾರ್, ಮಹೇದಿ ಹಸನ್, ರಕಿಬುಲ್ ಹಸನ್, ಮೃತುಂಜೋಯ್ ಚೌಧರಿ, ತಂಜಿಮ್ ಹಸನ್, ರಿಪಾನ್ ಮೊಂಡೋಲ್, ಮುಸ್ಫಿಕ್ ಹಸನ್, ಅಕ್ಬರ್ ಅಲಿ, ಮೊಹಮ್ಮದ್ ನಯಿಮ್.

Story first published: Thursday, June 29, 2023, 8:28 [IST]
Other articles published on Jun 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+