Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಿಯೋನೆಲ್ ಮೆಸ್ಸಿ ಬಳಿಕ ಕ್ರಿಸ್ಟಿಯಾನೊ ಭಾರತಕ್ಕೆ ಭೇಟಿ

ಈ ವರ್ಷದ ಅಂತ್ಯದಲ್ಲಿ ನಿಜಕ್ಕೂ ಫುಟ್ಬಾಲ್ ಅಭಿಮಾನಿಗಳಿಗೆ ಹಬ್ಬದೂಟ. ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬರಲಿದೆ. ಈ ಬಗ್ಗೆ ಈಗ ಚರ್ಚೆಗಳು ಸಹ ಜೋರಾಗಿವೆ. ಮೆಸ್ಸಿ ಭಾರತದ ಭೇಟಿಯ ವೇಳೆ ಎಲ್ಲಿ ಎಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅಲ್ಲದೆ ಈ ಪ್ರವಾಸದ ದಿನಾಂಕ ಸಹ ಹೊರ ಬಿದ್ದಿದೆ. ಇದೇ ಭೇಟಿಯ ವೇಳೆ ಮೆಸ್ಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಇದೇ ವೇಳೆ ಈಗ ಮತ್ತೊಂದು ಸುದ್ದಿ ಹೊರ ಬರುತ್ತಿದೆ. ಇದರ ಅನ್ವಯ ಭಾರತಕ್ಕೆ ಮತ್ತೊಬ್ಬ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಹ ಭೇಟಿ ನೀಡಲಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಸಹ ಭಾರತಕ್ಕೆ ಬರುವ ಸಾಧ್ಯತೆ ಇದೆ. ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ 2025-26ರ ಡ್ರಾದಲ್ಲಿ ಎಫ್‌ಸಿ ಗೋವಾ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಪ್ರತಿನಿಧಿಸುವ ಅಲ್-ನಾಸರ್ ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದಿದೆ. ಲೀಗ್‌ನಲ್ಲಿ ಸ್ಥಾನ ಪಡೆದ ಎರಡನೇ ಭಾರತೀಯ ತಂಡ ಎಂಬ ಹೆಗ್ಗಳಿಕೆ ಮೋಹನ್ ಬಗಾನ್ ತಂಡದ್ದಾಗಿದೆ. ಈ ತಂಡ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

Messi and Ronaldo s India Visit Football Fans Await a Double Treat

ಎಎಫ್‌ಸಿ ಕಪ್‌ ಪಂದ್ಯಗಳು ಸೆಪ್ಟಂಬರ್ 16 ರಿಂದ ಆರಂಭವಾಗಲಿವೆ. ಈ ಟೂರ್ನಿಯ ಗುಂಪು ಹಂತದ ಪಂದ್ಯಗಳು ಡಿಸೆಂಬರ್‌ 24 ರಂದು ಮುಗಿಯಲಿವೆ. 2026ರ ಫೆಬ್ರವರಿ 10 ರಿಂದ 19ರ ವರೆಗೆ ಪ್ರಿ ಕ್ವಾರ್ಟರ್ ಫೈನಲ್‌ ಹಾಗೂ ಮಾರ್ಚ್ 3 ರಿಂದ 12ರ ವರೆಗೆ ಕ್ವಾರ್ಟರ್ ಫೈನ್‌ ಪಂದ್ಯಗಳು, ಏಪ್ರಿಲ್‌ 7 ರಿಂದ 15 ರ ನಡುವೆ ಉಪಾಂತ್ಯ ಪಂದ್ಯಗಳು ನಡೆದಿವೆ. ಈ ಟೂರ್ನಿಯ ಚಾಂಪಿಯನ್ ಪಟ್ಟಕ್ಕಾಗಿ ಪಂದ್ಯ ಮೇ 16 ರಂದ ನಡೆಯಲಿದೆ. ರೊನಾಲ್ಡೊ ಜೊತೆಗೆ, ಸೇರಿದಂತೆ ಇನ್ನು ಹಲವು ಸ್ಟಾರ್ ಫುಟ್ಬಾಲ್ ಆಟಗಾರರು ಭಾರತಕ್ಕೆ ಪಂದ್ಯ ಆಡಲು ಬರಬಹುದಾಗಿದೆ.

ಭಾರತಕ್ಕೆ ಬರುತ್ತಾರಾ ಕ್ರಿಸ್ಟಿಯಾನೊ?

ಪೋರ್ಚಗಲ್‌ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಲ್‌ ನಾಸರ್ ಕ್ಲಬ್‌ ಜೊತೆಗೆ ತಮ್ಮ ಒಪ್ಪಂದವನ್ನು ಮುಂದುವರೆಸಿದ್ದಾರೆ. ಈ ಒಪ್ಪಂದದಲ್ಲಿ ರೊನಾಲ್ಡೊ ಬಯಸಿದಲ್ಲಿ ವಿದೇಶಿ ಪಂದ್ಯಗಳಿಂದ ಹೊರಗುಳಿಯಬಹುದು ಎಂಬ ಷರತ್ತಿದೆ. ಎಎಫ್‌ಸಿ ಟೂರ್ನಿಯ ಡಿ ಗುಂಪಿನಲ್ಲಿ ಎಸ್‌ಸಿ ಗೋವಾ ಹಾಗೂ ಅಲ್‌ ನಾಸರ್ ತಂಡಗಳು ಲೀಗ್‌ ಹಂತದಲ್ಲಿ ಎರಡು ಬಾರಿ ಮುಖಾಮುಖಿ ಆಗಲಿವೆ. ಒಂದು ಪಂದ್ಯ ರಿಯಾದ್‌ನಲ್ಲಿ ನಡೆದರೆ, ಇನ್ನೊಂದು ಪಂದ್ಯ ಭಾರತದಲ್ಲಿ ನಡೆಯಲಿದೆ. ಇನ್ನು ರೊನಾಲ್ಡೊ ಭಾರತದಲ್ಲಿ ತಮ್ಮ ಪಂದ್ಯವನ್ನು ಆಡಲು ತಪ್ಪಿಸಿಕೊಳ್ಳದೇ ಇದಲ್ಲಿ, ಭಾರತ ಪ್ರವಾಸ ಬೆಳೆಸಲಿದ್ದಾರೆ.

Story first published: Saturday, August 16, 2025, 8:10 [IST]
Other articles published on Aug 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+