Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs GT IPL 2025: ಆರ್‌ಸಿಬಿ ಮಾಜಿ ವೇಗಿಯ ಆರ್ಭಟ: ಗುಜರಾತ್‌ ಗೆಲುವಿಗೆ 170 ರನ್‌ ಗುರಿ

ರಾಯಲ್‌ ಚಾಲೆಂಜರ್ಸ್‌ ತಂಡ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದ ಮೊಹಮ್ಮದ್‌ ಸಿರಾಜ್‌ ಈಗ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕೆ ಇಳಿದು ಅಬ್ಬರಿಸಿದ್ದಾರೆ. ಪವರ್ ಫುಲ್ ಪ್ರದರ್ಶನ ನೀಡಿರುವ ಸಿರಾಜ್‌ ಅಮೂಲ್ಯ ಮೂರು ವಿಕೆಟ್‌ ಪಡೆದು ಆರ್‌ಸಿಬಿ ಬ್ಯಾಟಿಂಗ್‌ ಗೆ ಪೆಟ್ಟು ನೀಡಿದರು. ಪರಿಣಾಮ ಬ್ಯಾಟಿಂಗ್‌ ಸ್ವರ್ಗದಲ್ಲಿ ಆರ್‌ಸಿಬಿ ಬೃಹತ್‌ ಮೊತ್ತದ ಕನಸಿಗೆ ಪೆಟ್ಟು ಬಿದ್ದಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರ ಭರ್ಜರಿ ಅರ್ಧಶತಕದ ಬಲದಿಂದ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕರಾದ ವಿರಾಟ್‌ ಕೊಹ್ಲಿ (7) ಅರ್ಷದ್ ಖಾನ್‌ ಎಸೆತದಲ್ಲಿ ಪ್ರಸಿದ್ಧ ಕೃಷ್ಣಾಗೆ ಕ್ಯಾಚ್‌ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್‌ (4) ಒಂದು ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರ ಆಟಕ್ಕೆ ಮೊಹಮ್ಮದ್ ಸಿರಾಜ್‌ ಖೆಡ್ಡ ತೋಡಿದರು. ಕೊಂಚ ಲಯದಲ್ಲಿ ಕಾಣಿಸಿಕೊಂಡ ಫಿಲ್ ಸಾಲ್ಟ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 14 ರನ್‌ ಬಾರಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಆರ್‌ಸಿಬಿ ಪವರ್‌ ಪ್ಲೇನ 6 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 38 ರನ್‌ ಸೇರಿಸಿತು.

meta title- IPL 2025 RCB vs GT Toss Update Match Report Key Highlights

ಆರ್‌ಸಿಬಿ ತಂಡದ ಪರ ಐದನೇ ವಿಕೆಟ್‌ಗೆ ಜಿತೇಶ್ ಶರ್ಮಾ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಂಡಕ್ಕೆ ಅಮೋಘ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಈ ಜೋಡಿ 38 ಎಸೆತಗಳಲ್ಲಿ 52 ರನ್‌ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ಜಿತೇಶ್‌ ಶರ್ಮಾ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್‌ ಬಾರಿಸಿ ಔಟ್ ಆದರು.

ಲಿಯಾಮ್‌ ಅರ್ಧಶತಕ

ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೊನ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾದರು. ಇವರು 40 ಎಸೆತಗಳಲ್ಲಿ 54 ರನ್‌ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 1 ಬೌಂಡರಿ, 5 ಸಿಕ್ಸರ್ ಸೇರಿವೆ.

ಲಿಯಾಮ್‌ ಅರ್ಧಶತಕ

ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೊನ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾದರು. ಇವರು 40 ಎಸೆತಗಳಲ್ಲಿ 54 ರನ್‌ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 1 ಬೌಂಡರಿ, 5 ಸಿಕ್ಸರ್ ಸೇರಿವೆ.

ಡೆತ್‌ ಓವರ್‌ಗಳಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಕ್ಷಮತೆಯನ್ನು ಹೊಂದಿರುವ ಟೀಮ್‌ ಡೇವಿಡ್‌ 18 ಎಸೆತಗಳಲ್ಲಿ 32 ರನ್‌ ಸಿಡಿಸಿ ಔಟ್ ಆದರು. ಇವರ ಇನಿಂಗ್ಸ್‌ನಲ್ಲಿ 3 ಬೌಂಡರಿ, 2 ಸಿಕ್ಸರ್ ಸೇರಿವೆ. ಅಂತಿಮವಾಗಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 169 ರನ್‌ ಸೇರಿಸಿತು.

ಗುಜರಾರ್‌ ಟೈಟಾನ್ಸ್‌ ತಂಡದ ಪರ ಮೊಹಮ್ಮದ್‌ ಸಿರಾಜ್‌ 19 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು. ಸಾಯಿ ಕಿಶೋರ್‌ 2 ವಿಕೆಟ್‌ ಉರುಳಿಸಿದರು.

Story first published: Wednesday, April 2, 2025, 19:57 [IST]
Other articles published on Apr 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+