Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

146 ಎಸೆತಗಳ ಬಳಿಕ ಐಪಿಎಲ್‌ನಲ್ಲಿ ವಿಕೆಟ್‌ ಪಡೆದ ಬುಮ್ರಾ

ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ ಜಸ್ಪ್ರೀತ್ ಬುಮ್ರಾ ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದಾರೆ. ಇವರು ತಮ್ಮ ಬಿಗುವಿನ ದಾಳಿಯ ನೆರವಿನಿಂದ ತಂಡಕ್ಕೆ ನೆರವಾಗಬಲ್ಲ ಆಟಗಾರ. ಆದರೆ ಇವರು ಕಳೆದ ಕೆಲವು ದಿನಗಳಿಂದ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರು. ಇವರ ವಿಕೆಟ್‌ ಬರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.

ಸೋಮವಾರ 19ನೇ ಆವೃತ್ತಿ ಐಪಿಎಲ್‌ನ 30ನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಮಾಡಲು ಮುಂದಾದರು. ಇವರು ಎಸೆದ ಮೊದಲ ಎಸೆತವನ್ನು ಎದುರಿಸುವಲ್ಲಿ ಸಾಯಿ ಸುದರ್ಶನ್ ವಿಫಲರಾಗಿ, ಪಾಯಿಂಟ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್‌ ನೀಡಿದರು. ಈ ಮೂಲಕ ಜಸ್ಪ್ರೀತ್ ಬುಮ್ರಾ ತಮ್ಮ ವಿಕೆಟ್‌ ಬರಕ್ಕೆ ಬ್ರೇಕ್ ಹಾಕಿದರು. ಜಸ್ಪ್ರೀತ್ ಬುಮ್ರಾ ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ವಿಕೆಟ್‌ ಪಡೆದು ಸಂಭ್ರಮಿಸಿದರು. ಈ ಮೂಲಕ ತಮ್ಮ ಮೇಲೆ ಎದ್ದಿದ್ದ ಪ್ರಶ್ನೆಗಳಿಗೆ ಬುಮ್ರಾ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.

Jasprit Bumrah

ಜಸ್ಪ್ರೀತ್‌ ಬುಮ್ರಾ ಸತತ ಐದು ಪಂದ್ಯಗಳಲ್ಲಿ ಖಾಲಿ ಕೈಯಿಂದ ಡ್ರೆಸ್ಸಿಂಗ್ ರೂಮ್‌ಗೆ ಹಿಂದಿರುಗಿದ್ದು ಇದೇ ಮೊದಲು. ವಿಶ್ವದಲ್ಲೇ ತಮ್ಮ ಕರಾರುವಕಾ ದಾಳಿಯಿಂದ ಬ್ಯಾಟರ್‌ಗಳಿಗೆ ಕಂಗೆಡಿಸಿದ್ದ ಬುಮ್ರಾ, ಐಪಿಎಲ್‌ನಲ್ಲಿ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದು, ಹಲವು ಪ್ರಶ್ನೆಗಳು ಏಳುವಂತೆ ಮಾಡಿತ್ತು. ಆದರೆ ಸೋಮವಾರ ಪಡೆದ ಒಂದು ವಿಕೆಟ್‌ ನಿಶ್ಚಿತವಾಗಿ ಬುಮ್ರಾ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ವಾಷಿಂಗ್ಟನ್‌ ಸುಂದರ್ ಬೋಲ್ಡ್‌

ಜಸ್ಪ್ರೀತ್ ಬುಮ್ರಾ ಕಳೆದ ಬಾರಿಯ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್ ಅವರ ವಿಕೆಟ್‌ ಪಡೆದು ಅಬ್ಬರಿಸಿದ್ದರು. ಬುಮ್ರಾ ಅವರ ಯಾರ್ಕರ್ ಎಸೆತವನ್ನು ಎದುರಿಸುವಲ್ಲಿ ವಿಫಲರಾಗಿ ವಾಷಿಂಗ್ಟನ್‌ ಸುಂದರ್‌ ಕ್ಲೀನ್ ಬೋಲ್ಡ್‌ ಆದರು. ಈ ಪಂದ್ಯ ಆದ ಬಳಿಕ ಮುಂಬೈ ಇಂಡಿಯನ್ಸ್‌ ಎರಡನೇ ಕ್ವಾಲಿಫೈಯರ್‌ ಪಂದ್ಯವನ್ನು ಸಹ ಆಡಿತು. ಆ ಪಂದ್ಯದಲ್ಲೂ ಬುಮ್ರಾ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಇದಾದ ಬಳಿಕ ಈ ಐಪಿಎಲ್‌ನ 5 ಪಂದ್ಯಗಳಲ್ಲೂ ವಿಕೆಟ್‌ ಪಡೆಯಲು ಬುಮ್ರಾ ಎಡವಿದ್ದರು.

ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ 146 ಎಸೆತಗಳ ಬಳಿಕ ವಿಕೆಟ್‌ ಪಡೆದು ಸಂಭ್ರಮಿಸಿದರು. ಅಂದು ವಾಷಿಂಗ್ಟನ್‌ ಸುಂದರ್ ಅವರ ವಿಕೆಟ್‌ ಪಡೆದಿದ್ದ ಬುಮ್ರಾ ಈ ಬಾರಿ ಸಾಯಿ ಸುದರ್ಶನ್‌ ವಿಕೆಟ್‌ ಪಡೆದು ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ಜಸ್ಪ್ರೀತ್ ಬುಮ್ರಾ ಅವರ ಕರಾರುವಾಕ್ ದಾಳಿ ಅನಿವಾರ್ಯವಾಗಿದೆ.

Jasprit Bumrah

ಆರನೇ ಬಾರಿಗೆ ಮುಂಬೈ ಇಂಡಿಯನ್ಸ್‌ ಐಪಿಎಲ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಜಸ್ಪ್ರೀತ್ ಬುಮ್ರಾ ಬಿಗುವಿನ ದಾಳಿ ನಡೆಸುವುದು ಮುಖ್ಯ. ಇವರು ತಮ್ಮ ಸ್ಥಿರ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲಿ ಮುಂದುವರೆಸಬೇಕಿದೆ. ಜಸ್ಪ್ರೀತ್ ಬುಮ್ರಾ ವಿಕೆಟ್‌ ಪಡೆಯದೇ ಇದ್ದಿದ್ದರಿಂದ ಟೀಕೆಗಳಿಗೆ ಗುರಿಯಾಗಿದ್ದರು. ಇನ್ನು ಹಲವು ಮಾಜಿ ಆಟಗಾರರು ಇವರ ಬೆಂಬಲಕ್ಕೂ ನಿಂತಿದ್ದರು.

Story first published: Tuesday, April 21, 2026, 14:02 [IST]
Other articles published on Apr 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+