UAE ILT20 ಲೀಗ್: 14 ಆಟಗಾರರ ಬಲಿಷ್ಠ ತಂಡ ಘೋಷಿಸಿದ MI ಎಮಿರೇಟ್ಸ್

ಯುಎಇ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಇಂಟರ್‌ನ್ಯಾಶನಲ್ ಲೀಗ್ ಟಿ20 ಟೂರ್ನಿ ಈ ವರ್ಷದಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಐಪಿಎಲ್‌ನ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಕೂಡ ಒಂದು ತಂಡವನ್ನು ಖರೀದಿಸಿರುವುದು ಹೊಸ ಸುದ್ದಿಯಲ್ಲ. ಇದೀಗ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಎಮಿರೇಟ್ಸ್ ತಂಡ ತನ್ನ ಆಟಗಾರರ ಪಡೆಯನ್ನು ಘೋಷಣೆ ಮಾಡಿದೆ. 14 ಆಟಗಾರರ ಪಡೆಯನ್ನು ಅಧಿಕೃತವಾಗಿ ಪ್ರಕಟಿಸಿರುವ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೆಲವು ಹಾಲಿ ಹಾಗೂ ಮಾಜಿ ಆಟಗಾರರು ಕೂಡ ಇದ್ದಾರೆ.
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಮುಂಬೈ ಇಂಡಿಯನ್ಸ ತಂಡದಲ್ಲಿ ಸುದೀರ್ಘ ಕಾಲದಿಂದ ಭಾಗವಾಗಿರುವ ಕಿರಾನ್ ಪೊಲಾರ್ಡ್ ಈ ತಂಡದ ಭಾಗವಾಗಿದ್ದು ಡ್ವೇಯ್ನ್ ಬ್ರಾವೋ, ನಿಕೋಲಸ್ ಪೂರನ್ ಮತ್ತು ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಟ್ರೆಂಟ್ ಬೋಲ್ಟ್ ಕೂಡ ಈ ತಂಡದಲ್ಲಿದ್ದಾರೆ.

ಮುಂದಿನ ವರ್ಷಾರಂಭದಲ್ಲಿ ನಡೆಯಲಿದೆ ಟೂರ್ನಿ
ಯುಎಇ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಇಂಟರ್‌ನ್ಯಾಶನಲ್ ಲೀಗ್ ಟಿ20 ಟೂರ್ನಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಅನೇಕ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ಈ ಟೂರ್ನಿಯ ಕುತೂಹಲ ಹೆಚ್ಚಿಸಿದೆ. ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಎಮಿರೇಟ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು ತನ್ನ ಸಾಂಪ್ರದಾಯಿಕ ನೀಲಿ ಹಾಗೂ ಚಿನ್ನದ ಬಣ್ಣದ ಜರ್ಸಿಯಲ್ಲಿ ಆಡಲು ಸಜ್ಜಾಗಿದೆ. ಇನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಟೂರ್ನಿಯ ದಿನಾಂಕವನ್ನು ಘೋಷಣೆ ಮಾಡಿದ್ದು ಮುಂದಿನ ವರ್ಷ ಜನವರಿ 6ರಿಂದ ಫೆಬ್ರವರಿ 12ರ ಅವಧಿಯಲ್ಲಿ ಟೂರ್ನಿ ನಡೆಯಲಿದೆ ಎಂದು ತಿಳಿಸಿದೆ.

ಆಟಗಾರರಿಗೆ ಸ್ವಾಗತ ಕೋರಿದ ಆಕಾಶ್ ಅಂಬಾನಿ
ಇನ್ನು ರಿಲಯನ್ಸ್ ಜಿಯೋದ ಮುಖ್ಯಸ್ಥ ಆಕಾಶ್ ಅಂಬಾನಿ ಎಂಐ ಎಮಿರೇಟ್ಸ್ ತಂಡದ ಆಟಗಾರರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ. "ನಮ್ಮ ಒನ್ ಫ್ಯಾಮಿಲಿಯ ಕುಟುಂಬಕ್ಕೆ ಸೇರಿಕೊಂಡಿರುವ 14 ಆಟಗಾರರ ಡೈನಾಮಿಕ್ ತಂಡಕ್ಕೆ ಸ್ವಾಗತಿಸಲು ಹರ್ಷವಾಗುತ್ತಿದೆ. ನಮ್ಮ ತಂಡದ ಆಧಾರ ಸ್ಥಂಬಗಳಲ್ಲಿ ಒಬ್ಬರಾಗಿರುವ ಕಿರಾನ್ ಪೊಲಾರ್ಡ್ ಅವರೊಂದಿಗೆ ಮುಂದುವರಿಯಲು ಹರ್ಷವಾಗುತ್ತಿದೆ. ಇನ್ನು ಡ್ವೇಯ್ನ್ ಬ್ರಾವೋ, ನಿಕೋಲಸ್ ಪೂರನ್, ಟ್ರೆಂಟ್ ಬೋಲ್ಟ್ ಕೂಡ ತಂಡಕ್ಕೆ ಮರಳಿದ್ದಾರೆ. ಎಂಐ ಎಮಿರೇಟ್ಸ್ ತಂಡದ ಎಲ್ಲಾ ಆಟಗಾರರಿಗೂ ಆತ್ಮೀಯವಾದ ಸ್ವಾಗತ" ಎಂದು ಆಟಗಾರರನ್ನು ಟ್ವಿಟ್ ಮೂಲಕ ಸ್ವಾಗತಿಸಿದ್ದಾರೆ.
ಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ: ರೇಗಿಸ್ ಚಕಬ್ವಾ ನಾಯಕ

ಮತ್ತಷ್ಟು ಸ್ಟಾರ್ ಆಟಗಾರರು ಎಂಐ ತಂಡದಲ್ಲಿ
ಇನ್ನು ಎಂಐ ಎಮಿರೇಟ್ಸ್ ತಂಡ ಅನುಭವಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರನ್ನು ಕೂಡ ತಂಡಕ್ಕೆ ಸೇರ್ಪಡೆಗೊಳಿಸಿದ್ದು ಅಫ್ಘಾನಿಸ್ತಾನದ ನಜಿಬುಲ್ಲಾ ಜದ್ರಾನ್, ಫಜಲ್ಲಖ್ ಫಾರೂಕಿ ಮತ್ತು ಜಹೀರ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಮುಂದಿನ ವರ್ಷಾರಂಭದಲ್ಲಿಯೇ ಈ ಟೂರ್ನಿ ಆರಂಭಗೊಳ್ಳಲಿದ್ದು ಬಿಗ್ ಬ್ಯಾಷ್ ಲೀಗ್ ಹಾಗೂ ಕ್ರಿಕೆಟ್ ಸೌತ್ ಆಫ್ರಿಕಾದ ಟಿ20 ಲೀಗ್ ಜೊತೆಗೆ ದಿನಾಂಕಗಳು ಘರ್ಷಣೆಯಾಗುವ ಸಾಧ್ಯತೆಯಿದೆ.
ಈ ಮೂವರ ನಾಯಕತ್ವದಲ್ಲಿ ಭಾರತ ಟಿ20 ಮಾದರಿಯಲ್ಲಿ ಸೋತೇ ಇಲ್ಲ!

ಎಂಐ ಎಮಿರೇಟ್ಸ್ ತಂಡ ಪ್ರಕಟಿಸಿರುವ ತಂಡ
ಕಿರಾನ್ ಪೊಲಾರ್ಡ್, ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ಆಂಡ್ರೆ ಫ್ಲೆಚರ್, ಇಮ್ರಾನ್ ತಾಹಿರ್, ಸಮಿತ್ ಪಟೇಲ್, ವಿಲ್ ಸ್ಮೀಡ್, ಜೋರ್ಡಾನ್ ಥಾಂಪ್ಸನ್, ನಜಿಬುಲ್ಲಾ ಜದ್ರಾನ್, ಜಹೀರ್ ಖಾನ್, ಫಜಲ್ಹಕ್ ಫಾರೂಕಿ, ಬ್ರಾಡ್ಲಿ ವೀಲ್, ಬಾಸ್ ಡಿ ಲೀಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications