MLC 2025: ಎಂಐ ನ್ಯೂಯಾರ್ಕ್ ಚಾಂಪಿಯನ್: ಕೀರನ್ ಪೊಲಾರ್ಡ್ ದಾಖಲೆ
ಲಾರ್ಡ್ಸ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇನ್ನು ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಎಂಐ ನ್ಯೂಯಾರ್ಕ್ 5 ರನ್‌ಗಳಿಂದ ವಾಷಿಂಗ್ಟನ್ ಫ್ರೀಡಂ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕೇರಿತು. ಎಂಐ ಪರ ಕಣಕ್ಕೆ ಇಳಿದ ಕೀರನ್ ಪೋಲಾರ್ಡ್ ಈ ಪಂದ್ಯದಲ್ಲಿ ದಾಖಲೆಯನ್ನು ಬರೆದರು. ಇವರು ಬರೆದ ದಾಖಲೆಯ ಬಗ್ಗೆ ವರದಿ ಇಲ್ಲಿದೆ.
ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಎಂಐ ನ್ಯೂಯಾರ್ಕ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಸೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 175 ರನ್ ಸೇರಿಸಿ ಸೋಲು ಕಂಡಿತು.

ನ್ಯೂಯಾರ್ಕ್ ತಂಡದ ಪರ ಮೋನಕ್ ಪಟೇಲ್ (28) ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 72 ರನ್ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ತಜೇಂದ್ರ ಸಿಂಗ್ 14, ನಿಕೋಲಸ್ ಪೂರನ್ 21, ಕುನರ್ವಜಿತ್ ಸಿಂಗ್ 22 ರನ್ ಬಾರಿಸಿ ತಂಡಕ್ಕೆ ಅಧಾರವಾದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿ ಅಬ್ಬರಿಸಿದರು.
ಗುರಿಯನ್ನು ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ತಂಡದ ಆರಂಭ ಕಳಪೆಯಾಗಿತ್ತು. ಮೂರನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಜಾಕ್ ಎಡ್ವರ್ಡ್ಸ್ (33) ಜೋಡಿ ತಂಡಕ್ಕೆ ನೆರವಾಯಿತು. ಆರಂಭಿಕ ರಚಿನ್ ರವೀಂದ್ರ 2 ಸಿಕ್ಸರ್, 8 ಬೌಂಡರಿ ಸಹಾಯದಿಂದ 70 ರನ್ ಬಾರಿಸಿದರು. ಗ್ಲೇನ್ ಫಿಲಿಪ್ಸ್ 48, ನಾಯಕ ಗ್ಲೇನ್ ಮ್ಯಾಕ್ಸ್‌ವೆಲ್ 15 ರನ್ ಸಿಡಿಸಿದರು. ಆದರೆ ಫ್ರೀಡಂ ತಂಡ ಕೊನೆಯ ಓವರ್‌ನಲ್ಲಿ 12 ರನ್ ಬಾರಿಸುವಲ್ಲಿ ವಿಫಲವಾಗಿ ಸೋಲು ಕಂಡಿತು. ಈ ಪಂದ್ಯದಲ್ಲಿ ನ್ಯೂಯಾರ್ಕ್ ತಂಡದ ಸ್ಟಾರ್ ಆಲ್‌ರೌಂಡರ್ ಕೀರನ್ ಪೋಲಾರ್ಡ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ.
ದಾಖಲೆ ಸರಿಗಟ್ಟಿದ ಕೀರನ್
ಕೀರನ್ ಪೊಲಾರ್ಡ್ ಎಂಐ ನ್ಯೂಯಾರ್ಕ್ ಪ್ರಶಸ್ತಿಯನ್ನು ಗೆದ್ದ ತಕ್ಷಣ, ಅವರು ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಫೈನಲ್ ಗೆದ್ದ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಈ ಮೂಲಕ ಪೊಲಾರ್ಡ್ ಅತಿ ಹೆಚ್ಚು ಫೈನಲ್ ಗೆದ್ದ ಡ್ವೇನ್ ಬ್ರಾವೋ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಟಿ20 ಕ್ರಿಕೆಟ್ ಇತಿಹಾಸದಲ್ಲಿ 17 ಫೈನಲ್‌ಗಳನ್ನು ಗೆದ್ದ ಹಿರಿಮೆ ಹೊಂದಿದ್ದಾರೆ.
ಈಗ ಅವರು T20 ಕ್ರಿಕೆಟ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ಫೈನಲ್‌ಗಳನ್ನು ಗೆದ್ದ ಆಟಗಾರರಾಗಿದ್ದಾರೆ. ಇದು ಪೊಲಾರ್ಡ್ ಅವರ T20 ಕ್ರಿಕೆಟ್‌ನಲ್ಲಿ ಗೆದ್ದ 17 ನೇ ಪಂದ್ಯವಾಗಿದೆ. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ ಕೂಡ ಟಿ20 ಕ್ರಿಕೆಟ್‌ನಲ್ಲಿ 17 ಫೈನಲ್‌ಗಳನ್ನು ಗೆದ್ದಿದ್ದಾರೆ.ಕೀರನ್ ಪೊಲಾರ್ಡ್ ಇದುವರೆಗೆ ಟಿ20 ಕ್ರಿಕೆಟ್‌ನ 707 ಪಂದ್ಯಗಳಲ್ಲಿ ಒಟ್ಟು 13854 ರನ್‌ಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications