Raghu Sharma: 15 ವರ್ಷದ ಬಳಿಕ ಮೊದಲ IPL ವಿಕೆಟ್, ಜೈ ಶ್ರೀ ರಾಮ್ ಸಂದೇಶ ವೈರಲ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡಬೇಕು ಎಂಬುದು ಭಾರತದಲ್ಲಿ ಕ್ರಿಕೆಟ್ ಆಡುವ ಅದೆಷ್ಟೋ ಆಟಗಾರರ ಕನಸು. ಈ ಲೀಗ್‌ನಲ್ಲಿ ಆಡುವ ಕನಸು ಕಂಡ ಅದೆಷ್ಟೋ ಯುವ ಆಟಗಾರರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ಅನುಭವಿಗಳು ಸಹ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಸೆಳೆದಿದ್ದಾರೆ. ಆದರೆ 15 ವರ್ಷದಿಂದ ಅವಕಾಶದಿಂದ ವಂಚಿತರಾಗಿದ್ದ ಪ್ಲೇಯರ್ ಒಬ್ಬನ ಕನಸು ಸೋಮವಾರ ಮುಂಬೈನ ವಾಂಖೆಡೆ ಅಂಗಳದಲ್ಲಿ ಫಲಿಸಿದೆ. ಆ ಪ್ಲೇಯರ್ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
19ನೇ ಆವೃತ್ತಿ ಐಪಿಎಲ್‌ನ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಎರಡನೇ ಬಾರಿಗೆ ಆಡುವ ಅವಕಾಶವನ್ನು ಸ್ಪಿನ್ ಬೌಲರ್ ರಘು ಶರ್ಮಾ ಪಡೆದರು. ಈ ವೇಳೆ ಎಲ್‌ಎಸ್‌ಜಿ ತಂಡದ ಅಕ್ಷತ್ ರಘುವಂಶಿ ಅವರನ್ನು ಕಾಟ್ ಅಂಡ್ ಬೋಲ್ಡ್ ಮಾಡಿದರು. ಈ ಮೂಲಕ ರಘು ತಮ್ಮ ಮೊದಲ ಐಪಿಎಲ್ ವಿಕೆಟ್ ಪಡೆದರು ಮತ್ತು ನಂತರದ ಅವರ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆದಿದೆ.

ವಿಕೆಟ್ ಪಡೆದ ನಂತರ, ರಘು ಶರ್ಮಾ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಮೊದಲ ವಿಕೆಟ್ ಬಳಿಕ ತಮ್ಮ ಜೇಬಿನಿಂದ ಒಂದು ಪೇಪರ್ ಹೊರತೆಗೆದು ಕ್ಯಾಮೆರಾಗೆ ತೋರಿಸಿದರು. ಅವರು ತೋರಿಸಿದ ಹಾಳೆಯಲ್ಲಿ, 15 ಅತ್ಯಂತ ನೋವಿನ ವರ್ಷಗಳು. ಗುರುದೇವರ ಕೃಪೆಯಿಂದ, ಇಂದು ಅದು ಕೊನೆಗೊಂಡಿದೆ. ಈ ಅವಕಾಶವನ್ನು ನೀಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ (ನೀಲಿ ಮತ್ತು ಚಿನ್ನ) ಗೆ ಧನ್ಯವಾದಗಳು. ನಾನು ಅವರಿಗೆ ಯಾವಾಗಲೂ ಕೃತಜ್ಞ. ಜೈ ಶ್ರೀ ರಾಮ್. ಈ ಟಿಪ್ಪಣಿ ಅವರ ಹೋರಾಟವನ್ನು ಚಿಕ್ಕದಾಗಿ ತೋರಿಸಿದಂತಿದೆ.
ರಘು ಶರ್ಮಾ ಯಾರು?
ರಘು ಶರ್ಮಾ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಈ ಬಾರಿ ವಿಕೆಟ್ ಪಡೆದು ಮಿಂಚಿದ್ದಾರೆ.ರಘು ಶರ್ಮಾ 4 ಓವರ್‌ಗಳಲ್ಲಿ 36 ರನ್‌ಗಳಿಗೆ 1 ವಿಕೆಟ್ ಪಡೆದರು. ಜಲಂಧರ್‌ನಲ್ಲಿ ಜನಿಸಿದ ರಘು ಶರ್ಮಾ 2017 ರಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ, ಅವರು ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ 20 ಕ್ರಿಕೆಟ್‌ನಲ್ಲಿ ಕೇವಲ 30 ಪಂದ್ಯಗಳನ್ನು ಆಡಿದ್ದಾರೆ. ರಘು ದೇಶೀಯ ಕ್ರಿಕೆಟ್ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು ರಣಜಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 57 ವಿಕೆಟ್ ಪಡೆದು ತಮ್ಮ ಛಾಪು ಮೂಡಿಸಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನ ಮಧ್ಯ-ಋತುವಿನ ಬದಲಿಯಾಗಿ ಸೇರಿಸಿಕೊಂಡಿತು.
ಪಂದ್ಯದ ಚಿತ್ರಣ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications