MI Squad WPL 2023: ಭಾರತದ ನಾಯಕಿಯನ್ನೇ ತೆಕ್ಕೆಗೆ ಹಾಕಿಕೊಂಡ MI: ಹರಾಜಿನ ನಂತರ ಮುಂಬೈ ಇಂಡಿಯನ್ಸ್ ಹೀಗಿದೆ

ಮುಂಬೈನಲ್ಲಿ ನಡೆದ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಟೂರ್ನಿಯ ಪ್ರಪ್ರಥಮ ಆವೃತ್ತಿಗಾಗಿ ಐದು ತಂಡಗಳು ಕೂಡ ಹರಾಜಿನಲ್ಲಿ ತಂಡವನ್ನು ಸಿದ್ಧಪಡಿಸಿದ್ದು ಈಗ ಟೂರ್ನಿಯಲ್ಲಿ ಸೆಣೆಸಾಡಲು ಸಜ್ಜಾಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್‌ನ ತಂಡಗಳ ಪೈಕಿ ಒಂದಾದ ಮುಂಬೈ ಇಂಡಿಯನ್ಸ್ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನೇ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಬಲಿಷ್ಠ ತಂಡವನ್ನು ಸಿದ್ಧಪಡಿಸಿದೆ.
ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಇಂಗ್ಲೆಂಡ್‌ನ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಕಾರ್ಯನಿರ್ವಹಿಸಲಿದ್ದು ಮೆಂಟರ್ ಹಾಗೂ ಬೌಲಿಂಗ್ ಕೋಚ್ ಆಗಿ ಜೂಲನ್ ಗೋಸ್ವಾಮಿ ಕರ್ತವ್ಯ ನಿರ್ವಹಿಸಲಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ದೇವಿಕಾ ಪಲ್ಶಿಕರ್ ಬ್ಯಾಟಿಂಗ್ ಕೋಚ್ ಆಗಿ ನೆರವಾಗಲಿದ್ದಾರೆ.

ಹರ್ಮನ್‌ಪ್ರೀತ್‌ಗೆ ನಾಯಕತ್ವ?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಟೀಮ್ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು 1.8 ಮೊತ್ತಕ್ಕೆ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ನಾಯಕಿಯಾಗಿ ಹರ್ಮನ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. ಭಾರತ ತಂಡವನ್ನು ಸುದೀರ್ಘ ಕಾಲದಿಂದ ಮುನ್ನಡೆಸುತ್ತಿರುವ ಅನುಭವ ಹೊಂದಿರುವ ಹರ್ಮನ್‌ಪ್ರೀತ್ ಚುಟುಕು ಮಾದರಿಯಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ನೀಡುವ ಆಟಗಾರ್ತಿಯೂ ಹೌದು. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐದು ಬಾರಿ ಚಾಂಪಿಯನ್ ಎನಿಸಿಕೊಂಡು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಡಬ್ಲ್ಯುಪಿಎಲ್‌ನಲ್ಲಿಯೂ ಅಂಥಾದ್ದೇ ಸಾಧನೆಗೆ ಎದುರು ನೋಡುತ್ತಿದೆ.

ನ್ಯಾಟ್ ಸೀವರ್ ದುಬಾರಿ ಆಟಗಾರ್ತಿ
ಮುಂಬೈ ಇಂಡಿಯನ್ಸ್ ತಂಡ ಇಂಗ್ಲೆಂಡ್ ಆಟಗಾರ್ತಿ ನ್ಯಾಟ್ ಸೀವರ್ ಅವರನ್ನು 3.2 ಕೋಟಿ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ದುಬಾರಿ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಉಳಿದಂತೆ ಭಾರತದ ಆಟಗಾರ್ತಿಯರಾದ ಪೂಜಾ ವಸ್ತ್ರಾಕರ್, ಹಾಗೂ ಯಸ್ತಿಕಾ ಭಾಟಿಯಾ ಕೂಡ ಮುಂಬೈ ತಂಡದ ಮತ್ತಿಬ್ಬರು ಪ್ರಮುಖ ಆಟಗಾರ್ತಿಯರು. ಕಿವೀಸ್ ಆಟಗಾರ್ತಿ ಅಮೆಲಿಯಾ ಕೆರ್ ಅವರನ್ನು ಕೂಡ ಒಂದು ಕೊಟಿ ನೀಡಿ ಮುಂಬೈ ಇಂಡಿಯನ್ಸ್ ಸೇರ್ಪಡೆಗೊಳಿಸಿದೆ.

ಮುಂಬೈ ಇಂಡಿಯನ್ಸ್ ಸಂಪೂರ್ಣ ಸ್ಕ್ವಾಡ್
ಹರ್ಮನ್‌ಪ್ರೀತ್ ಕೌರ್ (1.8 ಕೋಟಿ ರೂ), ನ್ಯಾಟ್ ಸೀವರ್ (3.2 ಕೋಟಿ ರೂ), ಅಮೆಲಿಯಾ ಕೆರ್ (1 ಕೋಟಿ ರೂ), ಪೂಜಾ ವಸ್ತ್ರಾಕರ್ (1.9 ಕೋಟಿ ರೂ), ಯಾಸ್ತಿಕಾ ಭಾಟಿಯಾ (1.5 ಕೋಟಿ ರೂ), ಹೀದರ್ ಗ್ರಹಾಂ (30 ಲಕ್ಷ ರೂ), ಇಸಾಬೆಲ್ಲೆ ವಾಂಗ್ (30 ಲಕ್ಷ ರೂ), ಅಮನ್ಜೋತ್ ಕೌರ್ (50 ಲಕ್ಷ ರೂ), ಧಾರಾ ಗುಜಾರ್ (10 ಲಕ್ಷ ರೂ), ಸೈಕಾ ಇಶಾಕ್ (10 ಲಕ್ಷ ರೂ), ಕ್ಲೋಯ್ ಟ್ರಯಾನ್ (30 ಲಕ್ಷ ರೂ), ಹುಮೈರಾ ಕಾಜಿ (10 ಲಕ್ಷ ರೂ), ಪ್ರಿಯಾಂಕ ಬಾಲಾ (20 ಲಕ್ಷ ರೂ), ಸೋನಮ್ ಯಾದವ್ (10 ಲಕ್ಷ ರೂ), ನೀಲಂ ಬಿಶ್ತ್ (10 ಲಕ್ಷ ರೂ), ಜಿತುಮೋನಿ ಕಲಿತಾ (10 ಲಕ್ಷ ರೂ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications