Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs CSK: ಚೆನ್ನೈ ವಿರುದ್ಧದ ಸೋಲಿಗೆ ಬ್ಯಾಟರ್‌ಗಳನ್ನು ದೂರಿದ ಮುಂಬೈ ಇಂಡಿಯನ್ಸ್ ಕೋಚ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಎರಡನೇ ಪಂದ್ಯದಲ್ಲಿಯೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಈ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲು ಕಾಣಲು ಕಾರಣವಾದ ಪ್ರಮುಖ ಅಂಶವನ್ನು ಉಲ್ಲೇಖಿಸಿದ್ದಾರೆ.

ಬ್ಯಾಟಿಂಗ್‌ ವಿಭಾಗದ ಕುಸಿತ ಹಾಗೂ ದುರದೃಷ್ಟಕರ ಔಟ್‌ಗಳು ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ ಕಾರಣವಾಯಿತು ಎಂದು ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಮಾರ್ಕ್ ಬೌಷರ್ ತಿಳಿಸಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 7 ವಿಕೆಟ್‌ಗಳ ಅಂತರದ ಬೃಹತ್ ಸೋಲು ಅನುಭವಿಸಿದೆ.

MI vs CSK: Mumbai Indians Batting coach Mark Boucher explain reason for defeat against CSK

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಪ್ರಮುಖ ಆಟಗಾರರು ಮತ್ತೊಮ್ಮೆ ದೊಡ್ಡ ಮೊತ್ತದ ರನ್‌ಗಳಿಸಲು ವಿಫಲವಾದರು. ಟಿಮ್ ಡೇವಿಡ್ 31 ರನ್‌ಗಳನ್ನು ಗಳಿಸಿದ ಪರಿಣಾಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯ್ಸ್ ತಂಡ 157 ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಸ್ಪೋಟಕ ಪ್ರದರ್ಶನ ನೀಡಿದ್ದು ಕೇವಲ 27 ಎಸೆತಗಳಲ್ಲಿ 61 ರನ್‌ ಬಾರಿಸಿ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಲು ಕಾರಣವಾದರು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಉತ್ತಮ ಜೊತೆಯಾಟ ಬಾರದ ಕಾರಣ ಸೋಲು ಅನುಭವಿಸಬೇಕಾಯಿತು ಎಂಬುದನ್ನು ಬ್ಯಾಟಿಂಗ್ ಕೋಚ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಇಒದಕ್ಕೂ ಮುನ್ನ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿಯೂ ಮಾಡಿದ್ದು ತಂಡ ಮತ್ತೊಮ್ಮೆ ಹಿನ್ನಡೆ ಕಾಣಉವಂತಾಯಿತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

"ಪವರ್‌ಪ್ಲೇನಲ್ಲಿ ನಾವು ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಉತ್ತಮ ಆರಂಭವನ್ನು ಪಡೆದೆವು. ಆದರೆ ಅದಾದ ಬಳಿಕ ನಾವು ಶೀಘ್ರವಾಗಿ ಕುಸಿತ ಕಾಣಲು ಆರಂಭಿಸಿದೆವು. ಕೆಲ ದುರದೃಷ್ಟಕರ ಔಟ್‌ಗಳು, ಕೆಲ ಅದ್ಭುತವಾದ ಕ್ಯಾಚ್‌ಗಳ ಕಾರಣದಿಂದಾಗಿ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ನಾವು ಸುಮಾರು 30-40 ರನ್‌ಗಳನ್ನು ಕಡಿಮೆ ಗಳಿಸಿದೆವು" ಎಂದು ಮಾಧ್ಯಮ ಸಂವಾದದಲ್ಲಿ ಮಾರ್ಕ್ ಬೌಷರ್ ವಿವರಿಸಿದ್ದಾರೆ.

"ಮೊದಲ ಪಂದ್ಯಕ್ಕೆ ಹೋಲಿಕೆಯಾಗುವಂತಾ ತಪ್ಪುಗಳನ್ನು ಮಾಡಿದ್ದೆವು. ಆದರೆ ಬೌಲಿಂಗ್‌ನಲ್ಲಿ ಅಂತ್ಯದಲ್ಲಿ ನಾವು ಹೋರಾಟವನ್ನು ನಡೆಸಿದೆವು. ಆದರೆ ಎದುರಾಳಿಗಳ ಮೇಲೆ ಒತ್ತಡವನ್ನು ಹೇರಲು ಬೇಕಾದಷ್ಟು ಪ್ರಮಾಣದಲ್ಲಿ ರನ್‌ಗಳನ್ನು ನಾವು ಹೊಂದಿರಲಿಲ್ಲ. ಹೀಗಾಗಿ ಎದುರಾಳಿ ತಂಡ ಒತ್ತಡವಿಲ್ಲದೆ ಪಂದ್ಯವನ್ನು ಗೆದ್ದುಕೊಂಡಿತು" ಎಂದಿದ್ದಾರೆ ಮಾರ್ಕ್ ಬೌಷರ್.

ಈ ಸೋಲಿನೊಂದಿಗೆ ಕಳೆದ ಐದು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ಮೊದಲ ಸೋಲು ಅನುಭವಿಸಿದೆ. ಈ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಎರಡು ತಂಡಗಳ ಹೆಡ್‌ ಟು ಹೆಡ್ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ 7-4 ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದೆ.

Story first published: Sunday, April 9, 2023, 11:31 [IST]
Other articles published on Apr 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+