IPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್; ಕೊಹ್ಲಿಯೊಂದಿಗೆ ಎಲೈಟ್ ಕ್ಲಬ್ ಸೇರಿದ ರೋಹಿತ್
ಭಾನುವಾರ, ಏಪ್ರಿಲ್ 7ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದರು.
ಈ ಮೂಲಕ ರೋಹಿತ್ ಶರ್ಮಾ ಅವರು ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 36 ವರ್ಷದ ರೋಹಿತ್ ಶರ್ಮಾ ಈ ಮೈಲುಗಲ್ಲು ಸಾಧಿಸಿದರು.

ನಾಗ್ಪುರ ಮೂಲದ ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ವಿರಾಟ್ ಕೊಹ್ಲಿ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದಾರೆ.
ಭಾನುವಾರದ ಪಂದ್ಯದಲ್ಲಿ ರೋಹಿತ್ ಶರ್ಮಾ 27 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 181.48ರ ಸ್ಟ್ರೈಕ್ ರೇಟ್‌ನಲ್ಲಿ 49 ರನ್ ಬಾರಿಸಿದರು. ನಂತರ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.
ಅಜಿಂಕ್ಯ ರಹಾನೆ, ರಾಬಿನ್ ಉತ್ತಪ್ಪ, ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಕೂಡ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರು
- ವಿರಾಟ್ ಕೊಹ್ಲಿ - 28 ಪಂದ್ಯಗಳಿಂದ 1030 ರನ್
- ರೋಹಿತ್ ಶರ್ಮಾ - 34 ಪಂದ್ಯಗಳಿಂದ 1026 ರನ್
- ಅಜಿಂಕ್ಯ ರಹಾನೆ - 23 ಪಂದ್ಯಗಳಿಂದ 858 ರನ್
- ರಾಬಿನ್ ಉತ್ತಪ್ಪ - 28 ಪಂದ್ಯಗಳಿಂದ 740 ರನ್
- ಎಂಎಸ್ ಧೋನಿ - 33 ಪಂದ್ಯಗಳಿಂದ 709 ರನ್
- ಸುರೇಶ್ ರೈನಾ - 26 ಪಂದ್ಯಗಳಿಂದ 661 ರನ್

ಐಪಿಎಲ್ 2024ರಲ್ಲಿ ಬ್ಯಾಟಿಂಗ್ ಫಾರ್ಮ್ ಹುಡುಕುತ್ತಿರುವ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ, ರೋಹಿತ್ ಶರ್ಮಾ ಇನ್ನೂ ಸಂಪೂರ್ಣವಾಗಿ ತನ್ನ ಫಾರ್ಮ್‌ಗೆ ಬಂದಿಲ್ಲ. ಇಲ್ಲಿಯವರೆಗೆ ಆಡಿದ 4 ಪಂದ್ಯಗಳಲ್ಲಿ 29.50ರ ಸರಾಸರಿ ಮತ್ತು 171.01ರ ಸ್ಟ್ರೈಕ್-ರೇಟ್‌ನಲ್ಲಿ 118 ರನ್ ಗಳಿಸಿದ್ದಾರೆ.
ಇದೀಗ ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾಗಿದ್ದಾರೆ. ಆದರೆ ಇನ್ನೂ ದೊಡ್ಡ ಸ್ಕೋರ್ ಗಳಿಸಿಲ್ಲ. ಅನುಭವಿ ಬ್ಯಾಟರ್ ಒಂದು ದಶಕಕ್ಕೂ ಹೆಚ್ಚು ಕಾಲ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಸದಸ್ಯನಾಗಿದ್ದಾರೆ ಮತ್ತು ಇನ್ನೂ ಅನೇಕ ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ.
ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ತನ್ನ ಅಭಿಯಾನವನ್ನು ಗುಜರಾತ್ ಟೈಟನ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿದೆ.
ರೋಹಿತ್ ಶರ್ಮಾ 49 ರನ್, ಇಶಾನ್ ಕಿಶನ್ 42 ರನ್, ಹಾರ್ದಿಕ್ ಪಾಂಡ್ಯ 39 ರನ್, ಟಿಮ್ ಡೇವಿಡ್ ಅಜೇಯ 45 ರನ್ ಮತ್ತು ರೊಮಾರಿಯೋ ಶಫರ್ಡ್ ಅಜೇಯ 39 ರನ್ ಗಳಿಸಿ ತಂಡದ ಮೊತ್ತ 230ರ ಗಡಿ ದಾಟಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications