Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs GT: ಹಾರ್ದಿಕ್ ಪಾಂಡ್ಯರನ್ನು ಟಾರ್ಗೆಟ್‌ ಮಾಡಿ ಹೇಳಿಕೆ ನೀಡಿದ ಮೊಹಮ್ಮದ್‌ ಶಮಿ

ಟೀಮ್ ಇಂಡಿಯಾದ ಸ್ಟಾರ್ ಪೇಸರ್ ಮೊಹಮ್ಮದ್‌ ಶಮಿ ಹಾಗೂ ಭವಿಷ್ಯದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಗುರಜಾತ್‌ ಟೈಟನ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ನಡುವ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್‌ ಸೋಲಿಗೆ ಕಾರಣವಾದ ಅಂಶವನ್ನು ಶಮಿ ಬಹಿರಂಗ ಪಡಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 162 ರನ್‌ ಸೇರಿಸಿ ಸೋಲು ಕಂಡಿತು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆಗೆ ಮೊದಲು ಸೋಲು ಎದುರಾಗಿದೆ. ನಾಯಕತ್ವದ ಕಾರಣದಿಂದ ಉಂಟಾದ ಗದ್ದಲದಿಂದಾಗಿ, ಮೈದಾನದಲ್ಲಿ ಕುಳಿತ ಅಭಿಮಾನಿಗಳಿಂದ ಅವರನ್ನು ಟ್ರೋಲ್ ಮಾಡಲಾಯಿತು.

MI vs GT Mohammed Shami made a statement targeting Hardik Pandya

ಸೋಲಿಗೆ ಕಾರಣವೇನು?

ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಅವರು ಉಪಸ್ಥಿತಿಯ ಮಧ್ಯೆಯೂ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಮೊದಲ ಓವರ್‌ ಬೌಲ್‌ ಮಾಡಿದರು. ಇದೀಗ ಭಾರತ ತಂಡದ ಅನುಭವಿ ಹಾಗೂ ವೇಗದ ಬೌಲರ್ ಮೊಹಮ್ಮದ್ ಶಮಿ ಮುಂಬೈ ಸೋಲಿಗೆ ಹಾರ್ದಿಕ್ ಪಾಂಡ್ಯ ಕಾರಣ ಎಂದು ಆರೋಪಿಸಿದ್ದಾರೆ.

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಕ್ರಿಕ್‌ಬಜ್‌ ಜೊತೆ ಮಾತನಾಡಿದ್ದಾರೆ. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ರನ್ ಚೇಸ್ ಸಮಯದಲ್ಲಿ ಟಾಪ್‌ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಬರಬೇಕಿತ್ತು. ಹಾಗೆ ಮಾಡಿದ್ದರೆ ಪಂದ್ಯವನ್ನು ಮುಂಬೈ ಆಗಲೇ ಗೆಲ್ಲಬಹುದಿತ್ತು. ನಾಯಕನಾಗಿ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಶಮಿ ಹೇಳಿದ್ದಾರೆ.

MI vs GT Mohammed Shami made a statement targeting Hardik Pandya

ಹಾರ್ದಿಕ್ ಹಿಂದಿನ ಆವೃತ್ತಿಯಲ್ಲಿ ಗುಜರಾತ್ ಪರ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಈಗ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಮೊದಲ ಪಂದ್ಯದಲ್ಲಿ ಹಾರ್ದಿಕ್‌ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಈ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರೆ ಹಾರ್ದಿಕ್ ಟೈಲೆಂಡರ್ ಇದ್ದಂತೆ. ನೀವು ತುಂಬಾ ಕೆಳಗಿಳಿಯುವ ಮೂಲಕ (ಬ್ಯಾಟಿಂಗ್‌ಗೆ) ಅನಗತ್ಯವಾಗಿ ನಿಮ್ಮ ಮೇಲೆ ನೀವೆ ಒತ್ತಡ ಹೇರಿಕೊಂಡರು ಎಂದಿದ್ದಾರೆ.

ಐಪಿಎಲ್ 2024 ರಲ್ಲಿ ಮೊಹಮ್ಮದ್ ಶಮಿ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದರು. ಆದರೆ ಗಾಯದಿಂದಾಗಿ ಅವರು ಇಡೀ ಋತುವಿನಿಂದ ಹೊರಗುಳಿಯಬೇಕಾಯಿತು. 33 ವರ್ಷದ ಮೊಹಮ್ಮದ್ ಶಮಿ 2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಶಮಿ ಐಪಿಎಲ್‌ನ 110 ಪಂದ್ಯಗಳಲ್ಲಿ127 ವಿಕೆಟ್ಗಳನ್ನು ಪಡೆದಿದ್ದಾರೆ.

Story first published: Tuesday, March 26, 2024, 19:25 [IST]
Other articles published on Mar 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+