For Quick Alerts
ALLOW NOTIFICATIONS  
For Daily Alerts
 

MI vs LSG IPL 2025: ಮುಂಬೈ ವೇಗಕ್ಕೆ ಕುಸಿದ ಲಕ್ನೋ: ಹಾರ್ದಿಕ್‌ ಪಡೆಗೆ 54 ರನ್‌ ಜಯ

ಭರವಸೆಯ ಆಟಗಾರರಾದ ಸೂರ್ಯಕುಮಾರ್‌ ಯಾದವ್‌ ( 54 ರನ್‌) ಹಾಗೂ ಜಸ್ಪ್ರಿತ್‌ ಬುಮ್ರಾ (22 ರನ್‌ಗಳಿಗೆ 4 ವಿಕೆಟ್‌) ಅವರ ಭರ್ಜರಿ ಪ್ರದರ್ಶನದ ಫಲವಾಗಿ ಮುಂಬೈ ಇಂಡಿಯನ್ಸ್‌ 18ನೇ ಆವೃತ್ತಿಯ ಐಪಿಎಲ್‌ನ 45ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಸತತ ಐದನೇ ಗೆಲುವಿನ ದಾಖಲೆ ಬರೆದು 12 ಅಂಕಗಳನ್ನು ಕಲೆ ಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 215 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಸದ್ಯ ಅಂಕ ಪಟ್ಟಿಯಲ್ಲಿ ಮುಂಬೈ ಎರಡನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್‌ ಜೈಂಟ್ಸ್ ಆಡಿದ 10 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು, 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

MI vs LSG IPL 2025 Toss Match Report Score batting and bowling performance kannada

ಕಳಪೆ ಆರಂಭ

ಸವಾಲಿನ ಗುರಿಯನ್ನು ಹಿಂಬಾಲಿಸಿದ ಲಕ್ನೋ ತಂಡದ ಆರಂಭ ಕಳಪೆಯಾಗಿತ್ತು. ಐಡೇನ್‌ ಮಾರ್ಕ್ರಾಮ್‌ ಹಾಗೂ ಮಿಚೆಲ್‌ ಮಾರ್ಷ್ ಜೋಡಿ ತಂಡಕ್ಕೆ ಭರ್ಜರಿ ಜತೆಯಾಟವನ್ನು ನಿಡುವಲ್ಲಿ ವಿಫಲವಾಯಿತು. ಈ ಜೋಡಿ ಕೇವಲ 18 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮನಮೋಹಕ ಫಾರ್ಮ್‌ನಲ್ಲಿರುವ ಐಡೇನ್ ಮಾರ್ಕ್ರಾಮ್‌ 9 ರನ್‌ಗಳಿಗೆ ಔಟ್ ಆದರು. ಇವರು ಜಸ್ಪ್ರಿತ್‌ ಬುಮ್ರಾ ಎಸೆತದಲ್ಲಿ ಸ್ಕ್ವೇರ್‌ಲೆಗ್‌ನಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ಔಟ್ ಆದರು.

ಎರಡನೇ ವಿಕೆಟ್‌ಗೆ ಮಿಚೆಲ್‌ ಮಾರ್ಷ್‌ ಹಾಗೂ ನಿಕೋಲಸ್‌ ಪೂರನ್‌ ಜೋಡಿ 21 ಎಸೆತಗಳಲ್ಲಿ 42 ರನ್‌ ಸಿಡಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವಿಲ್‌ ಜಾಕ್ಸ್ ಸಫಲರಾದರು. ನಿಕೋಲಸ್‌ ಪೂರನ್‌ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 27 ರನ್‌ ಸಿಡಿಸಿ ಔಟ್ ಆದರು. ದುಬಾರಿ ಆಟಗಾರ ರಿಷಭ್‌ ಪಂತ್‌ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ ಎರಡನೇ ಬೌಲ್‌ನಲ್ಲಿ ಸ್ವೀಪ್ ಶಾಟ್‌ ಬಾರಿಸಲು ಹೋಗಿ ವಿಲ್‌ ಜಾಕ್ಸ್‌ ಎಸೆತದಲ್ಲಿ ಕರುಣ್‌ ಶರ್ಮಾಗೆ ಕ್ಯಾಚ್‌ ನೀಡಿದರು.

ಜವಾಬ್ದಾರಿ ಮರೆತ ಸ್ಟಾರ್ಸ್‌

ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್ 24 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 34 ರನ್‌ ಬಾರಿಸಿ ಔಟ್ ಆದರು. ಆಯುಷ್‌ ಬದೋನಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 35 ರನ್‌ ಸಿಡಿಸಿದರು. ಡೇವಿಡ್‌ ಮಿಲ್ಲರ್‌ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಇವರು 3 ಬೌಂಡರಿ ನೆರವಿನಿಂದ 24 ರನ್‌ ಸಿಡಿಸಿ ಔಟ್ ಆದರು. ಉಳಿದಂತೆ ಅಬ್ದುಲ್‌ ಸಮದ್‌, ಆವೇಶ್‌ ಖಾನ್‌ ಬಂದು ಹೋಗುವ ಸಂಪ್ರದಾಯವನ್ನು ಮುಂದುವರೆಸಿದರು.

ಜಸ್ಪ್ರಿತ್‌ ಬುಮ್ರಾ ಅಬ್ಬರ

ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್ ವೇಗದ ಬೌಲರ್‌ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಿದರು. ಇವರು 4 ಓವರ್ ಬೌಲ್ ಮಾಡಿ 22 ರನ್‌ ನೀಡಿ 4 ವಿಕೆಟ್‌ ಪಡೆದರು. ಇದರಲ್ಲಿ ಐಡೇನ್‌ ಮಾರ್ಕ್ರಾಮ್‌, ಡೇವಿಡ್‌ ಮಿಲ್ಲರ್‌, ಅಬ್ದುಲ್‌ ಸಮದ್, ಆವೇಶ್ ಖಾನ್‌ ಅವರ ವಿಕೆಟ್‌ ಪಡೆದು ಅಬ್ಬರಿಸಿದರು. ಉಳಿದಂತೆ ಟ್ರೆಂಟ್‌ ಬೌಲ್ಟ್‌ 20 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು. ಇನ್ನು ಸ್ಪಿನ್ ಬೌಲರ್ ವಿಲ್‌ ಜಾಕ್ಸ್‌ 2 ವಿಕೆಟ್‌ ತಮ್ಮದಾಗಿಸಿಕೊಂಡರು.

MI vs LSG IPL 2025 Toss Match Report Score batting and bowling performance kannada

ಟಾಸ್‌ ಸೊತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡದ ಆರಂಭ ಸಾಧಾರಣಾಗಿತ್ತು. ರಯಾನ್‌ ರಿಕಲ್ಟನ್‌ ಹಾಗೂ ರೋಹಿತ್ ಶರ್ಮಾ ಜೋಡಿ 2.5 ಓವರ್‌ಗಳಲ್ಲಿ 33 ರನ್‌ ಸೇರಿಸಿತು. ರೋಹಿತ್ ಶರ್ಮಾ 5 ಎಸೆತಗಳಲ್ಲಿ 2 ಸಿಕ್ಸರ್ ಸಹಾಯದಿಂದ 12 ರನ್‌ ಸಿಡಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ರಯಾನ್‌ ರಿಕಲ್ಟನ್‌ ಹಾಗೂ ವಿಲ್ ಜಾಕ್ಸ್‌ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 35 ಎಸೆತಗಳಲ್ಲಿ 55 ರನ್‌ ಸೇರಿಸಿ ಅಬ್ಬರಿಸಿತು.

ರಿಕಲ್ಟನ್‌ ಅರ್ಧಶತಕ

ಆರಂಭಿಕ ರಿಯಾನ್‌ ರಿಕಲ್ಟನ್‌ ಪ್ರಸಕ್ತ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರು 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 58 ರನ್‌ ಬಾರಿಸಿ ಅಬ್ಬರಿಸಿದರು. ಇವರು ಔಟ್ ಆಗುತ್ತಿದ್ದಂತೆ ಸೂರ್ಯಕುಮಾರ್ ಯಾದವ್ ಮೈದಾನಕ್ಕೆ ಇಳಿದರು. ಇವರು ಮೂರನೇ ವಿಕೆಟ್‌ಗೆ ವಿಲ್‌ ಜಾಕ್ಸ್‌ ಅವರೊಂದಿಗೆ 17 ರನ್‌ಗಳಿಗೆ 28 ರನ್‌ ಸಿಡಿಸಿದರು. ಈ ವೇಳೆ ವಿಲ್‌ ಜಾಕ್ಸ್‌ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಸ್ಕೈ ಅರ್ಧಶತಕ

ತಿಲಕ್‌ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಸೂರ್ಯಕುಮಾರ್ ಯಾದವ್‌ಗೆ ಉತ್ತಮ ಸಾಥ್ ನೀಡುವಲ್ಲಿ ವಿಫಲರಾದರು. ಆರನೇ ವಿಕೆಟ್‌ಗೆ ನಮನ್‌ ಧೀರ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಉತ್ತಮ ಜೊತೆಯಾಟದ ಸೂಚನೆ ನೀಡಿತು. ಈ ಜೋಡಿ 14 ಎಸೆತಗಳಲ್ಲಿ 23 ರನ್‌ ಸಿಡಿಸಿದರು. ಸುರ್ಯಕುಮಾರ್‌ ಯಾದವ್ 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಾಯದಿಮದ 54 ರನ್‌ ಸಿಡಿಸಿ ಔಟ್ ಆದರು.

ಕಾರ್ಬಿನ್ ಬಾಷ್ (20) ಹಾಗೂ ನಮನ್‌ ಧೀರ್‌ (ಅಜೇಯ 25 ರನ್‌) ತಂಡಕ್ಕೆ ಆಧಾರವಾದರು.

ಲಕ್ನೋ ತಂಡದ ಪರ ಮಯಾಂಕ್‌ ಯಾದವ್, ಆವೀಶ್ ಖಾನ್‌ ತಲಾ ಎರಡು ವಿಕೆಟ್‌ ಉರುಳಿಸಿದರು.

Story first published: Sunday, April 27, 2025, 17:56 [IST]
Other articles published on Apr 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+