Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ರೋಹಿತ್, ರಿಕೆಲ್ಟನ್ ಅಬ್ಬರ, ಮನೆಯಂಗಳ ವಾಂಖೆಡೆಯಲ್ಲಿ ಎಲ್‌ಎಸ್‌ಜಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಒಲಿದ ಗೆಲುವು

MI Vs LSG IPL 2026: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಮೇ 4) ನಡೆದ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹಾಗಾದ್ರೆ ಸಂಪೂರ್ಣ ಮ್ಯಾಚ್ ವರದಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಲಕ್ನೋ ಸೂಪರ್ ಜೈಂಟ್ಸ್‌ ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 288 ರನ್‌ಗಳನ್ನು ಕಲೆಹಾಕಿತು. ಬಳಿಕ ಮುಂಬೈ ಇಂಡಿಯನ್ಸ್‌ ರೋಹಿತ್, ರಿಕೆಲ್ಟನ್ ಅವರು ಸಿಡಿಸಿದ ಭರ್ಜರಿ ಅರ್ಧಶತಕಗಳಿಂದ 229 ರನ್‌ಗಳ ಗುರಿಯನ್ನು 18.5 ಓವರ್‌ಗಳಲ್ಲಿ ಮುಟ್ಟುವ ಮೂಲಕ ಗೆದ್ದು ಬೀಗಿದೆ.

MI vs LSG IPL 2026 Rohit Sharma Ryan Rickelton Power Mumbai Indians to 6-Wicket Win in Wankhede

ಉತ್ತಮ ಜೊತೆಯಾಟ ಆಡಿದ ರೋಹಿತ್, ರಿಕೆಲ್ಟನ್

ಎಲ್‌ಎಸ್‌ಜಿ ನೀಡಿದ 229 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ಆರಂಭಿಕರಾದ ರಯಾನ್ ರಿಕೆಲ್ಟನ್ ಮತ್ತು ತಂಡಕ್ಕೆ ಮರಳಿದ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ನೀಡಿದರು. ಕೇವಲ 10.5 ಓವರ್‌ಗಳಲ್ಲಿ ಈ ಜೋಡಿ 143 ರನ್‌ಗಳ ದಾಖಲೆಯ ಜೊತೆಯಾಟವಾಡುವ ಮೂಲಕ ಜಯದ ಹಾದಿಯನ್ನು ಸುಗಮಗೊಳಿಸಿತು. ಈ ಗೆಲುವಿನೊಂದಿಗೆ ಮುಂಬೈ ತಂಡವು ಪ್ಲೇ ಆಫ್ ರೇಸ್‌ನಲ್ಲಿ ಅಲ್ಪಸ್ವಲ್ಪ ಜೀವಂತವಾಗಿದ್ದರೆ, ಲಕ್ನೋ ತಂಡ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

ಮುಂಬೈ ಪರ ಯಾರು ಎಷ್ಟು ರನ್‌ ಗಳಿಸಿದರು?

ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಬೀಸಿದ ರಯಾನ್ ರಿಕೆಲ್ಟನ್ ಕೇವಲ 32 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 83 ರನ್‌ ಬಾರಿಸಿದರೆ, ಹಿಟ್‌ ಮ್ಯಾನ್‌ ರೋಹಿತ್ ಶರ್ಮಾ 44 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ಗಳ ಸಹಿತ 84 ರನ್‌ ಸಿಡಿಸಿ ಉತ್ತಮ ಆರಂಭ ನೀಡಿದರು. ತಿಲಕ್ ವರ್ಮಾ 11(13), ನಾಯಕ ಸೂರ್ಯಕುಮಾರ್ ಯಾದವ್ 12(7) ರನ್‌ ಕಲೆಹಾಕಿದರೆ, ನಮನ್ ಧೀರ್ ಅಜೇಯ 23 ರನ್ ಚಚ್ಚುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡಕ್ಕೆ ನಿಕೋಲಸ್ ಪೂರನ್ ಆಸರೆಯಾಗಿದ್ದರು. ಕೇವಲ 21 ಎಸೆತಗಳಲ್ಲಿ 63 ರನ್ ಚಚ್ಚಿದ ಪೂರನ್, ಈ ಸೀಸನ್‌ನ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು. ಇವರಿಗೆ ಸಾಥ್ ನೀಡಿದ ಮಿಚೆಲ್ ಮಾರ್ಷ್ (44 ರನ್) ಜೊತೆಗೂಡಿ 94 ರನ್‌ಗಳ ಜೊತೆಯಾಟ ಆಡಿದರು. ಉಳಿದಂತೆ ನಾಯಕ ರಿಷಬ್ ಪಂತ್ 15(10) ಏಡನ್ ಮಾರ್ಕ್ರಾಮ್ ಅಜೇಯ 31(25), ಹಿಮ್ಮತ್ ಸಿಂಗ್ ಅಜೇಯ 40(31) ರನ್‌ಗಳ ಕೊಡುಗೆ ನೀಡಿದರು. ಲಕ್ನೋ ಸೂಪರ್ ಜೈಂಟ್ಸ್ ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 228/5 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.

ಲಕ್ನೋ ತಂಡವು ಅತಿ ವೇಗವಾಗಿ ರನ್ ಕಲೆಹಾಕುತ್ತಿದ್ದ ವೇಳೆ ಮುಂಬೈ ಪರ ಬೌಲಿಂಗ್ ಮಾಡಿದ ಕಾರ್ಬಿನ್ ಬಾಷ್, ಕೇವಲ ಐದು ಎಸೆತಗಳ ಅಂತರದಲ್ಲಿ ನಿಕೋಲಸ್‌ ಪೂರನ್ ಮತ್ತು ಮಿಚೆಲ್‌ ಮಾರ್ಷ್ ಇಬ್ಬರನ್ನೂ ಔಟ್ ಮಾಡುವ ಮೂಲಕ ಮಿಂಚಿದರು. ಅಲ್ಲ ಘಜನ್ಫರ್, ವಿಲ್ ಜಾಕ್ಸ್‌ ಹಾಗೂ ರಘು ಶರ್ಮಾ ಒಂದು ವಿಕೆಟ್‌ ಪಡೆದು ಎಲ್‌ಎಸ್‌ಜಿಯನ್ನು 228 ರನ್‌ಗಳಿಗೆ ಕಟ್ಟಿಸಿದರು. ಒಟ್ಟಿನಲ್ಲಿ ಎಲ್‌ಎಸ್‌ಜಿ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಮುಂಬೈ ಇಂಡಿಯನ್ಸ್ ತನ್ನ ತವರು ಮೈದಾನದಲ್ಲಿ ಅಭಿಮಾನಿಗಳಿಗೆ ಸ್ಮರಣೀಯ ಗೆಲುವಿನ ಉಡುಗೊರೆ ನೀಡಿದೆ.

Story first published: Monday, May 4, 2026, 23:52 [IST]
Other articles published on May 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+