MI vs RCB: ಹಾರ್ದಿಕ್ ಪಾಂಡ್ಯ ವಿರುದ್ಧ ಪ್ರೇಕ್ಷಕರ ವರ್ತನೆಗೆ ಕೊಹ್ಲಿ ಬೇಸರ; ಮುಂದೆ ಆಗಿದ್ದೇನು?; ವಿಡಿಯೋ ವೈರಲ್
ಗುರುವಾರ, ಎಪ್ರಿಲ್ 11ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ರೋಚಕ ಕ್ಷಣಗಳು ತೆರೆದುಕೊಂಡವು.
ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಬ್ಯಾಟರ್‌ಗಳು ಪಂದ್ಯದುದ್ದಕ್ಕೂ ಅಬ್ಬರಿಸಿದರೆ, ಉಭಯ ತಂಡಗಳ ಬೌಲರ್‌ಗಳು ಬಸವಳಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ 7 ವಿಕೆಟ್‌ಗಳಿಂದ ಗೆದ್ದುಬೀಗಿತು.

ಇದೇ ವೇಳೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ತವರಿನ ಪ್ರೇಕ್ಷಕರಿಂದ ಸೂಕ್ತ ಬೆಂಬಲ ಪಡೆಯಲಿಲ್ಲ. ಇದು ಫೀಲ್ಡಿಂಗ್ ಮಾಡುತ್ತಿದ್ದ ಆರ್‌ಸಿಬಿ ಸ್ಟಾರ್ ಹಾಗೂ ಭಾರತ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಸರಿ ಕಾಣಲಿಲ್ಲ.
ಐಪಿಎಲ್ 2024ರ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ನಾಯಕರನ್ನಾಗಿ ನೇಮಿಸಿತು. ಈ ನಿರ್ಧಾರದ ವಿರುದ್ಧ ಫ್ರಾಂಚೈಸಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಪಂದ್ಯಾವಳಿಯಲ್ಲಿ ಸತತ ಮೂರು ಸೋಲಿನ ನಂತರ, ಹಾರ್ದಿಕ್ ಪಾಂಡ್ಯ ಅವರನ್ನು ಮೈದಾನದ ಒಳಗೆ ಮತ್ತು ಹೊರಗೆ ಪ್ರೇಕ್ಷಕರು ದೂಷಿಸುತ್ತಲೇ ಇದ್ದರು.
ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಾಗೂ ಪ್ರೇಕ್ಷಕರ ವರ್ತನೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಮುಂದುವರೆಯಿತು. ಹಾರ್ದಿಕ್ ಪಾಂಡ್ಯರನ್ನು ಒಪ್ಪಿಕೊಳ್ಳು ಅಭಿಮಾನಿಗಳು ಈಗಲೂ ಸಿದ್ಧರಿಲ್ಲ ಎಂಬುದನ್ನು ತೋರಿಸಿದರು.
ಆದರೆ, ಪ್ರೇಕ್ಷಕರ ಈ ಪ್ರತಿಕ್ರಿಯೆಯಿಂದ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅಸಮಾಧಾನಗೊಂಡರು ಮತ್ತು ಹಾರ್ದಿಕ್ ಪಾಂಡ್ಯಗೆ ನಕಾರಾತ್ಮಕ ಸ್ವಾಗತವನ್ನು ನಿಲ್ಲಿಸುವಂತೆ ಸನ್ನೆ ಮಾಡಿದರು. ಅಲ್ಲದೆ, ಮುಂಬೈ ಇಂಡಿಯನ್ಸ್ ನಾಯಕನನ್ನು ಹುರಿದುಂಬಿಸುವಂತೆ ಸೂಚಿಸಿದರು.
ಆ ಬಳಿಕ ಪ್ರೇಕ್ಷಕರು ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಅಂತರವನ್ನು ತಗ್ಗಸಿಲು ವಿರಾಟ್ ಕೊಹ್ಲಿಯ ಮಧ್ಯಸ್ಥಿಕೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಆರ್‌ಸಿಬಿ ಸ್ಟಾರ್ ಆಟಗಾರನನ್ನು ಹೊಗಳುವುದು ತ್ವರಿತವಾಗಿ ವೈರಲ್ ಆಗಿದೆ.
ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಬಂದಾಗ ಹಾರ್ದಿಕ್ ಪಾಂಡ್ಯ ಮೊದಲು ಪ್ರೇಕ್ಷಕರಿಂದ ಅಬ್ಬರ ಎದುರಿಸಿದರು. ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಔಟಾದ ನಂತರ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ಗೆ ಬಂದಾಗ ಕಡಿಮೆ ಪ್ರೇಕ್ಷಕರು ಬೆಂಬಲಿಸಿದರು.
ರೋಹಿತ್ ಶರ್ಮಾ ಅವರ ಪ್ರತಿ ಶಾಟ್‌ಗೂ ಭಾರಿ ಉತ್ತೇಜನ ನೀಡಿದರೆ, ಹಾರ್ದಿಕ್ ಪಾಂಡ್ಯಗೆ ಮೆಚ್ಚುಗೆ ಸೂಚಿಸಲು ಪ್ರೇಕ್ಷಕರು ಕಷ್ಟಪಟ್ಟರು. ಪ್ರೇಕ್ಷಕರು ಸೈಲೆಂಟ್ ಆಗಿರುವುದನ್ನು ಕಂಡ ವಿರಾಟ್ ಕೊಹ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಿ, ಬೆಂಬಲ ನೀಡಲು ಒತ್ತಾಯಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಎಂದು ವಿರಾಟ್ ಕೊಹ್ಲಿ ಪ್ರೇಕ್ಷಕರಿಗೆ ನೆನಪಿಸುವುದನ್ನು ಸಹ ಕಾಣಬಹುದು.
ಪ್ರೇಕ್ಷಕರ ಒಂದು ಗುಂಪು ಮಾತ್ರ 'ಹಾರ್ದಿಕ್, ಹಾರ್ದಿಕ್' ಎಂದು ಉತ್ತೇಜಿಸಲು ಪ್ರಾರಂಭಿಸಿದ್ದರಿಂದ, ಅದು ಬಹುತೇಕ ತತ್‌ಕ್ಷಣಕ್ಕೆ ಸೀಮಿತವಾಗಿತ್ತು. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಆರ್‌ಸಿಬಿ ಬೌಲರ್ ವಿಲ್ ಜ್ಯಾಕ್ಸ್ ವಿರುದ್ಧ ಮೊದಲ ಎಸೆತದಲ್ಲಿ ಬಾರಿಸಿದ ಸಿಕ್ಸರ್‌ಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಇನ್ನು ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೂ ಮುನ್ನ, ಜಸ್ಪ್ರೀತ್ ಬುಮ್ರಾ ಅವರ ಐದು ವಿಕೆಟ್ ಗಳಿಕೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮುಂಬೈ ಇಂಡಿಯನ್ಸ್ ತಂಡ ಹೀನಾಯವಾಗಿ ಸೋಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications