Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs RCB: ಪಂದ್ಯದ ಸಮಯ, ನೇರ ಪ್ರಸಾರ, ಪ್ಲೇಯಿಂಗ್ ಇಲೆವೆನ್ ಸಂಪೂರ್ಣ ಮಾಹಿತಿ

ಮುಂಬೈ: ಅಂತಾರಾಷ್ಟ್ರೀಯ ಸ್ಟಾರ್ ಆಟಗಾರರನ್ನೇ ಹೊಂದಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು 19ನೇ ಆವೃತ್ತಿಯಲ್ಲಿ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಎರಡನೇ ಬಾರಿ ಕಪ್‌ ಗೆಲ್ಲುವ ಆಸೆಯನ್ನು ಹೊಂದಿದೆ. ಮುಂಬೈ ಹಾಗೂ ಬೆಂಗಳೂರು ತಂಡಗಳು ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡದ ವಿರುದ್ಧ ಸೋಲು ಕಂಡಿವೆ. ಹೀಗಾಗಿ ಈ ಪಂದ್ಯದಲ್ಲಿ ಜಯ ಸಾಧಿಸುವ ಆಸೆ ಎರಡೂ ತಂಡಗಳದ್ದಾಗಿದೆ.

ಆರ್‌ಸಿಬಿ ಹಾಗೂ ಮುಂಬೈ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಈ ಆಟಗಾರರು ತಂಡದ ದಿಕ್ಕನ್ನೇ ಬದಲಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಉಭಯ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ಬೌಲಿಂಗನಲ್ಲೂ ವಿಶ್ವದ ಶ್ರೇಷ್ಠ ಬೌಲರ್‌ಗಳು ಇದ್ದು, ಬ್ಯಾಟರ್‌ಗಳನ್ನು ಕಾಡಲಿದ್ದಾರೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಎರಡೂ ತಂಡಗಳದ್ದಾಗಿದೆ. ಎರಡೂ ತಂಡಗಳ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು.

MI vs RCB

ಆರ್‌ಸಿಬಿ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಬ್ಯಾಟ್ ಮಾಡಬೇಕಿದೆ. ಅಂದಾಗ ಮೂರನೇ ಗೆಲುವಿನ ಆಸೆ ಫಲಿಸುತ್ತದೆ. ಮುಂಬೈ ಸಹ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯದ 2 ಅಂಕ ಯಾವ ತಂಡದ ಪಾಲಾಗಲಿದೆ ಎಂಬುದೇ ಕುತೂಹಲ ಮೂಡಿಸಿದೆ.

ಪಿಚ್ ವರದಿ

ವಾಂಖೆಡೆ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಮುಂಬೈ ನಡುವಣ ಪಂದ್ಯ ಸಂಜೆ 7.30ಕ್ಕೆ ನಡೆಯಲಿದೆ. ಈ ಅಂಗಳದಲ್ಲಿ ಟಾಸ್‌ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಬಹುದು. ಕಾರಣ ಎರಡನೇ ಇನಿಂಗ್ಸ್‌ ಆಡುವಾಗ ಇಬ್ಬನಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಭಾನುವಾರದ ಪಂದ್ಯ ಪಿಚ್‌ ನಂಬರ್ 8ರಲ್ಲಿ ನಡೆಯಲಿದೆ. ಈ ಪಿಚ್‌ನಲ್ಲಿ ಕಳೆದ 7 ಐಪಿಎಲ್‌ ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡ 4 ಬಾರಿ ಗೆದ್ದಿದ್ದು, ಮೊದಲ ಬ್ಯಾಟ್ ಮಾಡಿದ ತಂಡ 3 ಬಾರಿ ಗೆದ್ದಿದೆ.

ಉಭಯ ತಂಡಗಳು ಐಪಿಎಲ್‌ನಲ್ಲಿ ಎಷ್ಟು ಬಾರಿ ಮುಖಾಮುಖಿಯಾಗಿವೆ?

ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಈ ವರೆಗೆ ಐಪಿಎಲ್‌ನಲ್ಲಿ 34 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್‌ಸಿಬಿ 15 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 19 ಪಂದ್ಯಗಳಲ್ಲಿ ಮುಂಬೈ ಜಯ ಸಾಧಿಸಿದೆ.

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಹೇಗಿರಲಿದೆ ಮುಂಬೈ ಪ್ಲೇಯಿಂಗ್ ಇಲೆವೆನ್?

ರಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ನಮನ್ ಧೀರ್, ಶೆರ್ಫೇನ್ ರುದರ್‌ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್/ಕಾರ್ಬಿನ್ ಬಾಷ್, ಜಸ್ಪ್ರೀತ್ ಬುಮ್ರಾ.

ಯಾವೆಲ್ಲಾ ಆಟಗಾರರಿಗೆ ಆರ್‌ಸಿಬಿ ಅವಕಾಶವನ್ನು ನೀಡಬಹುದು?

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್/ಮಂಗೇಶ್ ಯಾದವ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ.

ಆರ್‌ಸಿಬಿ, ಮುಂಬೈ ಪಂದ್ಯವನ್ನು ವೀಕ್ಷಿಸುವುದು ಎಲ್ಲಿ?

ಆರ್‌ಸಿಬಿ ಹಾಗೂ ಮುಂಬೈ ನಡುವಣ ಐಪಿಎಲ್‌ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದಾಗಿದೆ.

ಆರ್‌ಸಿಬಿ, ಮುಂಬೈ ಪಂದ್ಯ ನಡೆಯುವ ಸಮಯ?

ಆರ್‌ಸಿಬಿ, ಮುಂಬೈ ಪಂದ್ಯವು ಸಂಜೆ 7.30ಕ್ಕೆ ನಡೆಯಲಿದೆ. ಟಾಸ್ ಪಂದ್ಯಕ್ಕೂ ಅರ್ಧಗಂಟೆ ಮುನ್ನ ನಡೆಯಲಿದೆ.

Story first published: Sunday, April 12, 2026, 8:05 [IST]
Other articles published on Apr 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+