Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs RR: ಮುಂಬೈ ಮಣಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್‌ಗೆ; ಎಲಿಮಿನೇಟರ್‌ನಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಫೈಟ್

ಮುಂಬೈ: ಭರವಸೆಯ ಆಟಗಾರ ಜೋಫ್ರಾ ಆರ್ಚರ್‌ ಆಲ್‌ರೌಂಡರ್‌ ಪ್ರದರ್ಶನದ ಫಲವಾಗಿ ರಾಜಸ್ಥಾನ್ ರಾಯಲ್ಸ್‌ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನ 69ನೇ ಪಂದ್ಯದಲ್ಲಿ 30 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಆಡಿದ ರಾಯಲ್ಸ್‌ 14 ಪಂದ್ಯಗಳಲ್ಲಿ 8 ಜಯ ಸಾಧಿಸಿ 16 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.

ರಾಜಸ್ಥಾನ್ ರಾಯಲ್ಸ್‌ 30 ರನ್‌ ಜಯ ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್‌ ಆಸೆಗೆ ಕೊಳ್ಳಿ ಇಟ್ಟಿದೆ. ರಾಯಲ್ಸ್‌ ಎಲಿಮಿನೇಟರ್‌ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಕಾದಾಟವನ್ನು ನಡೆಸಲಿದೆ. ಈ ಪಂದ್ಯ ಮೇ 27 ರಂದು ನ್ಯೂ ಚಂಡಿಗಢನಲ್ಲಿ ನಡೆಯಲಿದೆ.

MI vs RR

ಮಹತ್ವದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ರಾಜಸ್ಥಾನ್ ರಾಯಲ್ಸ್ ತಾನು ಅಂದುಕೊಂಡಂತಹ ಆರಂಭವನ್ನು ಪಡೆಯಲಿಲ್ಲ. ಯಶಸ್ವಿ ಜೈಸ್ವಾಲ್ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ 3.4 ಓವರ್‌ಗಳಲ್ಲಿ 33 ರನ್‌ ಸೇರಿಸಿತು. ಈ ವೇಳೆ ಯಶಸ್ವಿ ಜೈಸ್ವಾಲ್‌ 27 ರನ್ ಬಾರಿಸಿ ಔಟ್ ಆದರು. ರನ್‌ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದಿದ್ದ ವೈಭವ್ ಸೂರ್ಯವಂಶಿ 4 ರನ್‌ಗೆ ಆಟ ಮುಗಿಸಿದರು.

ಜೋಫ್ರಾ ಕಮಾಲ್‌ ಬ್ಯಾಟಿಂಗ್

ಮೂರನೇ ವಿಕೆಟ್‌ಗೆ ಧ್ರುವ್ ಜುರೇಲ್‌ ಹಾಗೂ ರಿಯಾನ್ ಪರಾಗ್‌ (14) ಜೋಡಿ 21 ರನ್‌ ಸೇರಿಸಿತು. ಈ ವೇಳೆ ರಿಯಾನ್‌ ಪರಾಗ್ ಬಿಗ್ ಹಿಟ್ ಬಾರಿಸಲು ಹೋಗಿ ಔಟ್ ಆದರು. 5ನೇ ವಿಕೆಟ್‌ಗೆ ದಸುನ್‌ ಶನಕ ಹಾಗೂ ಜುರೇಲ್‌ ಜೋಡಿ ಸಮಯೋಚಿತ ಬ್ಯಾಟಿಂಗ್‌ ನಡೆಸಿತು. ಈ ಜೋಡಿ 27 ಎಸೆತಗಳಲ್ಲಿ 45 ರನ್‌ ಸೇರಿಸಿತು. ದಸುನ್ ಶನಕ 29, ಜುರೇಲ್‌ 38 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ನೋ-ಬಾಲ್ ಡ್ರಾಮಾ; ಶಾರ್ದೂಲ್ ಠಾಕೂರ್‌ರನ್ನು ಮೈದಾನದಲ್ಲೇ ಕಿಚಾಯಿಸಿದ ರವೀಂದ್ರ ಜಡೇಜಾ

ನೋ-ಬಾಲ್ ಡ್ರಾಮಾ; ಶಾರ್ದೂಲ್ ಠಾಕೂರ್‌ರನ್ನು ಮೈದಾನದಲ್ಲೇ ಕಿಚಾಯಿಸಿದ ರವೀಂದ್ರ ಜಡೇಜಾ

ಡೊನೊವನ್ ಫೆರೀರಾ 18 ಹಾಗೂ ವೇಗದ ಬೌಲರ್‌ ಜೋಫ್ರಾ ಆರ್ಚರ್ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿದರು. ಇವರು 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 32 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ರಾಜಸ್ಥಾನ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 205 ರನ್‌ ಸೇರಿಸಿತು. ಮುಂಬೈ ಪರ ದೀಪಕ್ ಚಾಹರ್‌, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್‌ ಕಬಳಿಸಿದರು.

ಬ್ಯಾಟಿಂಗ್ ಪವರ್ ಕಟ್‌

ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಪವರ್‌ ಪ್ಲೇನಲ್ಲಿ ಪವರ್‌ ಫುಲ್ ಆರಂಭ ನೀಡುವಲ್ಲಿ ವಿಫಲರಾದ ಮುಂಬೈ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ಎಡವಿದರು. ಸ್ಟಾರ್ ಆಟಗಾರ ರೋಹಿತ್ ಶರ್ಮಾ (0), ರಯಾನ್ ರಿಕಲ್ಟನ್‌ (12), ನಮನ್ ಧೀರ್ (6), ತಿಲಕ್ ವರ್ಮಾ (3) ಮೊದಲ 6 ಓವರ್‌ಗಳಲ್ಲೇ ವಿಕೆಟ್‌ ಒಪ್ಪಿಸಿದರು.

5ನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ವಿಲ್‌ ಜಾಕ್ಸ್‌ (33) ಜೋಡಿ ಗೆಲುವಿನ ಆಸೆಯನ್ನು ಚಿಗುರಿಸಿತು. ಆದರೆ ಈ ಜೋಡಿ 63 ರನ್ ಬಾರಿಸಿತು. ಹಾರ್ದಿಕ್ ಪಾಂಡ್ಯ (34) ಹಾಗೂ ಸೂರ್ಯಕುಮಾರ್‌ ಯಾದವ್ ಜೋಡಿ 48 ರನ್‌ ಸೇರಿಸಿತು. ಈ ಜೋಡಿಯನ್ನು ಜೋಫ್ರಾ ಆರ್ಚರ್ ಬ್ರೇಕ್ ಮಾಡಿದರು. ಉಳಿದ ಬ್ಯಾಟರ್‌ಗಳು ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಮಾಡಲಿಲ್ಲ.

ಎಲ್‌ಎಸ್‌ಜಿ ಪರ ಪದಾರ್ಪಣೆ ಮಾಡಿದ ಮಗ ಅರ್ಜುನ್‌ಗೆ ಸಚಿನ್‌ ತೆಂಡೂಲ್ಕರ್ ಭಾವುಕ ಸಂದೇಶ

ಎಲ್‌ಎಸ್‌ಜಿ ಪರ ಪದಾರ್ಪಣೆ ಮಾಡಿದ ಮಗ ಅರ್ಜುನ್‌ಗೆ ಸಚಿನ್‌ ತೆಂಡೂಲ್ಕರ್ ಭಾವುಕ ಸಂದೇಶ
MI vs RR

ಭರವಸೆಯ ಬ್ಯಾಟರ್ ಸೂರ್ಯಕುಮಾರ್ ಯಾದವ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 60 ರನ್‌ ಬಾರಿಸಿ ಔಟ್ ಆದರು. ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 175 ರನ್‌ ಸೇರಿಸಿತು. ರಾಯಲ್ಸ್‌ ಪರ ಜೋಫ್ರಾ ಆರ್ಚರ್‌ 17 ರನ್‌ ನೀಡಿ 3 ವಿಕೆಟ್‌ ಪಡೆದರು. ನಂಡ್ರೆ ಬರ್ಗರ್‌, ಬ್ರಿಜೇಶ್ ಶರ್ಮಾ, ಯಶಸ್ ರಾಜ್‌ ಪುಂಜಾ ತಲಾ 2 ವಿಕೆಟ್‌ ಪಡೆದರು.

Story first published: Sunday, May 24, 2026, 20:12 [IST]
Other articles published on May 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+