Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೋ-ಬಾಲ್ ಡ್ರಾಮಾ; ಶಾರ್ದೂಲ್ ಠಾಕೂರ್‌ರನ್ನು ಮೈದಾನದಲ್ಲೇ ಕಿಚಾಯಿಸಿದ ರವೀಂದ್ರ ಜಡೇಜಾ

ಐಪಿಎಲ್ 2026 ಲೀಗ್ ಹಂತದ 69 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕಾದಾಟಕ್ಕೆ ವಾಂಖೆಡೆ ಅಂಗಳ ಸಾಕ್ಷಿಯಾಯಿತು. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಸೂಚಿಸಿದರು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪವರ್‌ ಪ್ಲೇನಲ್ಲಿ ಮುಂಬೈ ಬೌಲರ್‌ಗಳು ಕಾಟ ನೀಡಿದರು. ಈ ಲೀಗ್‌ನ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದರು. ರಾಜಸ್ಥಾನ್ ಇನಿಂಗ್ಸ್‌ನ ಕೊನೆಯ ಓವರ್ ಎಲ್ಲರ ಗಮನ ಸೆಳೆಯಿತು. ಈಗ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ ಅಂತಿಮ ಓವರ್ ಎಸೆಯಲು ಮುಂದಾದರು. ಅಂತಿಮ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ನಿಧಾನಗತಿಯ ಎಸೆತ ಎಸೆದರು. ಇದನ್ನು ತಪ್ಪಾಗಿ ಗುರುತಿಸಿದ ಜಡೇಜಾ ಔಟ್ ಆದರು. ಜಡೇಜಾ ಅವರನ್ನು ಔಟ್ ಮಾಡಿದ ನಂತರ, ಶಾರ್ದೂಲ್ ತಮಾಷೆಯಾಗಿ ಅವರ ಬಳಿಗೆ ಹೋಗಿ ಸಂಭ್ರಮಾಚರಣೆ ಮಾಡಿದರು. ಆದರೆ ಅಂಪೈರ್ ನೋಬೌಲ್ ಎಂದು ಸೂಚಿಸಿದರು. ಈ ನಿರ್ಣಯ ಶಾರ್ದೂಲ್ ಮತ್ತು ಮುಂಬೈ ಇಂಡಿಯನ್ಸ್‌ನ ಸಂಭ್ರಮಕ್ಕೆ ಬ್ರೇಕ್ ಬಿದ್ದಿತು.

MI vs RR

ನೋ-ಬಾಲ್ ಸಿಗ್ನಲ್ ನೀಡಿದ ನಂತರ ಜಡೇಜಾ ಮೈದಾನಕ್ಕೆ ಮರಳುವಾಗ, ಅವರು ಶಾರ್ದೂಲ್ ಅವರನ್ನು ಕಿಚಾಯಿಸಿದರು. ಈ ಓವರ್‌ನಲ್ಲೂ ಇಂತಹ ದೃಶ್ಯಗಳು ಕಂಡು ಬಂದವು. ಶಾರ್ದೂಲ್ ಠಾಕೂರ್ ಅವರಿಗೆ ಆ ಒಂದು ನೋಬೌಲ್‌ ದುಬಾರಿಯಾಯಿತು.

ಆಗಿದ್ದೇನು?

ಫ್ರೀ ಹಿಟ್‌ನಲ್ಲಿ ಜಡೇಜಾ ಬೌಂಡರಿ ಬಾರಿಸಿದರು. ಜಡೇಜಾ ಕೂಡ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದರು. ಜಡೇಜಾ ಅವರ ಈ ಎರಡು ಬೌಂಡರಿಗಳಿಂದಾಗಿ, ರಾಜಸ್ಥಾನ ಈ ಪಂದ್ಯದಲ್ಲಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇದೇ ವೇಳೆ ಮತ್ತೆ ರವೀಂದ್ರ ಜಡೇಜಾ ಶಾರ್ದೂಲ್‌ ಅವರ ಬಳಿ ಹೋಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಈ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಶಾರ್ದೂಲ್ ಅವರ ಕೊನೆಯ ಓವರ್‌ನಲ್ಲಿ ಒಟ್ಟು 14 ರನ್‌ ನೀಡಿದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 41 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಸಹ ಪಡೆದರು. ಶಾರ್ದೂಲ್ ಜೋಫ್ರಾ ಆರ್ಚರ್ ಮತ್ತು ಶುಭಂ ದುಬೆ ಅವರನ್ನು ಔಟ್ ಮಾಡಿದರು.

Story first published: Sunday, May 24, 2026, 19:37 [IST]
Other articles published on May 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+