MI vs RR: ರಾಜಸ್ಥಾನ್ ತಂಡ ಮಾತ್ರವಲ್ಲ, ಮುಂಬೈ ಫ್ಯಾನ್ಸ್ ಕೂಡ ಹಾರ್ದಿಕ್ ಪಾಂಡ್ಯಗೆ ಎದುರಾಳಿ
ಸೋಮವಾರ, ಏಪ್ರಿಲ್ 1ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಲು ಸಜ್ಜಾಗಿವೆ.
ಮುಂಬೈ ಇಂಡಿಯನ್ಸ್ ತಂಡ ತವರಿನಲ್ಲಿ ಆಡುತ್ತಿರುವುದರಿಂದ ಮತ್ತು ತನ್ನ ಹಿಂದಿನ ಎರಡು ಪಂದ್ಯಗಳನ್ನು ಸೋತಿರುವುದರಿಂದ ತೀವ್ರ ಒತ್ತಡದಲ್ಲಿದೆ. ಅದರಲ್ಲೂ ನಾಯಕ ಹಾರ್ದಿಕ್ ಪಾಂಡ್ಯಗೆ ಇದು ಡಬಲ್ ಆಗಿರಲಿದೆ.

ಐಪಿಎಲ್ 2024ರಲ್ಲಿ ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 6 ರನ್‌ಗಳ ವಿರೋಚಿತ ಸೋಲು ಎದುರಿಸಿತು. ನಂತರ ತಮ್ಮ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 31 ರನ್‌ಗಳ ಸೋಲು ಅನುಭವಿಸಿತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದೀಗ ಮುಂಬೈ ಇಂಡಿಯನ್ಸ್ ತಂಡ ತವರಿನ ಅಂಗಳದಲ್ಲಿ ತನ್ನ ಮೊದಲ ಪಂದ್ಯ ಆಡುತ್ತಿರುವುದರಿಂದ ಗೆಲುವಿಗೆ ಹಾತೊರೆಯಲಿದೆ. ಇದೇ ವೇಳೆ ಮುಂಬೈ ಇಂಡಿಯನ್ಸ್ ನೂತನ ಹಾರ್ದಿಕ್ ಪಾಂಡ್ಯ ಪಂದ್ಯದ ಕೇಂದ್ರಬಿಂದುವಾಗಿದ್ದಾರೆ.
2024ರ ಐಪಿಎಲ್‌ಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ನೇಮಕಗೊಂಡಾಗಿನಿಂದಲೂ, ಹಾರ್ದಿಕ್ ಪಾಂಡ್ಯಗೆ ಹೊರಗಿನಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಸೋಮವಾರದ ಪಂದ್ಯದಲ್ಲಿ ವಿಶೇಷವಾಗಿ, ಹಾರ್ದಿಕ್ ಪಾಂಡ್ಯ ಅವರು ರಾಜಸ್ಥಾನ್ ರಾಯಲ್ಸ್ ಮಾತ್ರವಲ್ಲದೆ ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳ ವಿರೋಧವನ್ನು ಎದುರಿಸಬೇಕಿದೆ.
ವಾಂಖೆಡೆಯಲ್ಲಿ 11 ವರ್ಷಗಳ ನಂತರ ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಬೇರೊಬ್ಬ ನಾಯಕ ಮುನ್ನಡೆಸಲಿದ್ದಾರೆ. ಇದಕ್ಕೆ ತಂಡದ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎಂಬುದಕ್ಕೆ ಕಳೆದೆರಡು ಪಂದ್ಯಗಳೇ ಸಾಕ್ಷಿಯಾಗಿವೆ. ಹಾರ್ದಿಕ್ ಪಾಂಡ್ಯರನ್ನು ಹೀಯಾಳಿಸಲಾಗುತ್ತಿದೆ ಮತ್ತಉ ಟ್ರೋಲ್ ಮಾಡಲಾಗುತ್ತಿದೆ.
ತಂಡದಲ್ಲಿ ರೋಹಿತ್ ಶರ್ಮಾ ಅವರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ನಡೆಗೆ ಅಭಿಮಾನಿಗಳು ಮತ್ತಷ್ಟು ಸಿಟ್ಟಿಗೆದ್ದಿದ್ದಾರೆ. ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳೇ ಹೆಚ್ಚಿರುವುದರಿಂದ ಹಾರ್ದಿಕ್ ಪಾಂಡ್ಯರನ್ನು ಮತ್ತೊಮ್ಮೆ ಕಾಡಿಸಲಿದ್ದಾರೆ.

ಹಾರ್ದಿಕ್ ಪಾಂಡ್ಯ ಮೂಲತಃ ಗುಜರಾತ್‌ನ ಬರೋಡಾದವರು. ಇತ್ತೀಚಿಗೆ ತವರು ನೆಲವಾದ ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ಅಭಿಮಾನಿಗಳು ಸಖತ್ ಅಗಿ ಟ್ರೋಲ್ ಮಾಡಿದ್ದಾರೆ.
ಗುಜರಾತ್ ಟೈಟನ್ಸ್ ತಂಡವನ್ನು ಬಿಟ್ಟು ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವುದಕ್ಕೆ ಅಲ್ಲಿನ ಅಭಿಮಾನಿಗಳು ಸಿಟ್ಟಿಗೆದ್ದಿದ್ದರೆ, ರೋಹಿತ್ ಶರ್ಮಾ ಅವರ ನಾಯಕನ ಸ್ಥಾನವನ್ನು ಕಿತ್ತುಕೊಂಡಿದ್ದಕ್ಕೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದ ವೇಳೆ, ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸುವುದರ ಜೊತೆಗೆ, ಅಭಿಮಾನಿಗಳ ತೀವ್ರ ವಿರೋಧವನ್ನೂ ಹಾರ್ದಿಕ್ ಪಾಂಡ್ಯ ಎದುರಿಸಬೇಕಿದೆ. ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಹಿಗ್ಗಾಮುಗ್ಗಾ ಛೇಡಿಸುತ್ತಿದ್ದಾರೆ.
ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಕೆಲವು ಕೋಚಿಂಗ್ ಸಿಬ್ಬಂದಿಗಳೊಂದಿಗೆ ಸಂಬಂಧ ಕೆಡಿಸಿಕೊಂಡಿರುವ ಹಾರ್ದಿಕ್ ಪಾಂಡ್ಯಗೆ ಹೆಚ್ಚುವರಿಯಾಗಿ, ತಂಡದ ಅಭಿಮಾನಿಗಳೇ ತಮ್ಮ ವಿರುದ್ಧ ನಿಂತಿದ್ದಾರೆ ಎಂಬುದು ತಿಳಿದಿದೆ. ಇದೀಗ ಅದನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನವುದು ಕುತೂಹಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications