ಐಪಿಎಲ್‌ನಲ್ಲಿ ಇಂದು 1000ನೇ ಪಂದ್ಯ ನಡೆಯುತ್ತಿದ್ದು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಯುವ ಆರಂಬಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಅಕ್ಷರಶಃ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದ್ದಾರೆ. ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ 124 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಇವರ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ 212 ರನ್‌ಗಳನ್ನು ಗಳಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ ತಂಡದ ಪರವಾಗಿ ಉಳಿದೆಲ್ಲಾ ಬ್ಯಾಟರ್‌ಗಳು ವಿಫಲವಾದರು. ಆದರೆ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮಾತ್ರ ಯಾವ ಹಂತದಲ್ಲಿಯೂ ಎದುರಾಳಿ ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ಕೊನೆಯ ಹಂತದವರೆಗೂ ಭರ್ಜರಿ ಪ್ರದರ್ಶನ ನೀಡಿದ ಜೈಸ್ವಾಲ್ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ.

ಈ ಪಂದ್ಯದಲ್ಲಿ 62 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 124 ರಬ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 16 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳು ಒಳಗೊಂಡಿತ್ತು. ಯಶಸ್ವಿ ಜೈಸ್ವಾಲ್ ಹೊರತುಪಡಿಸಿದರೆ ಉಳಿದ ಯಾವ ಆಟಗಾರನ ಬ್ಯಾಟ್‌ನಿಂದ ಕೂಡ 18ಕ್ಕಿಂತ ಹೆಚ್ಚಿನ ರನ್ ಹರಿದು ಬಂದಿಲ್ಲ ಎಂಬುದು ವಿಶೇಷ. ಹಾಗಿದ್ದರೂ ತಂಡ 212 ರನ್‌ಗಳ ಬೃಹತ್ ಮೊತ್ತಗಳಿಸಲು ಸಾದ್ಯವಾಗಿದ್ದು ಅಷ್ಟರ ಮಟ್ಟಿಗೆ ಈ ಪಂದ್ಯದಲ್ಲಿ ಜೈಸ್ವಾಲ್ ಅಬ್ಬರಿಸಿದ್ದಾರೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್, ಅರ್ಷದ್ ಖಾನ್
ಬೆಂಚ್: ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ರಮಣ್‌ದೀಪ್ ಸಿಂಗ್, ಜೇಸನ್ ಬೆಹ್ರೆನ್‌ಡಾರ್ಫ್, ಸಂದೀಪ್ ವಾರಿಯರ್, ಹೃತಿಕ್ ಶೋಕೀನ್, ಆಕಾಶ್ ಮಧ್ವಲ್, ದುವಾನ್ ಜಾನ್ಸೆನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಬೆಂಚ್: ಡೊನಾವೊನ್ ಫೆರೇರಾ, ಮುರುಗನ್ ಅಶ್ವಿನ್, ರಿಯಾನ್ ಪರಾಗ್, ಕುಲದೀಪ್ ಯಾದವ್, ಕುಲದೀಪ್ ಸೇನ್, ಆಡಮ್ ಜಂಪಾ, ಜೋ ರೂಟ್, ನವದೀಪ್ ಸೈನಿ, ಆಕಾಶ್ ವಸಿಷ್ಟ್, ಕೆಸಿ ಕಾರಿಯಪ್ಪ, ಓಬೇದ್ ಮೆಕಾಯ್, ಕೆಎಂ ಆಸಿಫ್, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋಡ್