For Quick Alerts
ALLOW NOTIFICATIONS  
For Daily Alerts
 

ILP 2024: ಹೈದರಾಬಾದ್‌ಗೆ ಕಡಿವಾಣ ಹಾಕಿದ ಹಾರ್ದಿಕ್‌, ಪಿಯೂಷ್ ಚಾವ್ಲಾ; ಮುಂಬೈಗೆ ಸವಾಲಿನ ಗುರಿ ನೀಡಿದ ಎಸ್‌ಆರ್‌ಹೆಚ್‌

ಮೇ 6 ಸೋಮವಾರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ತಂಡವನ್ನು ಕಡಿಮೆ ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್‌ (ಎಂಐ) ತಂಡ ಯಶಸ್ವಿಯಾಗಿದೆ.

ಮುಂಬೈ ಪರ ಜಂಟಿ ಬೌಲಿಂಗ್‌ ದಾಳಿ ನಡೆಸಿದ ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ಪಿಯೂಷ್‌ ಚಾವ್ಲಾ ಹೈದರಾಬಾದ್‌ ಬ್ಯಾಟರ್ಸ್‌ ರನ್‌ ಗಳಿಸದಂತೆ ನೋಡಿಕೊಂಡರು. ನಿಗದಿತ 20 ಓವರ್‌ಗಳಲ್ಲಿ ಹೈದರಾಬಾದ್‌ 8 ವಿಕೆಟ್‌ ಕಳೆದುಕೊಂಡು 173 ರನ್‌ಗಳನ್ನು ಗಳಿಸಿದೆ. ಮುಂಬೈ ಗೆಲುವಿಗೆ 174 ರನ್‌ಗಳ ಅವಶ್ಯಕತೆ ಇದೆ.

MI vs SRH Match Mumbai Indians vs Sunrisers Hyderabad IPL 2024 Match First innings Report

ಮೊದಲು ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಆಹ್ವಾನದ ಮೇರೆಗೆ ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ ಆರಂಭಿಸಿತು. ಹೈದರಾಬಾದ್‌ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅರ್ಧಶತಕದ ಜೊತೆಯಾಟವಾಡಿದರು. ಬಳಿಕ 11 ರನ್‌ ಗಳಿಸಿದ್ದ ಅಭಿಷೇಕ್‌ ಶರ್ಮಾ, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

ನಂತರ ಮೂರನೇ ಕ್ರಮಾಂಕದಲ್ಲಿ ಬಂದ ಮಯಾಂಕ್‌ ಅಗರ್ವಾಲ್‌ ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಕೇವಲ 5 ರನ್‌ ಗಳಿಸಿ ಅನ್ಶುಲ್ ಕಾಂಬೋಜ್ ಬೌಲಿಂಗ್‌ನಲ್ಲಿ ಮಯಾಂಕ್‌ ಅಗರ್ವಾಲ್‌ ಔಟ್‌ ಆದರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಬಂದ ನಿತೀಶ್‌ ರೆಡ್ಡಿ ಮತ್ತು ಟ್ರಾವಿಸ್ ಹೆಡ್ ನಿಧಾನವಾಗಿ ರನ್‌ ಗಳಿಸಲು ಮುಂದಾದರು.

ಆದರೆ 30 ಎಸೆತಗಳಲ್ಲಿ 7 ಬೌಂಡರಿ ಹಾಗು 1 ಸಿಕ್ಸರ್‌ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಟ್ರಾವಿಸ್ ಹೆಡ್ (48) ಪಿಯೂಷ್ ಚಾವ್ಲಾ ಅವರಿಗೆ ವಿಕೆಟ್‌ ಒಪ್ಪಿಸಿದರು. ಟ್ರಾವಿಸ್ ಹೆಡ್ ಹಿಂದೆಯೇ ನಿತೀಶ್‌ ರೆಡ್ಡಿ (20) ಕೂಡ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ನಲ್ಲಿ ಔಟ್‌ ಆಗುವ ಮೂಲಕ ಹೊರ ನಡೆದರು.

MI vs SRH Match Mumbai Indians vs Sunrisers Hyderabad IPL 2024 Match First innings Report

ಇನ್ನು ಕಳೆದ ಪಂದ್ಯಗಳಿಂದ ಮಂಕಾಗಿರುವ ಹೆನ್ರಿಚ್ ಕ್ಲಾಸೆನ್ ಸಹಾ ಈ ಬಾರಿ ಮತ್ತೆ ನಿರಾಸೆ ಮೂಡಿಸಿದರು. ಕೇವಲ 2 ರನ್‌ ಹೊಡೆದು ಪಿಯೂಷ್ ಚಾವ್ಲಾ ಬೌಲಿಂಗ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಔಟ್‌ ಆದರು. ಸಂಕಷ್ಟದಲ್ಲಿದ ಹೈದರಾಬಾದ್‌ ತಂಡಕ್ಕೆ ಆಸರೆಯಾಗುವ ಭರವಸೆ ನೀಡಿದ ಶಹಬಾಜ್ ಅಹ್ಮದ್ (10) ಮತ್ತು ಮಾರ್ಕೊ ಜಾನ್ಸೆನ್ (17) ಅವರನ್ನು ಒಂದೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಔಟ್‌ ಮಾಡಿ ಹೊರ ಕಳುಹಿಸಿದರು

ಬಳಿಕ ಅಬ್ದುಲ್ ಸಮದ್ ಕೂಡ ಕೇವಲ 3 ರನ್‌ ಗಳಿಸಿ ಪಿಯೂಷ್‌ ಚಾವ್ಲಾ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಕೊನೆಯಲ್ಲಿ ಕ್ರೀಸ್‌fಗೆ ಬಂದ ಹೈದರಾಬಾದ್‌ ನಾಯಕ ಪ್ಯಾಟ್‌ ಕಮ್ಮಿನ್ಸ್ ಬಿರುಸಿನ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಕೇವಲ 17 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ ಅಜೇಯ 35 ರನ್‌ ಹೊಡೆದು ತಂಡದ ಮೊತ್ತವನ್ನು ಪ್ಯಾಟ್‌ ಕಮ್ಮಿನ್ಸ್ ಹೆಚ್ಚಿಸಿದರು. ಜೊತೆಗೆ ಸನ್ವೀರ್ ಸಿಂಗ್ ಅಜೇಯ 8 ರನ್‌ ಗಳಿಸಿದರು.

ಮುಂಬೈ ಪರ ಕಳೆದ ಪಂದ್ಯದಂತೆ ಈ ಬಾರಿಯೂ ಉತ್ತಮ ಬೌಲಿಂಗ್‌ ಪ್ರದರ್ಶನ ಮೂಡಿ ಬಂತು. ಹಾರ್ದಿಕ್‌ ಪಾಂಡ್ಯ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್‌ ಉರಳಿಸಿದರೆ, ಅನ್ಶುಲ್ ಕಾಂಬೋಜ್ ಹಾಗು ಜಸ್ಪ್ರೀತ್ ಬುಮ್ರಾ 1 ವಿಕೆಟ್‌ ಪಡೆದುಕೊಂಡರು.

Story first published: Monday, May 6, 2024, 21:33 [IST]
Other articles published on May 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+