For Quick Alerts
ALLOW NOTIFICATIONS  
For Daily Alerts
 

MI vs SRH IPL 2024 : ಮುಂಬೈಗೆ ಗೆಲುವು ತಂದು ಕೊಟ್ಟ ಸೂರ್ಯಕುಮಾರ್‌ ಯಾದವ್; ಕಮ್ಮಿನ್ಸ್‌ ಪಡೆಗೆ ಸೋಲು

ಮೇ 6 ಸೋಮವಾರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ಎದುರು ಮುಂಬೈ ಇಂಡಿಯನ್ಸ್‌ (ಎಂಐ) ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಪಂದ್ಯದ ಸೋಲಿನ ಸೇಡನ್ನು ಮುಂಬೈ ತೀರಿಸಿಕೊಂಡಿದೆ.

ಹೈದರಾಬಾದ್‌ ವಿರುದ್ಧ ಸೂರ್ಯಕುಮಾರ್‌ ಯಾದವ್‌ ಅಬ್ಬರದ ಶತಕ ಸಿಡಿಸಿ ಮುಂಬೈಗೆ ಗೆಲುವು ತಂದು ಕೊಟ್ಟರು. ಹೀಗಾಗಿ ಹೈದರಾಬಾದ್‌ ನೀಡಿದ 174 ರನ್‌ ಗುರಿಯನ್ನು ಬೆನ್ನಟ್ಟಿದ್ದ‌ ಮುಂಬೈ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 17.2 ಓವರ್‌ಗಳಲ್ಲಿ ಜಯ ದಾಖಲಿಸಿತು.

{image-mumbai-indians-win-against-sunrisers-hyderabad1-1715018116.jpg kannada.mykhel.com

ಹೈದರಾಬಾದ್‌ ಎದುರು ಎರಡನೇ ಇನ್ನಿಂಗ್ಸ್‌ ಶುರು ಮಾಡಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಘಾತ ಅನುಭವಿಸಿತು. ಇಶಾನ್‌ ಕಿಶನ್‌ 9 ರನ್‌ಗಳಿಸಿ ಮಾರ್ಕೊ ಜಾನ್ಸೆನ್ ಬೌಲಿಂಗ್‌ನಲ್ಲಿ ಔಟ್‌ ಆದರು. ಬಳಿಕ ರೋಹಿತ್‌ ಶರ್ಮಾ ಕೂಡ ಕೇವಲ 5 ರನ್‌ಗೆ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಇನ್ನು ಮೂರನೇ ಕ್ರಮಾಂಕದಲ್ಲಿ ಬಂದ ನಮನ್ ಧೀರ್ ಸಹಾ ಶೂನ್ಯಕ್ಕೆ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಔಟ್‌ ಆಗಿ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಮುಂಬೈ 31 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಒಂದಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಹೈದರಾಬಾದ್‌ ಬೌಲರ್ಸ್‌ ಅನ್ನು ಬೆಂಡೆತ್ತಿದರು. ಸೂರ್ಯಕುಮಾರ್‌ ಯಾದವ್‌ ಮೈದಾನದ ಮೂಲೆ ಮೂಲೆಗೆ ಬೌಂಡರಿ, ಸಿಕ್ಸರ್‌ ಬಾರಿಸಿದರು.

ಸೂರ್ಯಕುಮಾರ್‌ ಯಾದವ್‌ ಎದರುಸಿದ 51 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 102* ಶತಕ ಹೊಡೆದು ಸಂಭ್ರಮಿಸಿದರು. ಇನ್ನೊಂದೆಡೆ ಸೂರ್ಯಕುಮಾರ್‌ ಯಾದವ್‌ ಅವರಿಗೆ ಸಾಥ್‌ ನೀಡಿದ ತಿಲಕ್‌ ವರ್ಮಾ ಅಜೇಯ 37 ರನ್‌ ಹೊಡೆದು ಮುಂಬೈ ಗೆಲುವಿಗೆ ಶ್ರಮವಹಿಸಿದರು. ಹೈದರಾಬಾದ್‌ ಪರ ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

Story first published: Monday, May 6, 2024, 23:25 [IST]
Other articles published on May 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+