Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಮುಂಬೈ, ಯುಪಿ ಬಿಗ್ ಫೈಟ್‌: ಪಂದ್ಯ ನಡೆಯುವ ಸಮಯ, ನೇರ ಪ್ರಸಾರದ ಮಾಹಿತಿ

ನವಿ ಮುಂಬೈ: ಹ್ಯಾಟ್ರಿಕ್‌ ಸೋಲಿನ ಆಘಾತ ಅನುಭವಿಸಿರುವ ಯುಪಿ ವಾರಿಯರ್ಸ್‌ ಹಾಗೂ ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿರುವ ಮುಂಬೈ ಇಂಡಿಯನ್ಸ್ ತಂಡಗಳು ಹೋರಾಟ ನಡೆಸಲಿವೆ. ಅನುಭವಿ ನಾಯಕರಾದ ಹರ್ಮನ್ ಪ್ರಿತ್ ಕೌರ್ ಹಾಗೂ ಮೆಗ್‌ ಲ್ಯಾನಿಂಗ್‌ ಲೀಗ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮೊದಲ ಗೆಲುವಿನ ನಗೆ ಬೀರಲು ಯುಪಿ ವಾರಿಯರ್ಸ್‌ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಯುಪಿ ವಾರಿಯರ್ಸ್ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಮುಂಬೈ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಸೋಲು, ಎರಡು ಗೆಲುವು ಕಂಡಿದ್ದು, ನಾಲ್ಕು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳಲ್ಲಿ ಸ್ಟಾರ್‌ ಆಟಗಾರ್ತಿಯರು ಇದ್ದಾರೆ. ಹೀಗಾಗಿ ಲೀಗ್‌ನ 8ನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

MI vs UPW Match Time Live Streaming Details and Probable Playing XI of WPL 8th Match

ಮುಂಬೈ ತಂಡದಲ್ಲಿರುವ ಹ್ಯಾಲಿ ಮ್ಯಾಥ್ಯೂಸ್, ಹರ್ಮನ್‌ಪ್ರೀತ್ ಕೌರ್ ತಮ್ಮ ನೈಜ ಆಟವನ್ನು ಆಡಿ ತಂಡಕ್ಕೆ ನೆರವಾಗಬೇಕಿದೆ. ಈ ಹಿಂದಿನ ಪಂದ್ಯದಲ್ಲಿ ಹರ್ಮನ್ ಪ್ರೀತ್‌ ಕೌರ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಇವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಅಮೆಲಿಯಾ ಕೆರ್, ಸಜೀವನ್ ಸಜನಾ ತಮ್ಮ ಮೇಲೆ ತಂಡ ಇಟ್ಟ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಆಲ್‌ರೌಂಡರ್‌ ಅಮಂಜೋತ್ ಕೌರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ. ಬೌಲರ್‌ಗಳು ಕರಾರುವಾಕ್‌ ದಾಳಿಯನ್ನು ಸಂಘಟಿಸಿ ಮಿಂಚಬೇಕಿದೆ.

ಮುಂಬೈ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ನಿಕೋಲಾ ಕ್ಯಾರಿ, ಹ್ಯಾಲಿ ಮ್ಯಾಥ್ಯೂಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂನಂ ಖೆಮ್ನರ್, ಸಜೀವನ್ ಸಜನಾ, ಗುಣಲನ್ ಕಮಲಿನಿ (ವಿಕೆಟ್ ಕೀಪರ್), ಅಮಂಜೋತ್ ಕೌರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್ ಮತ್ತು ತ್ರಿವೇಣಿ ವಸಿಷ್ಠ.

MI vs UPW Match Time Live Streaming Details and Probable Playing XI of WPL 8th Match

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಮೆಗ್‌ ಲ್ಯಾನಿಂಗ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ತಂಡದ ಸ್ಟಾರ್ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರ ಕ್ಷಮತೆಯನ್ನು ಸರಿಯಾಗಿ ಬಳಸಿಕೊಳ್ಳುವ ಅನಿವಾರ್ಯತೆ ಇದೆ. ಫೋಬ್ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಶ್ವೇತಾ ಸೆಹ್ರಾವತ್ ಸ್ಥಿರ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ. ಆಶಾ ಶೋಭನಾ, ಸೋಫಿ ಎಕ್ಲೆಸ್ಟೋನ್, ಕ್ರಾಂತಿ ಗೌಡ್ ಬಿಗುವಿನ ದಾಳಿ ತಂಡಕ್ಕೆ ಆಧಾರವಾಗಬೇಕಿದೆ.

ಯುಪಿ ವಾರಿಯರ್ಸ್ ಸಂಭಾವ್ಯ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಕಿರಣ್ ನವಗಿರೆ, ಫೋಬ್ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಕ್ಲೋಯ್ ಟ್ರಯಾನ್, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಆಶಾ ಶೋಭನಾ, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ ಮತ್ತು ಕ್ರಾಂತಿ ಗೌಡ್.

ಪಿಚ್‌ ಹೇಗಿದೆ?

ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯ ಪಿಚ್ ಸಾಮಾನ್ಯವಾಗಿ ಸಮತೋಲಿತವಾಗಿದ್ದು, ಇದು ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಬ್ಬರಿಗೂ ನೆರವು ನೀಡುತ್ತದೆ. ಸಾಮಾನ್ಯವಾಗಿ 170-180 ರನ್‌ಗಳ ಮೊತ್ತವನ್ನು ಉತ್ತಮ ಸ್ಕೋರ್ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ.

ಪಂದ್ಯ ಪ್ರಸಾರವಾಗುವುದು ಎಲ್ಲಿ?

ಯುಪಿ ಹಾಗೂ ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಆರಂಭವಾಗಲಿದೆ. ಇನ್ನು ಆನ್‌ಲೈನಲ್ಲಿ ಈ ಪಂದ್ಯವನ್ನು ಜಿಯೋ ಹಾಟ್‌ ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಪಂದ್ಯ ಆರಂಭವಾಗುವ ಸಮಯ ಯಾವಾಗ?

ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಟಾಸ್‌ ಪಂದ್ಯಕ್ಕೆ ಅರ್ಧಗಂಟೆ ಮುನ್ನ ನಡೆಯಲಿದೆ.

Story first published: Thursday, January 15, 2026, 9:47 [IST]
Other articles published on Jan 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+