Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌, ಸ್ಯಾಮ್‌ ಕಾನ್‌ಸ್ಟಾಸ್‌ ವಿವಾದ: ಕೊಹ್ಲಿ ಬೆನ್ನಿಗೆ ನಿಂತ ಆಸೀಸ್ ಮಾಜಿ ಆಟಗಾರ

ಇತ್ತೀಚಿಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲ ಹಾಗೂ ಆಸೀಸ್ ತಂಡದ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್‌ ನಡುವೆ ಈ ಪಂದ್ಯದ ವೇಳೆ ವಿವಾದ ನಡೆಯಿತು. ಈ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟ್‌ ಆಟಗಾರರು ಬೇರೆ ಬೇರೆ ವ್ಯಾಖ್ಯಾನ ನೀಡಿದ್ದಾರೆ. ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಕೂಡ ಈ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್‌ನಲ್ಲಿ ಸ್ಯಾಮ್‌ ಕಾನ್‌ಸ್ಟಾಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಪದಾರ್ಪಣಾ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಇವರು ಎಲ್ಲರ ಚಿತ್ತ ಕದ್ದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳನ್ನು ದಂಡಿಸಿದ ಇವರು ಅಬ್ಬರಿಸಿದರು. ಮೊದಲ ಇನಿಂಗ್ಸ್‌ನ 10ನೇ ಓವರ್‌ ಮುಗಿಯುತ್ತಿದ್ದಂತೆ ಫೀಲ್ಡರ್‌ಗಳು ಸಹ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುತ್ತಿದ್ದರು. ಆಗ ವಿರಾಟ್ ಕೊಹ್ಲಿ, ಸ್ಯಾಮ್‌ ಅವರ ಭುಜಕ್ಕೆ ಡಿಕ್ಕೆ ಹೊಡೆದರು. ಬಳಿಕ ಫೀಲ್ಡ್‌ ಅಂಪೈರ್ ಹಾಗೂ ಟೀಮ್ ಇಂಡಿಯಾ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Michael Clarke Backs Virat Kohli in Shoulder Collision Row with Sam Constas

ಈ ವಿವಾದ ದೊಡ್ಡದಾಗುತ್ತಿದ್ದಂತೆ ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಆರಂಭಿಸಿದರು. ವಿರಾಟ್‌ ಕೊಹ್ಲಿ ಅವರ ನಡೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರರೇ ಬೇಸರ ವ್ಯಕ್ತ ಪಡಿಸಿದರು. ಈಗ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್‌ ಕ್ಲಾರ್ಕ್‌ ವಿರಾಟ್‌ ಬೆನ್ನಿಗೆ ನಿಂತಿದ್ದಾರೆ.


ಕ್ಲಾರ್ಕ್ ಹೇಳಿದ್ದೇನು?

ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕಾನ್‌ಸ್ಟಾಸ್ ವಿವಾದದ ಕುರಿತು ಮಾತನಾಡಿರುವ ಮೈಕಲ್, "ವಿರಾಟ್ ಕೊಹ್ಲಿ ತಂಡದ ಪರವಾಗಿ ನಿಲ್ಲುವ ಪ್ಲೇಯರ್. ಅವರು ಹೋರಾಟದ ಮನೋಭಾವದಿಂದ ಅವರು ಎಂದಿಗೂ ಹಿಂದೆ ಸರಿಯುವುದಿಲ್ಲ. ಬುಮ್ರಾ ಅವರಂತಹ ಲೆಜೆಂಡರಿ ಬೌಲರ್‌ಗೆ ಸರಿಯಾಗಿ ಗೌರವ ನೀಡದೇ ಇರುವುದು ಕೊಹ್ಲಿ ಅವರನ್ನು ಕೆರಳಿಸಿರಬಹುದು ಎಂಬುದೇ ನನ್ನ ಭಾವನೆ.

ಮೆಲ್ಬೋರ್ನ್‌ ನಡೆದ ವಿವಾದ ಬಳಿಕ ವಿರಾಟ್‌ರನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ದಿನಾದಟ ಬಳಿಕ ವಿರಾಟ್‌, ಸ್ಯಾಮ್‌ ಕಾನ್‌ಸ್ಟಾಸ್‌ ಅವರೊಂದಿಗೆ ಮಾತನಾಡುತ್ತಾರೆ ಎಂಬುದು ನನ್ನ ಭಾವನೆ. ವಿರಾಟ್ ಅವರ ಉದ್ದೇಶ ತಪ್ಪಾಗಿಲ್ಲ ಎಂದು ಮೈಕೆಲ್ ಕ್ಲಾರ್ಕ್ ತಿಳಿಸಿದ್ದಾರೆ.

ಸ್ಯಾಮ್ ಕಾನ್‌ಸ್ಟಾಸ್ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಬುಮ್ರಾ ಎಸೆತದಲ್ಲಿ ಎರಡು ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು. ಇವರು 65 ಎಸೆತಗಳಲ್ಲಿ 92.30 ಸ್ಟ್ರೈಕ್ ರೇಟ್‌ನಲ್ಲಿ 60 ರನ್ ಸಿಡಿಸಿದರು. ಇದರಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸೇರಿವೆ. ಎರಡನೇ ಇನಿಂಗ್ಸ್‌ನಲ್ಲಿ 8 ರನ್‌ ಸೇರಿಸಿ ನಿರಾಸೆ ಅನುಭವಿಸಿದರು.

Story first published: Wednesday, January 1, 2025, 12:01 [IST]
Other articles published on Jan 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+